ರಶ್ಮಿಕಾಗೆ ಹೊಡಿತು ಲಾಟರಿ: ಶಾಹೀದ್ ಕಪೂರ್ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ!
Recommended Video
ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಹವಾ ಮಾಡುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ವಿಮಾನ ಹತ್ತಲಿದ್ದಾರೆ. ಕನ್ನಡದಲ್ಲಿ ಜರ್ನಿ ಆರಂಭಿಸಿ, ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಆಫರ್ ಪಡೆದುಕೊಳ್ಳುತ್ತಿರುವ ರಶ್ಮಿಕಾ ಈಗ ಬಿಗ್ ಇಂಡಸ್ಟ್ರಿ ಕಡೆ ಮುಖ ಮಾಡುತ್ತಿದ್ದಾರೆ.
ಬಾಲಿವುಡ್ ನಟ ಶಾಹೀದ್ ಕಪೂರ್ ಅಭಿನಯದ ಚಿತ್ರವೊಂದಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗುವ ಸಾಧ್ಯತೆ ಇದೆ. ಇದು ತೆಲುಗಿನ ಸೂಪರ್ ಹಿಟ್ ಚಿತ್ರದ ರೀಮೇಕ್ ಆಗಿದ್ದು, ಅದನ್ನ ಬಾಲಿವುಡ್ ನಲ್ಲಿ ಮಾಡಲಾಗುತ್ತಿದೆ.
ಸೌತ್ ನಿಂದ ರೀಮೇಕ್ ಆಗುತ್ತಿರುವ ಚಿತ್ರಕ್ಕೆ ಸೌತ್ ಸುಂದರಿಯನ್ನ ಕರೆತರುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಮತ್ತು ನಿರ್ಮಾಪಕರು. ಅಷ್ಟಕ್ಕೂ, ರಶ್ಮಿಕಾಗೆ ಆಫರ್ ಬಂದಿರುವ ಆ ಹಿಂದಿ ಚಿತ್ರ ಯಾವುದು?

ಶಾಹೀದ್ ಕಪೂರ್ ಚಿತ್ರದಲ್ಲಿ ರಶ್ಮಿಕಾ
'ಕಬೀರ್ ಸಿಂಗ್' ಅಂತಹ ಬ್ಲ್ಯಾಕ್ ಬಸ್ಟರ್ ಚಿತ್ರ ನೀಡಿ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ಶಾಹೀದ್ ಕಪೂರ್ ಅವರ ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ರಶ್ಮಿಕಾ ಅವರನ್ನ ನಾಯಕಿಯನ್ನಾಗಿಸಿದರೆ ಚೆನ್ನಾಗಿರುತ್ತೆ ಎಂದು ಚಿತ್ರತಂದ ನಿರ್ಧರಿಸಿದೆಯಂತೆ.

ಶ್ರದ್ಧಾ ಶ್ರೀನಾಥ್ ಮಾಡಿದ್ದ ಪಾತ್ರಕ್ಕೆ ರಶ್ಮಿಕಾ
ಶಾಹೀದ್ ಕಪೂರ್ ಅವರ ಮುಂದಿನ ಸಿನಿಮಾ ತೆಲುಗು ಸೂಪರ್ ಸಿನಿಮಾ 'ಜೆರ್ಸಿ' ರೀಮೇಕ್. ತೆಲುಗಿನಲ್ಲಿ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ಈಗ ನಾನಿ ಪಾತ್ರವನ್ನ ಶಾಹೀದ್ ಮಾಡಲಿದ್ದಾರೆ. ಶ್ರದ್ಧಾ ಮಾಡಿದ್ದ ಪಾತ್ರಕ್ಕೆ ರಶ್ಮಿಕಾ ನಾಯಕಿಯಾಗುವ ಸಾಧ್ಯತೆ ಇದೆ.

ಪ್ಲಾನ್ ಮಾಡಲಾಗಿದೆ ಅಷ್ಟೇ
ದಕ್ಷಿಣ ಭಾರತದ ಖ್ಯಾತ ಚಿತ್ರ ವಿಶ್ಲೇಷಕ ರಮೇಶ ಬಾಲ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಜೆರ್ಸಿ ರೀಮೇಕ್ ನಲ್ಲಿ ಶಾಹೀದ್ ಕಪೂರ್ ಎದುರು ರಶ್ಮಿಕಾ ಅವರನ್ನ ಕರೆತರುವ ಪ್ಲಾನ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಆದರೆ, ಈ ಸುದ್ದಿ ಇನ್ನು ಅಧಿಕೃತವಾಗಿಲ್ಲ.

ರಶ್ಮಿಕಾ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ
ಈಗಷ್ಟೇ 'ಡಿಯರ್ ಕಾಮ್ರೇಡ್' ಮುಗಿಸಿರುವ ರಶ್ಮಿಕಾ, ಮಹೇಶ್ ಬಾಬು ಜೊತೆ 'ಸರಿಲೇರು ನೀಕೇವರು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಧ್ರುವ ಸರ್ಜಾ ಜೊತೆ 'ಪೊಗರು' ಮಾಡ್ತಿದ್ದಾರೆ. ಅಲ್ಲು ಅರ್ಜುನ್ ಅವರ 20ನೇ ಚಿತ್ರಕ್ಕೆ ರಶ್ಮಿಕಾ ನಾಯಕಿ. ತಮಿಳು ನಟ ಕಾರ್ತಿ ಅಭಿನಯದ 'ಸುಲ್ತಾನ್' ಸಿನಿಮಾದಲ್ಲಿ ರಶ್ಮಿಕಾ ಹೀರೋಯಿನ್. ಜೊತೆಗೆ ತೆಲುಗು ನಟ ನಿತೀನ್ ಜೊತೆಯಲ್ಲಿ 'ಭೀಷ್ಮ' ಎಂಬ ಚಿತ್ರವೂ ಮಾಡುತ್ತಿದ್ದಾರೆ. ಇದೀಗ, ಬಾಲಿವುಡ್ ನಿಂದ ಮೊದಲ ಆಫರ್ ಇದಾಗಿರಬಹುದು.


Click it and Unblock the Notifications











