"ನನಗಿಂತ ಸುಂದರವಾಗಿರುವವರು, ಪ್ರತಿಭಾವಂತರು ಸಾಕಷ್ಟು ಜನ ಇದ್ದಾರೆ, ಆದ್ರೆ": ರಶ್ಮಿಕಾ
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌ನಲ್ಲೂ ಭಾರೀ ಡಿಮ್ಯಾಂಡ್ ಸೃಷ್ಟಿಸಿಕೊಂಡಿದ್ದಾರೆ. ಕಳೆದ ವರ್ಷ 'ಅನಿಮಲ್' ಚಿತ್ರದ ಗೀತಾಂಜಲಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ 'ಪುಷ್ಪ-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಕಥೆಗಳನ್ನು ಕೂಡ ಕೇಳುತ್ತಿದ್ದಾರೆ.
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಮೊದಲ ಪ್ರಯತ್ನದಲ್ಲೇ ಗೆದ್ದರು. 'ಕಿರಿಕ್ ಪಾರ್ಟಿ' ಬಳಿಕ ಕನ್ನಡದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ಚೆಲುವೆ ತೆಲುಗಿನ 'ಚಲೋ' ಚಿತ್ರದಲ್ಲಿ ನಟಿಸಿದರು. ಬಳಿಕ ಬಂದ 'ಗೀತಾಗೋವಿಂದಂ' ಸಿನಿಮಾ ಹಿಟ್ ಆಗಿ ಟಾಲಿವುಡ್‌ನಲ್ಲಿ ಭಾರೀ ಕ್ರೇಜ್ ಶುರುವಾಯಿತು.

'ಸರಿಲೇರು ನೀಕೆವ್ವರು', 'ಪುಷ್ಪ' ರೀತಿಯ ಸಿನಿಮಾಗಳು ತೆಲುಗಿನಲ್ಲಿ ಆಕೆಗೆ ಒಳ್ಳೆ ಹೆಸರು ತಂದುಕೊಡ್ತು. 'ಮಿಷನ್ ಮಜ್ನು' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದರು. ಆ ಸಿನಿಮಾ ಬಿಡುಗಡೆಗೂ ಮುನ್ನ ಅಮಿತಾಬ್ ಬಚ್ಚನ್ ಜೊತೆ 'ಗುಡ್‌ಬೈ' ಚಿತ್ರದಲ್ಲಿ ನಟಿಸೋಕೆ ಬುಲಾವ್ ಬಂತು. ಆ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ನಡುವೆ ತಮಿಳಿನಲ್ಲಿ 2 ಚಿತ್ರದಲ್ಲಿ ನಟಿಸಿ ಬಂದರು. ಬಳಿಕ ಬಂದ 'ಅನಿಮಲ್' ಬ್ಲಾಕ್‌ಬಸ್ಟರ್ ಹಿಟ್ ಆಯಿತು.
ರಶ್ಮಿಕಾ ಮಂದಣ್ಣ ಸಕ್ಸಸ್ ನೋಡಿ ಕೆಲವರು ಇದು ಅದೃಷ್ಟ. ಆಕೆಗಿಂತಲು ಸುಂದರವಾಗಿರುವವರು, ಟ್ಯಾಲೆಂಟ್ ಇರುವವರು ಸಾಕಷ್ಟು ಜನ ಇದ್ದಾರೆ. ಆಕೆ ಬರೀ ಲಕ್‌ನಿಂದ ಎಲ್ಲಾ ಇಂಡಸ್ಟ್ರಿಗಳಲ್ಲಿ ಕ್ರೇಜ್ ಸಂಪಾದಿಸಿದ್ದಾರೆ ಎನ್ನುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದಾರೆ. ನಾನು ಯಾವುದನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದುಕೊಂಡೆ ಅದೇ ನನ್ನ ಈ ಸಕ್ಸಸ್‌ಗೆ ಕಾರಣ ಎಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ""ನನಗಿಂತ ಸುಂದರವಾಗಿರುವವರು, ಪ್ರತಿಭಾವಂತರು ಸಾಕಷ್ಟು ಜನ ಇದ್ದಾರೆ ಎನ್ನುವುದು ನನಗೆ ಗೊತ್ತು. ಆದರೆ ನನಗೆ ಸಿಕ್ಕ ಅವಕಾಶಗಳಿಂದ ನಾನು ಇವತ್ತು ಈ ಸ್ಥಾನದಲ್ಲಿದ್ದೀನಿ. ಅದಕ್ಕೆ ನಾನು ಕೃತಜ್ಞಳು. ಜೀವನದಲ್ಲಿ ಸಿಗುವ ಯಾವುದೇ ಸಂತೋಷ ಅಥವಾ ನಿಮ್ಮ ವೃತ್ತಿಜೀವನದಲ್ಲಿ ನೀವು ಸಾಧಿಸುವ ಯಶಸ್ಸನ್ನು ಲಘುವಾಗಿ ಪರಿಗಣಿಸಬಾರದು. ಕಳೆದ ಕೆಲವು ವರ್ಷಗಳಿಂದ ನಾನು ಇದನ್ನು ಕಲಿತಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಇನ್ನು ರಶ್ಮಿಕಾ ಬಗ್ಗೆ ಸಾಕಷ್ಟು ಟೀಕೆ, ಟ್ರೋಲ್ ವ್ಯಕ್ತವಾಗುತ್ತಲೇ ಇರುತ್ತದೆ. ದಪ್ಪ ಚರ್ಮದವರಾದರೆ ಮಾತ್ರ ಇದನ್ನು ಸಹಿಸೋಕೆ ಸಾಧ್ಯ, ಇಲ್ಲದಿದ್ದರೆ ಕಷ್ಟವೇ? ಎನ್ನುವ ಪ್ರಶ್ನೆ "ನೀವು ಮಾತನಾಡಿದರೆ ಪ್ರಪಂಚ ಕೇಳುತ್ತದೆ. ಅದಕ್ಕೆ ಒಂದು ತೀರ್ಪು ಕೊಟ್ಟು, ಅದಕ್ಕೆ ಸಾಕಷ್ಟು ಟೀಕೆ, ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಇದು ಸಾಮಾನ್ಯ. ಆದರೆ ನೀವು ದಪ್ಪ ಚರ್ಮದವರಲ್ಲದಿದ್ದರೆ ಮಾನಸಿಕವಾಗಿ ಭಾವನಾತ್ಮಕವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಇದು ಬಹುತೇಕರಿಗೆ ಗೊತ್ತಿಲ್ಲ" ಎಂದು ರಶ್ಮಿಕಾ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ರಶ್ಮಿಕಾ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ಜನ ಟಿಕೆಟ್ ಖರೀದಿಸಿ ಸಿನಿಮಾ ನೋಡಲು ಬರ್ತಾರೆ. ನನ್ನನ್ನು ನೋಡಲು ಬರುವವರು ಥಿಯೇಟರ್‌ನಿಂದ ಹೊರಬರುವಾಗ ಸಂತೋಷ, ಹೆಮ್ಮೆ ಹೀಗೆ ಒಳ್ಳೆ ಅನುಭವದೊಂದಿಗೆ ಬರಬೇಕು. ಭಾವನಾತ್ಮಕವಾಗಿ ಪಾತ್ರಗಳು ಕನೆಕ್ಟ್ ಆಗಬೇಕು ಎನ್ನುವುದು ನನ್ನ ಬಯಕೆ. ನನ್ನ ಪ್ರೇಕ್ಷಕರಿಗೆ ಸಿನಿಮಾ ನಾಟಬೇಕು. ಆಗ ನನಗೆ ಸಮಾಧಾನ. ಮತ್ತೆ ಇಂತಹ ಮತ್ತಷ್ಟು ಸಿನಿಮಾ ಮಾಡಬೇಕು ಎನಿಸುತ್ತದೆ"
"ಕಿರಿಕ್ ಪಾರ್ಟಿ ಸಿನಿಮಾದಿಂದಲೂ ಇದ್ದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ಕಥೆಗಳ ಆಯ್ಕೆ ವಿಚಾರದಲ್ಲಿ ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ" ಎಂದು ರಶ್ಮಿಕಾ ಹೇಳಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ನಟಿಸಲು ಸಾಕಷ್ಟು ಜನ ನಟಿಯರು ಕಾಯುತ್ತಿದ್ದಾರೆ. ಆ ಸಾಲಿನಲ್ಲಿ ನಾನು ಇದ್ದೀನಿ. ಯಾವ ಹೀರೊ ಜೊತೆ ನಟಿಸಬೇಕು ಅಂತಿಲ್ಲ. ಕಥೆಗೆ ತಕ್ಕಂತೆ ನಿರ್ದೇಶಕರು ಕಲಾವಿದರನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.


Click it and Unblock the Notifications











