For Quick Alerts
  ALLOW NOTIFICATIONS  
  For Daily Alerts

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸ್ವಯಂವರದಲ್ಲಿ ಯಾರೆಲ್ಲಾ ಇರಬೇಕಂತೆ ಗೊತ್ತಾ?

  |

  ಭಾರತೀಯ ಚಿತ್ರರಂಗದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಹವಾ ಜೋರಾಗಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲೆಲ್ಲೂ ರೋಶ್ ಕ್ರೇಜ್ ನಡೀತಿದೆ. ಅಲ್ಲು ಅರ್ಜುನ್, ದಳಪತಿ ವಿಜಯ್, ಅಲ್ಲುಅರ್ಜುನ್, ರಣ್‌ಬೀರ್ ಕಪೂರ್‌ರಂತಹ ಸೂಪರ್ ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್‌ ಮಾಡಿ ಮೋಡಿ ಮಾಡುತ್ತಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ ಜೊತೆ 'ಗುಡ್‌ಬೈ' ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದು ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

  ಸಾನ್ವಿ ಸದ್ಯ 'ಗುಡ್‌ಬೈ' ಸಿನಿಮಾ ಪ್ರಮೋಷನ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ವಿಕಾಸ್ ಬೇಹ್ಲ್ ನಿರ್ದೇಶನದ ಈ ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಬಿಗ್‌ಬಿ ಹಾಗೂ ರಶ್ಮಿಕಾ ತಂದೆ ಮಗಳಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶುಕ್ರವಾರ ವಿಶ್ವದಾದ್ಯಂತ ಸಿನಿಮಾ ತೆರೆಗೆ ಬರ್ತಿದೆ. ಸಿನಿಮಾ ಪ್ರಮೋಷನ್ ಭಾಗವಾಗಿ ಬಾಲಿವುಡ್ ಬಬಲ್ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

  ನಿಮ್ಮ ಸ್ವಯಂವರದಲ್ಲಿ ಯಾರು ಯಾರು ಇರಬೇಕು ಎನ್ನುವ ಪ್ರಶ್ನೆಗೆ ರಶ್ಮಿಕಾ ಜಾಣ್ಮೆಯ ಉತ್ತರ ನೀಡಿದ್ದಾರೆ. "ಪ್ರಸ್ತುತ ತಾನು ವರ್ಕ್ ಮಾಡುತ್ತಿರುವ ಹೀರೊfಳು ಇರಬೇಕೆಂದು ಹೇಳಿದ್ದಾರೆ. ರಣಬೀರ್ ಕಪೂರ್, ವಿಜಯ್ ದಳಪತಿ ಹಾಗೂ ಅಲ್ಲು ಅರ್ಜುನ್ ಇರಬೇಕೆಂದು ಹೇಳಿ ಜಾರಿ ಕೊಂಡಿದ್ದಾರೆ. ಇಷ್ಟಪಟ್ಟಿದ್ದಾರೆ. ಅದೇ ರೀತಿ 'ಜೀಲೇ ಜರ' ರೀತಿಯ ಸಿನಿಮಾದಲ್ ನಟಿಸುವ ಅವಕಾಶ ಸಿಕ್ಕಿದರೆ ಅಲಿಯಾ ಭಟ್, ಸಮಂತಾ ಜೊತೆ ಸೇರಿ ನಟಿಸುವ ಬಯಕೆ ಇದೆ ಎಂದು ರಶ್ಮಿಕಾ ತಿಳಿಸಿದ್ದಾರೆ.

  rashmika-mandanna-lists-the-actors-she-wants-to-participate-in-her-swayamvar

  ಕಾಫಿ ವಿತ್ ಕರಣ್ ಶೋನಲ್ಲಿ ವಿಜಯ್ ದೇವರಕೊಂಡ ಬಗ್ಗೆ ಸಾರಾ ಅಲಿ ಖಾನ್, ಜಾನ್ವಿ ಕಪೂರ್ ಮಾಡಿದ ಕಾಮೆಂಟ್ಸ್ ನೋಡಿದಾಗ ನಿಮ್ಮ ರಿಯಾಕ್ಷನ್ ಏನು ಎಂದಿದ್ದಕ್ಕೆ ಜೋರಾಗಿ ನಕ್ಕುಬಿಟ್ಟೆ ಎಂದಿದ್ದಾರೆ. ನಾನು, ವಿಜಯ್ ದೇವರಕೊಂಡ ಭೇಟಿಯಾದ ಪ್ರತಿಬಾರಿ ಇಬ್ಬರು ಬ್ಯಾಡ್ಮಿಂಟನ್ ಆಡುತ್ತೀವಿ ಎಂದಿದ್ದಾರೆ. ನಾನು ಹೃತಿಕ್ ರೋಷನ್ ದೊಡ್ಡ ಅಭಿಮಾನಿ, ಅವರೊಟ್ಟಿಗೆ ನಟಿಸುವ ಆಸೆ ಇದೆ ಎಂದು ರಶ್ಮಿಕಾ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

  English summary
  Rashmika Mandanna lists the actors she wants to participate in her Swayamvar. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X