For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ಕಿರಿಕ್ ಬೆಡಗಿ ರಶ್ಮಿಕಾ?

  |
  ಬಾಲಿವುಡ್ ಸ್ಟಾರ್ ನಿರ್ದೇಶಕನಿಂದ ರಶ್ಮಿಕಾ ಮಂದಣ್ಣಗೆ ಬಂತೊಂದು ಆಫರ್

  'ಕಿರಿಕ್ ಪಾರ್ಟಿ' ಸೂಪರ್ ಹಿಟ್ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಶ್ಮಿಕಾ ಈಗ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇರುವ ಕನ್ನಡದ ಸಾನ್ವಿ ಇತ್ತೀಚಿಗಷ್ಟೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟದ್ದಾರೆ.

  ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಈಗ ಬಾಲಿವುಡ್ ನತ್ತ ಪಯಣ ಬೆಳೆಸಿದ್ದಾರೆ ಎನ್ನುವ ಮಾತುಗಳು ಹೇಳಿ ಬರುತ್ತಿದೆ. ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ನಿರ್ದೇಶಕ ಸಂಜಯ್ ಲೀಲ ಬನ್ಸಾಲಿ ಸಿನಿಮಾಗೆ ರಶ್ಮಿಕಾ ನಾಯಕಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಸೂಪರ್ ಸ್ಟಾರ್ ನಟನ ಮಗನಿಗೆ ರಶ್ಮಿಕಾ ಮಂದಣ್ಣ ನಾಯಕಿ.!ಸೂಪರ್ ಸ್ಟಾರ್ ನಟನ ಮಗನಿಗೆ ರಶ್ಮಿಕಾ ಮಂದಣ್ಣ ನಾಯಕಿ.!

  ಸಂಜಯ್ ಲೀಲ ಬನ್ಸಾಲಿ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಬಾಲಿವುಡ್ ನಟ ರಣದೀಪ್ ಹೂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೂಡಗೆ ನಾಯಕಿಯಾಗಿ ರಶ್ಮಿಕಾ ಅಭಿನಯಿಸಲಿದ್ದಾರಂತೆ. ಈಗಾಗಲೆ ರಶ್ಮಿಕಾ ಜೊತೆ ಮಾತುಕತೆ ಕೂಡ ಆಗಿದ್ಯಂತೆ. ಸ್ಕ್ರಿಪ್ಟ್ ಓದುತ್ತಿರುವ ರಶ್ಮಿಕಾ ಇಷ್ಟ ಆದ್ರೆ ಮಾತ್ರ ಗ್ರೀನ್ ಸಿಗ್ನಲ್ ನೀಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  ರಶ್ಮಿಕಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಸ್ಟಾರ್ ನಿರ್ದೇಶಕರು ಕಿರಿಕ್ ಬೆಡಗಿಯ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರೆ. ಸೌತ್ ಸ್ಟಾರ್ ಆಗಿ ಮೆರೆಯುತ್ತಿದ್ದ ರಶ್ಮಿಕಾ ಈಗ ಬಾಲಿವುಡ್ ನತ್ತ ಹೊರಟಿರುವುದು ರಶ್ಮಿಕಾ ಅಭಿಮಾನಿಗಳಿಗೆ ಸಂತಸ ತಂದಿದೆ. ರಶ್ಮಿಕಾ ಅಭಿನಯದ ತೆಲುಗಿನ ಬಹು ನಿರೀಕ್ಷೆಯ 'ಡಿಯರ್ ಕಾಮ್ರೇಡ್' ಚಿತ್ರ ರಿಲೀಸ್ ಗೆ ರೆಡಿಯಾಗಿದೆ.

  English summary
  Kannada actress Rashmika Mandanna has been offered to make a grand debut in Bollywood. she is offered from director Sanjay Leela Bhansali's mega project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X