For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: ಫಸ್ಟ್ ಲುಕ್ ರಿಲೀಸ್

  By ಫಿಲ್ಮ್ ಡೆಸ್ಕ್
  |

  ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಗ್ಗೆ ರಶ್ಮಿಕಾ ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿತ್ತು. ಆದರೀಗ ಬಾಲಿವುಡ್ ಸಿನಿಮಾ ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಥ್ರಿಲ್ಲಿಂಗ್ ಸುದ್ದಿ ನೀಡಿದ್ದಾರೆ.

  ವೈರಲ್ ಆಯ್ತು ರಶ್ಮಿಕಾ ಮಂದಣ್ಣ ಬಾಲಿವುಡ್ ಫೋಟೋ | Filmibeat Kannada

  ಅಂದಹಾಗೆ ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರ ಕಾಣಿಸಿಕೊಳ್ಳುತ್ತಿದ್ದಾರೆ. ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದ್ದು, ಚಿತ್ರಕ್ಕೆ 'ಮಿಷನ್ ಮಜ್ನು' ಎಂದು ಟೈಟಲ್ ಇಡಲಾಗಿದೆ. ಶಾಂತನು ಬಾಗ್ಚಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಾಂತನು ಮೊದಲ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಮುಂದೆ ಓದಿ..

  ಬಾಲಿವುಡ್ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ: ಫೋಟೋ ವೈರಲ್ಬಾಲಿವುಡ್ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ: ಫೋಟೋ ವೈರಲ್

  ಪಾಕಿಸ್ತಾನದಲ್ಲಿರುವ ಭಾರತದ ರಾ ಮಿಷನ್ ಕಥೆ

  ಪಾಕಿಸ್ತಾನದಲ್ಲಿರುವ ಭಾರತದ ರಾ ಮಿಷನ್ ಕಥೆ

  1970ರ ಕಾಲಘಟ್ಟದ ನೈಜ ಘಟನೆಯಿಂದ ಪ್ರೇರೇಪಿತ ಚಿತ್ರ ಇದಾಗಿದ್ದು, ಪಾಕಿಸ್ತಾನದಲ್ಲಿರುವ ಭಾರತದ ಅತ್ಯಂತ ಧೈರ್ಯಶಾಲಿ ರಾ ಕಾರ್ಯಚರಣೆ ಬಗ್ಗೆ ಇರುವ ಸಿನಿಮಾವಾಗಿದೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ರಹಸ್ಯ ಕಾರ್ಯಚರಣೆ ಇದಾಗಿದ್ದು, ಈ ಘಟನೆ ಎರಡು ರಾಷ್ಟ್ರಗಳ ನಡುವಿನ ಸಂಬಂಧವನ್ನು ಬದಲಾಯಿಸಿದೆ.

  ಸಿದ್ಧಾರ್ಥ್ ಮಲ್ಹೋತ್ರ ನಾಯಕ

  ಸಿದ್ಧಾರ್ಥ್ ಮಲ್ಹೋತ್ರ ನಾಯಕ

  ಸಿದ್ಧಾರ್ಥ್ ಮಲ್ಹೋತ್ರ ಚಿತ್ರದಲ್ಲಿ ರಾ ಏಜೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉರಿ ಸಿನಿಮಾ ನಿರ್ಮಾಣ ಮಾಡಿದ್ದ ರೋನಿ ಸ್ಕ್ರೂವಾಲಾ ಈ ಚಿತ್ರಕ್ಕೂ ಬಂಡವಾಳ ಹೂಡಿಸಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿ ರಶ್ಮಿಕಾ, 'ಈ ಸಿನಿಮಾದ ಭಾಗವಾಗಿರುವುದು ತುಂಬಾ ಖುಷಿಯಾಗುತ್ತಿದೆ. ಹೊಸ ಪಯಣ. ನೈಜ ಘಟನೆ ಆಧಾರಿತ, ಪಾಕಿಸ್ತಾನದೊಳಗಿನ ಭಾರತದ ಅತ್ಯಂತ ಧೈರ್ಯಶಾಲಿ ರಾ ಮಿಷನ್ ಕಥೆ' ಎಂದು ಹೇಳಿದ್ದಾರೆ.

  ಎನ್‌ಟಿಆರ್ ಚಿತ್ರದಲ್ಲಿ ರಶ್ಮಿಕಾ ಡೌಟು, ಆ ನಟಿ ಮೇಲೆ ತ್ರಿವಿಕ್ರಮ್ ಕಣ್ಣು!ಎನ್‌ಟಿಆರ್ ಚಿತ್ರದಲ್ಲಿ ರಶ್ಮಿಕಾ ಡೌಟು, ಆ ನಟಿ ಮೇಲೆ ತ್ರಿವಿಕ್ರಮ್ ಕಣ್ಣು!

  ಗಮನ ಸೆಳೆಯುತ್ತಿದೆ ಫಸ್ಟ್ ಲುಕ್

  ಗಮನ ಸೆಳೆಯುತ್ತಿದೆ ಫಸ್ಟ್ ಲುಕ್

  ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ಸಿದ್ಧಾರ್ಥ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊತ್ತಿ ಉರಿಯುತ್ತಿರುವ ಪ್ರದೇಶದ ನಡುವೆ ಕೈಯಲ್ಲಿ ಗನ್ ಹಿಡಿದು ಸಿದ್ಧಾರ್ಥ್ ನಡೆದುಕೊಂಡು ಬರುತ್ತಿದ್ದಾರೆ. ಮೊದಲ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

  ಆಲ್ಬಂ ಸಾಂಗ್ ನಲ್ಲಿ ರಶ್ಮಿಕಾ

  ಆಲ್ಬಂ ಸಾಂಗ್ ನಲ್ಲಿ ರಶ್ಮಿಕಾ

  ರಶ್ಮಿಕಾ ಈಗಾಗಲೇ ಹಿಂದೆಯ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿಯ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಶ್ಮಿಕಾ ಮೊದಲ ಬಾರಿಗೆ ಆಲ್ಬಂ ಹಾಡಿನ ಮೂಲಕ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಹಾಡಿನ ಶೂಟಿಂಗ್ ಪ್ರಾರಂಭವಾಗಿದ್ದು, ಕೆಲವು ದಿನಗಳ ಹಿಂದೆ ಚಂಡೀಗಢದಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡಿನ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮಿಕಾ ಇದೀಗ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

  English summary
  Rashmika Mandanna makes her Bollywood debut with Mission Majnu starring Sidharth Malhotra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X