For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಮೊದಲ ಹಿಂದಿ ಚಿತ್ರ ಫ್ಲಾಪ್; ಎರಡನೇ ಚಿತ್ರಕ್ಕಿಲ್ಲ ಚಿತ್ರಮಂದಿರದ ಭಾಗ್ಯ!

  |

  ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಡ್ರೀಮ್ ಸ್ಟಾರ್ಟ್ ಪಡೆದುಕೊಂಡರು. ಫಸ್ಟ್ ಬಾಲ್ ಸಿಕ್ಸರ್ ಬಾರಿಸಿದ ರಶ್ಮಿಕಾ ಮಂದಣ್ಣ ಎರಡನೇ ಚಿತ್ರದಲ್ಲಿಯೇ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಬೆನ್ನಲ್ಲೇ ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟ ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ತೆಲುಗು ಚಿತ್ರಗಳಲ್ಲಿ ನಟಿಸಿದರು.

  ಅದರಲ್ಲಿಯೂ ರಶ್ಮಿಕಾ ಮಂದಣ್ಣ ಅಭಿನಯದ ಗೀತಾ ಗೋವಿಂದಂ ಚಿತ್ರ ರಶ್ಮಿಕಾ ಮಂದಣ್ಣಗೆ ಹೆಚ್ಚು ರೀಚ್ ತಂದುಕೊಟ್ಟಿತು. ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಷ್ ಎಂಬ ಪಟ್ಟವನ್ನೂ ಸಹ ಗಿಟ್ಟಿಸಿಕೊಂಡರು. ಈ ನಡುವೆ ಕನ್ನಡದಲ್ಲಿ ನಟ ದರ್ಶನ್, ಗಣೇಶ್ ಹಾಗೂ ಧ್ರುವ ಸರ್ಜಾ ಅಭಿನಯದ ಚಿತ್ರಗಳಲ್ಲೂ ನಟಿಸಿದ ರಶ್ಮಿಕಾ ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ನಟನೆಯ ಚಿತ್ರಗಳಿಗೂ ಬಣ್ಣ ಹಚ್ಚಿದ್ದರು.

  ಕನ್ನಡ ಹಾಗೂ ತೆಲುಗು ಮಾತ್ರವಲ್ಲದೇ ನಟ ಕಾರ್ತಿ ಅಭಿನಯದ ಸುಲ್ತಾನ್ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ ಅಮಿತಾಭ್ ಬಚ್ಚನ್ ನಟನೆಯ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್‌ ಕದ ತಟ್ಟಿದ್ದರು. ಈ ಚಿತ್ರದ ನಂತರ ರಶ್ಮಿಕಾ ನಟನೆಯ ಮಿಷನ್ ಮಜ್ನು ಹಾಗೂ ಅನಿಮಲ್ ಎಂಬ ಎರಡು ಹಿಂದಿ ಚಿತ್ರಗಳೂ ಸಹ ಬಿಡುಗಡೆಗೆ ಸಜ್ಜಾಗುತ್ತಿವೆ. ಆ ಇದೀಗ ಮಿಷನ್ ಮಜ್ನು ಚಿತ್ರಮಂದಿರದ ಬದಲು ನೇರವಾಗಿ ಓಟಿಟಿಗೆ ಲಗ್ಗೆ ಇಡಲಿದೆ ಎಂಬ ಸುದ್ದಿ ಹೊರಬಿದ್ದಿದೆ.

  ಮಿಷನ್ ಮಜ್ನು ಯಾವಾಗ ಓಟಿಟಿಗೆ?

  ಮಿಷನ್ ಮಜ್ನು ಯಾವಾಗ ಓಟಿಟಿಗೆ?

  ಶಂತಾನು ಬಾಗ್ಷಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮಿಷನ್ ಮಜ್ನು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿನಾಗಿ ನಟಿಸಿದ್ದು ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ಅಭಿನಯಿಸಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಚಿತ್ರ ಎನ್ನಲಾಗಿದ್ದು ಮೊದಲಿಗೆ ಮೇ ತಿಂಗಳ 13ರಂದು ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿತ್ತು, ನಂತರ ಜೂನ್ 10ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಅಪ್‌ಲೋಡ್ ಮಾಡಲಾಗಿತ್ತು. ಆದರೆ ಈ ಎರಡೂ ದಿನಾಂಕಗಳಲ್ಲೂ ಬಿಡುಗಡೆಯಾಗದ ಮಿಷನ್ ಮಜ್ನು ಈಗ ಜನವರಿ 18ರಂದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಓಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ.

  ಗುಡ್ ಬೈ ಫ್ಲಾಪ್, ಮಜ್ನು ನೇರ ಓಟಿಟಿಗೆ

  ಗುಡ್ ಬೈ ಫ್ಲಾಪ್, ಮಜ್ನು ನೇರ ಓಟಿಟಿಗೆ

  ಇನ್ನು ರಶ್ಮಿಕಾ ಮಂದಣ್ಣಗೆ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಲಭಿಸಿದ್ದ ಒಳ್ಳೆಯ ಆರಂಭ ಬಾಲಿವುಡ್‌ನಲ್ಲಿ ಸಿಗಲೇ ಇಲ್ಲ. 30 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ರಶ್ಮಿಕಾ ಅಭಿನಯದ ಮೊದಲ ಹಿಂದಿ ಚಿತ್ರ ಗುಡ್ ಬೈ 9.66 ಕೋಟಿ ಕಲೆಹಾಕಿ ದೊಡ್ಡ ನಷ್ಟ ಅನುಭವಿಸಿತ್ತು. ಹೀಗೆ ಮೊದಲ ಹಿಂದಿ ಚಿತ್ರದಲ್ಲೇ ಹಿನ್ನಡೆ ಅನುಭವಿಸಿದ್ದ ರಶ್ಮಿಕಾ ಮಂದಣ್ಣ ಅಭಿನಯದ ಎರಡನೇ ಹಿಂದಿ ಚಿತ್ರವೂ ಸಹ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಭಾಗ್ಯವನ್ನು ಕೈತಪ್ಪಿಸಿಕೊಂಡಿದ್ದು ನೆಟ್ಟಿಗರು ಈ ವಿಷಯವನ್ನಿಟ್ಟುಕೊಂಡು ರಶ್ಮಿಕಾ ಕಾಲೆಳೆದಿದ್ದಾರೆ.

  ನೇರ ಓಟಿಟಿ ಬಿಡುಗಡೆ ಬಾಲಿವುಡ್‌ನ ಹೊಸ ಟ್ರೆಂಡ್

  ನೇರ ಓಟಿಟಿ ಬಿಡುಗಡೆ ಬಾಲಿವುಡ್‌ನ ಹೊಸ ಟ್ರೆಂಡ್

  ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ರಶ್ಮಿಕಾ ಅಭಿನಯದ ಮಿಷನ್ ಮಜ್ನು ನೇರವಾಗಿ ಓಟಿಟಿಗೆ ಲಗ್ಗೆ ಇಡುತ್ತಿರುವ ಮೊದಲ ಚಿತ್ರವೇನಲ್ಲ. ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಕಟ್‌ಪುಟ್ಲಿ, ಆಲಿಯಾ ಭಟ್ ನಟನೆಯ ಡಾರ್ಲಿಂಗ್ಸ್ ಹಾಗೂ ಕರಣ್ ಜೋಹಾರ್ ಮತ್ತು ವಿಕ್ಕಿ ಕೌಶಾಲ್ ಕಾಂಬಿನೇಶನ್‌ನ 'ಗೋವಿಂದ ನಾಮ್ ಮೇರಾ' ಚಿತ್ರಗಳೂ ಸಹ ಚಿತ್ರಮಂದಿರಗಳಲ್ಲಿ ತೆರೆ ಕಾಣದೇ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿದ್ದವು.

  English summary
  Rashmika Mandanna and Siddharth Malhotra starrer 2nd Hindi film Mission Majnu to release directly on OTT on 18th January. Read on
  Thursday, November 17, 2022, 15:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X