For Quick Alerts
  ALLOW NOTIFICATIONS  
  For Daily Alerts

  ಮತ್ತೆ ಟ್ರೋಲಿಗೆ ಗುರಿಯಾದ ರಶ್ಮಿಕಾ: 'ಓವರ್ ಆಕ್ಟಿಂಗ್' ಎಂದು ಜರಿದ ನೆಟ್ಟಿಗರು

  By ಫಿಲ್ಮಿ ಬೀಟ್ ಡೆಸ್ಕ್
  |

  ಅತಿ ಹೆಚ್ಚು ಟ್ರೋಲ್ ಆದ ನಟಿರ ಪಟ್ಟಿ ಮಾಡಿದ್ರೆ ರಶ್ಮಿಕಾ ಮಂದಣ್ಣ ಹೆಸರು ಟಾಪ್ ನಲ್ಲಿ ಇರುತ್ತೆ. ಪದೇ ಪದೇ ಟ್ರೋಲಿಗೆ ಗುರಿಯಾದ ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರು. ಆದರೆ ಇತ್ತೀಚಿಗೆ ರಶ್ಮಿಕಾ ಟ್ರೋಲ್ ಗಳಿಂದ ಕೊಂಚ ದೂರ ಆಗಿದ್ದರು. ತೆಲುಗು, ತಮಿಳು, ಬಾಲಿವುಡ್ ಅಂತ ಮೆರೆಯುತ್ತಿರುವ ರಶ್ಮಿಕಾ ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ.

  ಕಿರಿಕ್ ನಟಿ ಸದ್ಯ ಹೆಚ್ಚಾಗಿ ಮುಂಬೈನಲ್ಲೇ ಇರುತ್ತಾರೆ. ಬಾಲಿವುಡ್ ನ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ನಿರತರಾಗಿರುವ ರಶ್ಮಿಕಾ ಮುಂಬೈನಲ್ಲಿ ನೆಲೆಸಲು ಈಗಾಗಲೇ ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಸದ್ಯ ಅಮಿತಾಬ್ ಬಚ್ಚನ್ 'ಗುಡ್ ಬೈ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ರಶ್ಮಿಕಾರನ್ನು ನೆಟ್ಟಿಗರು 'ಓವರ್ ಆಕ್ಟಿಂಗ್' ಎಂದು ಜರಿದಿದ್ದಾರೆ. ಮುಂದೆ ಓದಿ..

  ಮಾಸ್ಕ್ ಮರೆತು ಹೊರಟ ರಶ್ಮಿಕಾ

  ಮಾಸ್ಕ್ ಮರೆತು ಹೊರಟ ರಶ್ಮಿಕಾ

  ಇತ್ತೀಚಿಗೆ ಮುಂಬೈನ ನಗರದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದರು. ಕಾರಿನಿಂದ ಕೆಳಗೆ ಇಳಿದ ರಶ್ಮಿಕಾ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ತರಲು ಕಾರಿನ ಬಳಿ ಓಡಿದ ರಶ್ಮಿಕಾ ಬಳಿಕ ತನ್ನ ಕೈಗಳಿಂದ ಬಾಯಿ ಮುಚ್ಚಿಕೊಳ್ಳುತ್ತಾರೆ. ಅಷ್ಟರಲ್ಲಿ ರಶ್ಮಿರಾ ಸ್ಟ್ಯಾಫ್ ಒಬ್ಬರು ಮಾಸ್ಕ ತೆಗೆದುಕೊಡುತ್ತಾರೆ. ತನಗೆ ಬೇಕಾದ ಸ್ಟೈಲಿಶ್ ಮಾಸ್ಕ್ ಅನ್ನು ರಶ್ಮಿಕಾ ಆಯ್ಕೆ ಮಾಡಿಕೊಳ್ಳುತ್ತಾರೆ.

  ನೆಟ್ಟಿಗರ ಟ್ರೋಲ್

  ನೆಟ್ಟಿಗರ ಟ್ರೋಲ್

  ರಶ್ಮಿಕಾ ಎಕ್ಸ್ ಪ್ರೆಶನ್, ನಡೆದು ಕೊಂಡ ರೀತಿಗೆ ನೆಟ್ಟಿಗರು ಓವರ್ ಆಕ್ಟಿಂಗ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದು ಅತಿಯಾಯಿತು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮಾಸ್ಕ್ ವಿಚಾರವಾಗಿಯೂ ರಶ್ಮಿಕಾ ಕಾಲೆಳೆಯುತ್ತಿದ್ದಾರೆ. ರಶ್ಮಿಕಾ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

  ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ

  ಹೆಚ್ಚು ತಲೆಕೆಡಿಸಿಕೊಳ್ಳದ ರಶ್ಮಿಕಾ

  ಟ್ರೋಲ್ ಗಳು ರಶ್ಮಿಕಾಗೇನು ಹೊಸದಲ್ಲ. ಇದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದ ರಶ್ಮಿಕಾ ತನ್ನ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತೆಲುಗು ಮತ್ತು ಹಿಂದಿ ಎರಡು ಸಿನಿಮಾರಂಗದಲ್ಲಿ ಬ್ಯುಸಿ ಇರುವ ರಶ್ಮಿಕಾ ಮುಂಬೈ ಮತ್ತು ಹೈದರಾಬಾದ್ ಅಂತ ಓಡಾಡುತ್ತಿರುತ್ತಾರೆ.

  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada
  ರಶ್ಮಿಕಾ ಬಳಿ ಸಿನಿಮಾಗಳು

  ರಶ್ಮಿಕಾ ಬಳಿ ಸಿನಿಮಾಗಳು

  ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ 'ಮಿಷನ್ ಮಜ್ನು' ಮತ್ತು 'ಗುಡ್ ಬೈ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮೊದಲು ಸಹಿ ಮಾಡಿದ ಬಾಲಿವುಡ್ ಸಿನಿಮಾ ಮಿಷನ್ ಮಜ್ನು. ಈ ಸಿನಿಮಾ ಚಿತ್ರೀಕರಣಕ್ಕೂ ಮೊದಲೇ ರಶ್ಮಿಕಾ ಮತ್ತೊಂದು ಬಿಗ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ರಶ್ಮಿಕಾ, ಅರ್ಜುನ್ ಜೊತೆ 'ಪುಷ್ಪ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Actress Rashmika Mandanna forgets her mask in the car; netizens trolled her for overacting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X