For Quick Alerts
  ALLOW NOTIFICATIONS  
  For Daily Alerts

  'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?

  |

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ವಿಷಯ ತಿಳಿದಿದೆ. 'ಗುಡ್ ಬೈ' ಸಿನಿಮಾದಲ್ಲಿ ಬಿಗ್-ಬಿ ಮಗಳು ಪಾತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

  ಅಮಿತಾಬ್ ಜೊತೆ ನಟಿಸುವ ಆಫರ್ ಬಂದಾಗ ರಶ್ಮಿಕಾ ಪೋಷಕರು ಏನ್ ಹೇಳಿದ್ರು ಗೊತ್ತಾ | Filmibeat Kannada

  ಪ್ರಸ್ತುತ, ಮುಂಬೈನಲ್ಲಿ 'ಗುಡ್ ಬೈ' ಚಿತ್ರದ ಶೂಟಿಂಗ್‌ನಲ್ಲಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರೆ. ಹಿಂದಿ ಚಿತ್ರರಂಗದ ದಿಗ್ಗಜ ಅಮಿತಾಭ್ ಜೊತೆ ನಟಿಸಬೇಕು ಎಂದು ವರ್ಷಗಳ ಕಾಲ ಕಾಯುತ್ತಿರುವವರ ನಡುವೆ ರಶ್ಮಿಕಾ ಮಂದಣ್ಣ ಇಷ್ಟು ಬೇಗ ಅಂಥ ಅವಕಾಶ ಪಡೆದಿರುವುದು ನಿಜಕ್ಕೂ ಅದೃಷ್ಟ.

  'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುದು? 'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಯಾವುದು?

  ಅಮಿತಾಭ್ ಜೊತೆ ರಶ್ಮಿಕಾ ನಟಿಸುವ ಸುದ್ದಿಯನ್ನು ಆರಂಭದಲ್ಲಿ ಬಹಳಷ್ಟು ಮಂದಿ ನಂಬಿರಲಿಲ್ಲ. ಬೇರೆಯವರು ಏಕೆ ಸ್ವತಃ ರಶ್ಮಿಕಾ ಮಂದಣ್ಣ ಅವರ ಪೋಷಕರೇ ಅದನ್ನು ನಂಬಲಿಲ್ಲವಂತೆ. ಈ ಬಗ್ಗೆ ರಶ್ಮಿಕಾ ಬಹಿರಂಗಪಡಿಸಿದ್ದಾರೆ.

  ''ಗುಡ್ ಬೈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸುತ್ತಿದ್ದಾರೆ. ಅವರ ಮಗಳ ಪಾತ್ರದಲ್ಲಿ ನಾನು ನಟಿಸಲಿದ್ದೇನೆ ಎಂಬ ಸುದ್ದಿ ನನ್ನ ಪೋಷಕರಿಗೆ ತಿಳಿಸಿದಾಗ ಅದನ್ನು ಅವರು ನಂಬಲಿಲ್ಲ'' ಎಂದು ತಿಳಿಸಿದ್ದಾರೆ.

  ''ನಮ್ಮ ಪೋಷಕರು ಅಮಿತಾಭ್ ಬಚ್ಚನ್ ಸರ್ ಅವರ ದೊಡ್ಡ ಅಭಿಮಾನಿಗಳು. ಅವರ ಸಿನಿಮಾಗಳನ್ನು ಬಹಳ ಇಷ್ಟ ಪಟ್ಟು ನೋಡುತ್ತಿದ್ದರು. ಈಗ ಅವರ ಜೊತೆ ನಾನು ನಟಿಸುವ ಅವಕಾಶ ಪಡೆದಿರುವ ಬಗ್ಗೆ ಅವರು ಕಾತುರರಾಗಿದ್ದಾರೆ'' ಎಂದು ಹೇಳಿದ್ದಾರೆ.

  ರಶ್ಮಿಕಾ ಮಂದಣ್ಣ ಜೊತೆ ಚಿತ್ರೀಕರಣ ಆರಂಭಿಸಿದ ಸಿದ್ಧಾರ್ಥ್ ಮಲ್ಹೋತ್ರಾರಶ್ಮಿಕಾ ಮಂದಣ್ಣ ಜೊತೆ ಚಿತ್ರೀಕರಣ ಆರಂಭಿಸಿದ ಸಿದ್ಧಾರ್ಥ್ ಮಲ್ಹೋತ್ರಾ

  ''ಒಳ್ಳೆಯ ಕೆಲಸ ಮಾಡು, ಹೆಚ್ಚು ಗಮನ ಕೊಡು'' ಎಂದು ಪೋಷಕರು ರಶ್ಮಿಕಾ ಮಂದಣ್ಣಗೆ ಸಲಹೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

  ಅಂದ್ಹಾಗೆ, 'ಗುಡ್ ಬೈ' ಸಿನಿಮಾ ರಶ್ಮಿಕಾ ನಟಿಸುತ್ತಿರುವ ಎರಡನೇ ಚಿತ್ರ. ಸಿದ್ಧಾರ್ಥ್ ಮಲ್ಹೋತ್ರ ಅಭಿನಯಿಸುತ್ತಿರುವ 'ಮಿಷನ್ ಮಿಜ್ನು' ರಶ್ಮಿಕಾಗೆ ಮೊದಲ ಹಿಂದಿ ಚಿತ್ರ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದರ ಜೊತೆ ಜೊತೆಗೆ ಗುಡ್ ಬೈ ಸಿನಿಮಾನೂ ಸಾಗ್ತಿದೆ.

  English summary
  What did Rashmika Mandanna parent's react after hearning that her daughter was acting with Amitabh Bachchan in Goodbye movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X