ಸಲ್ಮಾನ್‌ ಖಾನ್ ನಂತರ ಹಿಂದಿಯಲ್ಲಿ ಮತ್ತೊಬ್ಬ ಸ್ಟಾರ್‌ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ..!

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.

ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್.. ಟಾಲಿವುಡ್‌ನಿಂದ ಕಾಲಿವುಡ್.. ಕಾಲಿವುಡ್‌ನಿಂದ ಮರಳಿ ಟಾಲಿವುಡ್‌ಗೆ ಬಂದು ಆ ನಂತರ ಸೀದಾ ಬಾಲಿವುಡ್‌ ಗೆ ಹೋದ ರಶ್ಮಿಕಾ ಒಂದಾದ ಮೇಲೊಂದು ಅವಕಾಶ ಪಡೆಯುತ್ತಿದ್ದಾರೆ. ಸೂಪರ್ ಸ್ಟಾರ್‌ಗಳ ಜೊತೆ ತೆರೆಯನ್ನ ಹಂಚಿಕೊಳ್ಳುತ್ತಿದ್ದಾರೆ.

rashmika-mandanna-lands-another-bollywood-film-this-time-co-starring-with-ayushmann-khurrana

ಹಿಂದಿಯಲ್ಲಿ ಈಗಾಗ್ಲೇ ಗುಡ್ ಬೈ, ಮಿಶನ್ ಮಜ್ನು, ಚಾವಾ ಚಿತ್ರಗಳನ್ನ ಮಾಡಿರುವ ರಶ್ಮಿಕಾ, ಸಲ್ಮಾನ್ ಖಾನ್ ಜೊತೆ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಲ್ಮಾನ್ ಅಭಿನಯದ ಸಿಕಂದರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಮತ್ತೊಂದು ಹಿಂದಿ ಚಿತ್ರಕ್ಕೆ ಗ್ನೀನ್ ಸಿಗ್ನಲ್ ನೀಡಿದ್ದಾರೆ, ಬಾಲಿವುಡ್‌ನ ಪ್ರತಿಭಾವಂತ ಹೀರೋ ಆಯುಷ್ಮಾನ್ ಖುರಾನಾಗೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಮುಂಬೈನಲ್ಲಿ ಗುಲ್ಲಾಗಿದೆ.

ಈಗಾಗಲೇ ಸ್ತ್ರೀ.. ಬೇಡಿಯಾ.. ಮುಂಜ್ಯಾನಂತಹ ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಗೆದ್ದು, ಹಾರರ್ ವಿಭಾಗದಲ್ಲಿ ತಮ್ಮದೇ ಯುನಿವರ್ಸ್‌ನ ಸೃಷ್ಟಿಸುತ್ತಿರುವ ದಿನೇಶ್ ವಿಜ್ಜನ್ ಆಯುಷ್ಮಾನ್ ಕುರಾನಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಇನ್ನೂ ಯಾವುದೇ ಸ್ಟಾರ್‌ಗಳ ಸಹಾಯ ಇಲ್ಲದೇ, ಕೇವಲ ಗಟ್ಟಿ ಕಥೆ ಆಧಾರದ ಮೇಲೆ ತಮ್ಮ ಮುಂಜ್ಯಾ ಚಿತ್ರದ ಮೂಲಕ ಗೆದ್ದ ಆದಿತ್ಯ ಸತ್ಪೋದರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದ್ಹಾಗೇ ಆಯುಷ್ಮಾನ್ ಖುರಾನ ಮತ್ತು ರಶ್ಮಿಕಾ ಅಭಿನಯಿಸಲಿರುವ ಈ ಚಿತ್ರಕ್ಕೆ ವ್ಯಾಂಪೈರ್ಸ್‌ ಆಫ್ ವಿಜಯ್ ನಗರ ಎಂದು ಹೆಸರಿಡಲಾಗಿದೆ.

rashmika-mandanna-lands-another-bollywood-film-this-time-co-starring-with-ayushmann-khurrana

ಸದ್ಯಕ್ಕೆ ದಿನೇಶ್ ವಿಜ್ಜನ್ ತಮ್ಮ ಸ್ತ್ರೀ 2 ಚಿತ್ರದ ಬಿಡುಗಡೆಯ ಕೆಲಸದಲ್ಲಿದ್ದಾರೆ. ಇನ್ನೂ ಇತ್ತ ರಶ್ಮಿಕಾ ಮಂದಣ್ಣ ಪುಷ್ಪ 02 ಚಿತ್ರದ ಬಾಕಿ ಕೆಲಸ ಮುಗಿಸಿ, ಸಿಕಂದರ್ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದ್ದಾರೆ. ಆಯುಷ್ಮಾನ್ ಖುರಾನಾ ಸದ್ಯಕ್ಕೆ ಕರಣ್ ಜೋಹರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಆಯುಷ್ಮಾನ್ ಕೈಯಲ್ಲಿ ಬಾರ್ಡರ್ ಚಿತ್ರದ ಸಿಕ್ವೆಲ್ ಕೂಡ ಇದೆ. ಹೀಗಾಗಿ ಈ ವರ್ಷದ ಅಂತ್ಯಕ್ಕೆ ಈ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.ಉಳಿದಂತೆ ಚಿತ್ರದ ಉಳಿದ ಕಲಾವಿದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ

ಒಟ್ನಲ್ಲಿ ಕನ್ನಡ ಚಿತ್ರರಂಗದಿಂದ ಕಣ್ಮರೆಯಾಗಿ ತೆಲುಗು ಚಿತ್ರರಂಗದಲ್ಲಿ ಒಂದಾದ ಮೇಲೊಂದು ಸಿನಿಮಾ ಮಾಡಿದ ರಶ್ಮಿಕಾ ಇದೀಗ ಟಾಲಿವುಡ್‌ಗೂ ಟಾಟಾ ಹೇಳಿ ಬಾಲಿವುಡ್‌ನಲ್ಲಿಯೇ ಬಿಡಾರ ಹೂಡುವ ಲಕ್ಷಣ ಕಂಡು ಬರುತ್ತಿವೆ. ಒಂದಾದ ಮೇಲೊಂದು ಒಳ್ಳೇಯ ಅವಕಾಶಗಳು ರಶ್ಮಿಕಾ ಮಂದಣ್ಣ ಅವರನ್ನು ಅರಸಿ ಹೋಗುತ್ತಿವೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X