ಗಾಸಿಪ್ ನಿಜವಾಯ್ತು, ರಶ್ಮಿಕಾ ಮಂದಣ್ಣ ಟೈಗರ್ ಶ್ರಾಫ್ ಜೋಡಿ ಒಂದಾಯ್ತು!

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾ ಕರಿಯರ್‌ನ ಉತ್ತುಂಗದಲ್ಲಿದ್ದಾರೆ. ಸಾಲು-ಸಾಲು ದೊಡ್ಡ ಸಿನಿಮಾಗಳಲ್ಲಿ ನಟಿಸುವ ಮೂಲಕ ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ತಮ್ಮ ಸಿನಿಪಯಣವನ್ನು ಶುರುಮಾಡಿದ ರಶ್ಮಿಕಾ ಮಂದಣ್ಣ ಇಂದು ಭಾರತೀಯ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ಕೂಡ ಅಭಿನಯಿಸುತ್ತಿದ್ದಾರೆ.

ನಟಿ ರಶ್ಮಿಕಾ ಕನ್ನಡದ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಶುರುಮಾಡಿದರು. ಕನ್ನಡದಲ್ಲೂ ಕೂಡ ದೊಡ್ಡ ಮಟ್ಟಿನ ಯಶಸ್ಸು ಕಂಡ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿ ಸೈ ಎನಿಸಿಕೊಂಡರು. ಬಳಿಕ ಬಾಲಿವುಡ್ ಗಮನಸೆಳೆದ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಾಲಿವುಡ್ ಸಿನಿಮಾ ಒಲಿದು ಬಂದಿದೆ ಎನ್ನಲಾಗಿತ್ತು. ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ರಶ್ಮಿಕಾ, ಟೈಗರ್ ಅಭಿನಯಿಸಿರುವುದೇನೋ ಹೌದು. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಅದೇನು ಅಂತ ಮುಂದೆ ಓದಿ.

ಟೈಗರ್ ಶ್ರಾಫ್ ಜೊತೆ ನಟಿಸಿದ್ದೇನೆ- ನಟಿ ರಶ್ಮಿಕಾ ಮಂದಣ್ಣ!

ಟೈಗರ್ ಶ್ರಾಫ್ ಜೊತೆ ನಟಿಸಿದ್ದೇನೆ- ನಟಿ ರಶ್ಮಿಕಾ ಮಂದಣ್ಣ!

ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರೆ. ಬಾಲಿವುಡ್‌ನ ಹೆಸರಾಂತ ನಟ ಟೈಗರ್ ಶ್ರಾಫ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ವಿಚಾರದ ಬಗ್ಗೆ ಸ್ವತಃ ರಶ್ಮಿಕಾ ಪೋಸ್ಟ್ ಹಂಚಿಕೊಂಡಿದ್ದಾರೆ. ಹೌದು ಟೈಗರ್ ಶ್ರಾಫ್ ಜೊತೆಗೆ ಅಭಿನಯಿಸಿದ್ದೇನೆ ಎಂದ್ದಾರೆ. ಇಷ್ಟು ಬೇಗ ಸಿನಿಮಾ ಶುರುವಾಯ್ತಾ ಎಂದುಕೊಳ್ಳಬೇಡಿ. ವಿಷಯ ಬೇರೇನೆ ಇದೆ.

ಜಾಹೀರಾತಿನಲ್ಲಿ ರಶ್ಮಿಕಾ ನಟನೆ!

ಜಾಹೀರಾತಿನಲ್ಲಿ ರಶ್ಮಿಕಾ ನಟನೆ!

ಟೈಗರ್ ಶ್ರಾಫ್ ಜೊತೆಗೆ ಇರುವ ಪುಟ್ಟ ವಿಡಿಯೋವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ, "ಗಾಳಿ ಸುದ್ದಿ ನಿಜವಾಗಿದೆ ಸ್ನೇಹೀತರೇ. ನಾನು ಮತ್ತು ಟೈಗರ್ ಶ್ರಾಫ್ ಒಟ್ಟಿಗೆ ನಟಿಸಿದ್ದೇವೆ. ಆದರೆ ಅದು ಜಾಹೀರಾತಿನಲ್ಲಿ. ಟೈಗರ್ ಜೊತೆಗೆ ಅಭಿನಯಿಸುವುದು ಫೈರ್ ಇದ್ದಂತೆ. ಮುಂದಿನ ಬೆಳವಣಿಗೆಗಾಗಿ ಕಾಯುತ್ತಿದ್ದೇನೆ." ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಹಿಂದಿಯ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ನಟನೆ!

ಹಿಂದಿಯ ಬಿಗ್ ಸಿನಿಮಾಗಳಲ್ಲಿ ರಶ್ಮಿಕಾ ನಟನೆ!

ಸಿದ್ದಾರ್ಥ ಮಲ್ಹೋತ್ರ ಜೊತೆಗೆ 'ಮಿಷನ್ ಮಜ್ನು' ಸಿನಿಮಾದ ಮೂಲಕ ಬಾಲಿವುಡ್‌ಗೆ ರಶ್ಮಿಕಾ ಮಂದಣ್ಣ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ರಣ್ಬೀರ್ ಕಪೂರ್ ಜೊತೆಗೆ ಸದ್ಯ 'ಅನಿಮಲ್' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈಗ ಟೈಗರ್ ಶ್ರಾಫ್ ಜೊತೆ ಜಾಹೀರಾತಿನಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸಿದರೂ ಅಚ್ಚರಿ ಇಲ್ಲ.

ಎಲ್ಲೆಲ್ಲೂ ಜೋರಾಗಿದೆ ರಶ್ಮಿಕಾ ಹವಾ!

ಎಲ್ಲೆಲ್ಲೂ ಜೋರಾಗಿದೆ ರಶ್ಮಿಕಾ ಹವಾ!

ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ಬ್ಯುಸಿಯಾಗಿರುವ ನಟಿ ಎಂದರೇನು ಅದು ರಶ್ಮಿಕಾ ಮಂದಣ್ಣ ಎನ್ನಬಹುದು. ತೆಲುಗಿನಲ್ಲಿ 'ಪುಷ್ಪಾ 2', ತಮಿಳಿನಲ್ಲಿ 'ವಾರಿಸು', ಹಿಂದಿಯಲ್ಲಿ 'ಅನಿಮಲ್' ಸಿನಿಮಾಗಳಲ್ಲಿ ಸದ್ಯಕ್ಕೆ ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರ ಮುಂಬರುವ ಸಿನಿಮಾಗಳ ಬಗ್ಗೆಯೂ ನಾನಾ ಸುದ್ದಿ ಹಬ್ಬಿದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಆಲ್ ರೌಂಡರ್ ಆಗಿ ಎಲ್ಲಾ ಕಡೆಯಲ್ಲೂ ಮಿಂಚುತ್ತಿದ್ದಾರೆ.

More from Filmibeat

English summary
Rashmika Mandanna Reveals About Sharing Screen With Tiger Shroff, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X