ರಶ್ಮಿಕಾ ಅದೃಷ್ಟಕ್ಕೆ ತಡೆಯೇ ಇಲ್ಲ, ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವಕಾಶ!

ದಕ್ಷಿಣ ಭಾರತದ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ, ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಅಷ್ಟರಲ್ಲೇ ಜನಪ್ರಿಯ ಹಿಂದಿ ಸಿನಿಮಾ ನಿರ್ದೇಶಕನ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಈ ನಟಿ.

ಹೌದು, ರಶ್ಮಿಕಾ ನಟಿಸಿರುವ ಬಾಲಿವುಡ್‌ ಸಿನಿಮಾ ಬಿಡುಗಡೆ ಮುನ್ನವೇ ಇನ್ನೊಂದು ಸಿನಿಮಾ ಅವಕಾಶ ರಶ್ಮಿಕಾ ಪಾಲಿಗೆ ಒಲಿದು ಬಂದಿದೆ. ಅದರಲ್ಲಿಯೂ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕನ ಸಿನಿಮಾದಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ರಾಂಜನಾ', 'ತನ್ನು ವೆಡ್ಸ್ ಮನ್ನು', ಶಾರುಖ್ ಖಾನ್ ನಟನೆಯ 'ಜೀರೊ', ಅಕ್ಷಯ್ ಕುಮಾರ್ ನಟನೆಯ 'ಅತರಂಗಿ ರೇ', 'ರಕ್ಷಾ ಬಂಧನ್', ಸಿನಿಮಾಗಳನ್ನು ನಿರ್ದೇಶಿಸಿರುವ ಆನಂದ್ ಎಲ್ ರಾಯ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.

Rashmika Mandanna May Act In Anand L Rais Next Movie

ರಶ್ಮಿಕಾ ಮಂದಣ್ಣ ನಿನ್ನೆಯಷ್ಟೆ ಆನಂದ್ ಎಲ್ ರಾಯ್ ಅವರ ಮುಂಬೈ ಕಚೇರಿಯ ಬಳಿ ಕಾಣಿಸಿಕೊಂಡಿದ್ದು, ಸಿನಿಮಾದ ಬಗ್ಗೆ ಮಾತುಕತೆ ನಡೆಸಲೆಂದು ರಶ್ಮಿಕಾ, ಆನಂದ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಆನಂದ್ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದೇ ಆದಲ್ಲಿ ಅದು ರಶ್ಮಿಕಾರ ವೃತ್ತಿ ಜೀವನದ ಪ್ರಮುಖ ಸಿನಿಮಾ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಇನ್ನು ನಟಿ ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ ನಾಯಕ ನಟನಾಗಿ ನಟಿಸಿರುವ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ಗುಡ್ ಬೈ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್‌ರ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಯನ್ನು ರಶ್ಮಿಕಾ ಹೊಂದಿದ್ದಾರೆ. ಎರಡೂ ಸಿನಿಮಾಗಳು ಇನ್ನೂ ಬಿಡುಗಡೆ ಆಗಿಲ್ಲ.

'ಮಿಷನ್ ಮಜ್ನು' ಸಿನಿಮಾ 2022ರ ಮೇ 13 ಕ್ಕೆ ಬಿಡುಗಡೆ ಆಗುವುದಿದೆ. 'ಗುಡ್ ಬೈ' ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ನಡುವೆ ರಶ್ಮಿಕಾ ನಟನೆಯ ತೆಲುಗಿನ 'ಪುಷ್ಪ' ಸಿನಿಮಾದ ಮೊದಲ ಭಾಗ ಮುಗಿದಿದ್ದು ಸಿನಿಮಾವು ಡಿಸೆಂಬರ್ 17ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಶ್ರೀವಲ್ಲಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದರ ಜೊತೆಗೆ 'ಆಡುವಾಳ್ಳು ಮೀಕು ಜೋಹಾರ್ಲು' ಹೆಸರಿನ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಮಲಯಾಳಂಗೂ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ ಆದರೆ ಇನ್ನೂ ಖಾತ್ರಿಯಾಗಿಲ್ಲ.

More from Filmibeat

English summary
Actress Rashmika Mandanna mai act in Anand L Rai's next movie. Her bollywood movies Mission Majnu and Good Bye were yet to release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X