ರಶ್ಮಿಕಾ ಮಂದಣ್ಣಗೋಸ್ಕರ ತಮ್ಮ 'ಸಿಕಂದರ್' ಚಿತ್ರದ ಚಿತ್ರೀಕರಣ ಸ್ಥಗಿತಗೊಳಿಸಿದ ಸಲ್ಮಾನ್ ಖಾನ್...!

ಚಿತ್ರರಂಗದಲ್ಲಿದ್ದವರಿಗೆ ಯಾರ ಬಗ್ಗೆ ಚಿಂತೆ ಇರಲಿ ಇಲ್ಲದಿರಲಿ ತಮ್ಮ ದೇಹದ ತೂಕದ ಕುರಿತು ತುಂಬಾ ಚಿಂತೆ ಇರುತ್ತೆ. ಹೀಗಾಗಿಯೇ ಚಿತ್ರದ ಚಿತ್ರೀಕರಣ ಇರಲಿ, ಇಲ್ಲದಿರಲಿ.. ಹಬ್ಬ ಹರಿದಿನಗಳನ್ನು ಹೊರತು ಪಡಿಸಿದರೆ ಬಹುತೇಕ ಜಿಮ್‌ನಲ್ಲಿಯೇ ಇವರು ಕಾಣಿಸಿಕೊಳ್ಳುತ್ತಾರೆ. ಬೆವರು ಸುರಿಸುತ್ತಾರೆ.

ಇನ್ನು ತಮ್ಮ ಪ್ರತಿಯೊಂದು ಚಿತ್ರದಲ್ಲಿ ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳುವ ಸಂಪ್ರದಾಯವನ್ನು ರೂಢಿಸಿಕೊಂಡ ಕೆಲವರು ಅಗತ್ಯಕ್ಕಿಂತ ತುಸು ಹೆಚ್ಚೇ ವರ್ಕೌಟ್ ಮಾಡಲು ಮುಂದಾಗುತ್ತಾರೆ. ಕೆಲವೊಮ್ಮೆ ಈ ಅತಿಯಾದ ಕಸರತ್ತು ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಇನ್ನೂ ಕೆಲವೊಮ್ಮೆ ಈ ವರ್ಕೌಟ್‌ದಿಂದ ಗಾಯಗಳಾಗುತ್ತವೆ. ಇದಕ್ಕೆ ರಶ್ಮಿಕಾ ಮಂದಣ್ಣ ಸದ್ಯದ ಉದಾಹರಣೆ.

Rashmika Mandanna Injured in Gym Sikandar Shoot with Salman Khan Temporarily Delayed

ಹೌದು, ಪುಷ್ಪ 2 ಚಿತ್ರದ ಅತ್ಯದ್ಭುತ ಗೆಲುವನ್ನು ಇನ್ನೂ ಸಂಭ್ರಮಿಸುತ್ತಿರುವ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವರ್ಕೌಟ್ ಮಾಡುವ ಸಮಯದಲ್ಲಿ ಗಾಯ ಮಾಡಿಕೊಂಡಿದ್ದಾರೆ. ಹೀಗೊಂದು ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಕೇಳಿ ಬರುತ್ತಿದೆ. ನಿಜಾ. ರಶ್ಮಿಕಾ ಮಂದಣ್ಣ ತಮಗೆ ಆದ ಈ ಗಾಯದ ಕುರಿತು ವಿಚಾರವನ್ನು ಹಂಚಿಕೊಂಡಿಲ್ಲ. ಯಾವುದೇ ಫೋಟೊವನ್ನು ಕೂಡ ಹಂಚಿಕೊಂಡಿಲ್ಲ. ಆದರೆ.. ರಶ್ಮಿಕಾ ಮಂದಣ್ಣ ಕಳೆದ ಕೆಲ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಜನವರಿ ಒಂದರ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಯಾವ ಫೋಸ್ಟ್‌ನ್ನೂ ಶೇರ್ ಮಾಡಿಲ್ಲ.

ಇದರಿಂದ ಅನೇಕರಲ್ಲಿನ ಈ ಅನುಮಾನ ಇನ್ನೂ ಹೆಚ್ಚಾಗಿದೆ. ಇದೆಲ್ಲದಕ್ಕೆ ಪೂರಕವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಆದ ಈ ಗಾಯದಿಂದ ಸಲ್ಮಾನ್ ಖಾನ್ ತಮ್ಮ ಸಿಕಂದರ್ ಚಿತ್ರದ ಚಿತ್ರೀಕರಣವನ್ನು ನಿಲ್ಲಿಸಿದ್ಧಾರೆ, ಮುಂದೂಡಿದ್ದಾರೆ ಎನ್ನುವ ವರದಿಯನ್ನು ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿವೆ. ಇಂದು ಸಿಕಂದರ್ ಚಿತ್ರದ ಚಿತ್ರೀಕರಣ ಶುರುವಾಗಬೇಕಿತ್ತು ಆದರೆ ರಶ್ಮಿಕಾ ಅವರಿಗಾದ ಗಾಯದಿಂದ ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣವನ್ನು ರದ್ದು ಮಾಡುವಂತೆ ಹೇಳಿದ್ದಾರೆ ಎಂದು ವರದಿಯನ್ನು ಮಾಡಿವೆ.

ಕೇವಲ ಸಿಕಂದರ್ ಮಾತ್ರವಲ್ಲ ಆಯುಶ್ಮಾನ್ ಖುರಾನ ಅಭಿನಯದ ಥಮ್ಮಾ ಚಿತ್ರದ ಚಿತ್ರೀಕರಣವನ್ನು ಕೂಡ ರಶ್ಮಿಕಾ ಅವರಿಂದ ಚಿತ್ರತಂಡ ಮುಂದೂಡಿದೆ ಎಂಬ ಮಾತು ಕೂಡ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇನ್ನು ರಶ್ಮಿಕಾ ಮಂದಣ್ಣ ಅವರಿಗಾದ ಗಾಯ ಎಷ್ಟು ಗಂಭೀರವಾದದ್ದು ಎನ್ನುವುದು ಇನ್ನೂ ಗೊತ್ತಾಗದಿದ್ದರೂ ರಶ್ಮಿಕಾ ಮಂದಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಸಹಜವಾಗಿ ರಶ್ಮಿಕಾ ಮಂದಣ್ಣ ಅವರ ಕುರಿತು ಈ ನ್ಯೂಸ್ ಕೇಳಿ ಅವರ ಅಸಂಖ್ಯಾತ ಅಗಣಿತ ಅಭಿಮಾನಿಗಳು ಚಿಂತಾಕ್ರಾಂತರಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಆರೋಗ್ಯದ ಕುರಿತು ನಿಖರವಾದ ಸುದ್ದಿಯನ್ನು ತಿಳಿದುಕೊಳ್ಳಲು ಹರಸಾಹಸವನ್ನು ಮಾಡುತ್ತಿದ್ದಾರೆ.

ಇನ್ನುಳಿದಂತೆ ಇತ್ತೀಚೆಗಷ್ಟೇ ಇಂಡಿಯಾ ಟುಡೇಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಅವರನ್ನು ಹಾಡಿ ಹೊಗಳಿದ್ದರು. ಸರಳತೆಯನ್ನು ಕೊಂಡಾಡಿದ್ದರು. ಚಿತ್ರೀಕರಣ ನಡೆಯುವಾಗ ನನ್ನ ಆರೋಗ್ಯ ಸ್ವಲ್ಪ ಕೈ ಕೊಟ್ಟಿತ್ತು. ಅದ್ಹೇಗೋ ಈ ವಿಚಾರ ಸಲ್ಮಾನ್ ಖಾನ್ ಅವರ ಕಿವಿಯನ್ನು ಕೂಡ ತಲುಪಿತು. ಕೂಡಲೇ ನನ್ನ ಬಳಿ ಬಂದ ಸಲ್ಮಾನ್ ಖಾನ್ ನನ್ನ ಆರೋಗ್ಯವನ್ನು ವಿಚಾರಿಸಿದರು. ಇಷ್ಟೇ ಅಲ್ಲ ಅಲ್ಲಿದ್ದವರಿಗೆ ಬೆಚ್ಚನೆಯ ನೀರು ಮತ್ತು ಊಟವನ್ನು ಕೂಡ ತರಲು ಹೇಳಿದರು ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಈ ದೇಶದ ಬಹುದೊಡ್ಡ ಸೂಪರ್ ಸ್ಟಾರ್ ಅಂತಹ ವ್ಯಕ್ತಿ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ, ನಿಮ್ಮಲ್ಲಿ ವಿಶೇಷವಾದ ಭಾವನೆ ಮೂಡಿಸುತ್ತಾರೆ ಅದು ಅವರ ಹೃದಯವಂತಿಕೆಗೆ ಕೈಗನ್ನಡಿ ಎಂದು ಹೇಳಿದ್ದರು ರಶ್ಮಿಕಾ ಮಂದಣ್ಣ.

More from Filmibeat

Read more about: rashmika mandanna gym bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X