ಚಿತ್ರೀಕರಣಕ್ಕೆ ಹೋದ್ರೆ ಪೋಷಕರು ತುಂಬಾ ಭಯಪಡುತ್ತಾರೆ; ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು, ತಮಿಳು ಬಳಿಕ ಇದೀಗ ಬಾಲಿವುಡ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ರಶ್ಮಿಕಾ ಸದ್ಯ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಕೊರೊನಾ 2ನೇ ಮುಗಿಯುತ್ತಿದ್ದಂತೆ ರಶ್ಮಿಕಾ ಮತ್ತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬಾಲಿವುಡ್ ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದಾರೆ ಕಿರಿಕ್ ಸುಂದರಿ.

ಬಾಲಿವುಡ್ ನಲ್ಲಿ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗುತ್ತಿದ್ದಂತೆ ಹೈದರಾಬಾದ್ ನಲ್ಲಿ ಹೊಸ ಮನೆ ಖರೀದಿ ಮಾಡಿದ್ದ ರಶ್ಮಿಕಾ, ಹಿಂದಿ ಕಡೆ ಮುಖ ಮಾಡುತ್ತಿದ್ದಂತೆ ಮುಂಬೈನಲ್ಲಿ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. ಹೈದರಾಬಾದ್ ಮತ್ತು ಮುಂಬೈ ನಡುವೆ ಸದಾ ಓಡಾಡುತ್ತಿರುವ ರಶ್ಮಿಕಾ ನೋಡಿ ಅವರ ಪೋಷಕರಿಗೆ ತುಂಬಾ ಭಯಪಡುತ್ತಿದ್ದಾರಂತೆ.

ಕೆಲಸಕ್ಕೆಂದು ಮನೆಯಿಂದ ಹೊರಗೆ ಕಾಲಿಟ್ಟರೆ ಹೆತ್ತವರು ತುಂಬಾ ಭಯಪಡುತ್ತಾರೆ ಎಂದು ರಶ್ಮಿಕಾ ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆಯೂ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಅದರಲ್ಲೂ ಹೊರಗಡೆಯೇ ಹೆಚ್ಚಾಗಿ ಸುತ್ತಾಡಿ ಕೆಲಸ ಮಾಡುವರಿಗೆ ತುಂಬಾ ಕಷ್ಟ. ಹಾಗಾಗಿ ನಟಿ ರಶ್ಮಿಕಾ ಕೂಡ ಚಿತ್ರೀಕರಣಕ್ಕೆ ಹೊರಟಾಗ ಅವರ ಪೋಷಕರು ತುಂಬಾ ಭಯಪಟ್ಟುಕೊಳ್ಳುತ್ತಾರಂತೆ.

Rashmika Mandanna opened up about working amid Covid-19 pandemic and how her parents are scared

ಈ ಬಗ್ಗೆ ಮಾತನಾಡಿರುವ ರಶ್ಮಿಕಾ, "ಹೊರಗಡೆ ಏನಾಗುತ್ತಿದೆ ಹೇಗಿದೆ ಪರಿಸ್ಥಿತಿ ಎನ್ನುವುದನ್ನು ನೋಡುತ್ತಿರುತ್ತಾರೆ. ಚಿತ್ರೀಕರಣ ನಡೆಯುವಾಗ ನಮಗೆ ಮಾಸ್ಕ್ ಧರಿಸಲು ಸಾಧ್ಯವಿಲ್ಲ. ಆದರೆ ಅವರೂ ನನಗೆ ಏನು ಹೇಳುವುದಿಲ್ಲ. ಯಾಕೆಂದರೆ ಇದು ನನ್ನ ಕೆಲಸ" ಎಂದಿದ್ದಾರೆ.

ಮಾತು ಮುಂದುವರೆಸಿದ ರಶ್ಮಿಕಾ, "ಕೆಲಸ ಅಂತ ಬಂದಾಗ ನಾನು ಯಾರನ್ನು ಎಂಟ್ರಿ ಕೊಡಲು ಬಿಡುವುದಿಲ್ಲ" ಎಂದು ರಶ್ಮಿಕಾ ಹೇಳಿದ್ದಾರೆ. "ಒಂದು ವೇಳೆ ಪೋಷಕರು ಈ ಸಮಯದಲ್ಲಿ ಚಿತ್ರೀಕರಣ ಮಾಡುವುದು ಸುರಕ್ಷಿತವಲ್ಲ, ಹೋಗಬೇಡ ಎಂದು ಹೇಳಿದರೆ ನಾನು ಕೇಳುವುದಿಲ್ಲ ಎಂದು ಅವರಿಗೂ ಗೊತ್ತು. ಆದರೆ ಸಿನಿಮಾಗಾಗಿ ತುಂಬಾ ಹಣ ಹಾಕಿರುತ್ತಾರೆ. ನಾನು ಕೆಲಸವನ್ನು ಮಾಡಲೇ ಬೇಕಾಗಿರುತ್ತದೆ" ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿರುವ ಮಿಷನ್ ಮಜ್ನು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾ ಸಹಿ ಮಾಡಿದ ಮೊದಲ ಬಾಲಿವುಡ್ ಸಿನಿಮಾವಿದು. ಇದಕ್ಕೂ ಮೊದಲು ರಶ್ಮಿಕಾ ಬಾಲಿವುಡ್ ಎಂಟ್ರಿಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇತ್ತು. ಆದರೆ ಯಾವುದಕ್ಕೂ ರಶ್ಮಿಕಾ ಪ್ರತಿಕ್ರಿಯೆ ನೀಡಿರಲಿಲ್ಲ. 'ಮಿಷನ್ ಮಜ್ನು' ಸಿನಿಮಾಗೆ ಸಹಿ ಮಾಡುವ ಮೂಲಕ ಅಧಿಕೃತವಾಗಿ ಬಾಲಿವುಡ್ ಎಂಟ್ರಿಯ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ರಶ್ಮಿಕಾ ಮತ್ತೊಂದು ಬಾಲಿವುಡ್ ಸಿನಿಮಾಗೆ ಸಹಿ ಮಾಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ರಶ್ಮಿಕಾ ಬಾಲಿವುಡ್ ನಲ್ಲಿ ಖಾಯಂ ಆಗಿ ಬಾಲಿವುಡ್ ನಲ್ಲಿ ಬೇರೂರಲು ಸಜ್ಜಾಗಿದ್ದಾರೆ. ಅಮಿತಾಬ್ ಜೊತೆ ರಶ್ಮಿಕಾ 'ಗುಡ್ ಬೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಎರಡು ಸಿನಿಮಾದ ಚಿತ್ರೀಕರಣದಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಬಿಗ್ ಬಿ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ರಶ್ಮಿಕಾ 'ಅದ್ಭುತ' ಎಂದು ಹೇಳಿದ್ದಾರೆ. ಈ ಪಯಣ ತುಂಬಾ ಕ್ರೇಸಿಯಾಗಿತ್ತು ಮತ್ತು ಬಿಗ್ ಬಿ ಜೊತೆ ಕೆಲಸ ಮಾಡಲು ತಾನೆಷ್ಟು ಕೃತಜ್ಞಳಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ರಶ್ಮಿಕಾ ತೆಲುಗು ಸಿನಿಮಾಗಳ ಬಗ್ಗೆ ಹೇಳುವುದಾದರೆ ಸದ್ಯ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಎರಡು ಭಾಗದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಮೊದಲ ಭಾಗ ಡಿಸೆಂಬರ್ ಅಂದರೆ ಕ್ರಿಸ್ಮಸ್ ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಜೊತೆಗೆ ತೆಲುಗು ನಟ ಶರ್ವಾನಂದ್ ಜೊತೆ ಮತ್ತೊಂದು ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Actress Rashmika Mandanna opened up about working amid Covid-19 pandemic and how her parents are scared.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X