For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾ ಟ್ರೈಲರ್ ಬಿಡುಗಡೆ: ಬಚ್ಚನ್ ಮಗಳಾಗಿ ಮಿಂಚಿದ ಕನ್ನಡತಿ

  |

  ನಟಿ ರಶ್ಮಿಕಾ ಮಂದಣ್ಣ ಬಹಳ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟಿಯ ಪಟ್ಟಕ್ಕೆ ಏರಿದ್ದಾರೆ. ಆದರೆ ಅವರು ಈ ವರೆಗೆ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಮರಸುತ್ತುವ, ಗ್ಲಾಮರಸ್ ನಾಯಕಿಯಾಗಿಯಷ್ಟೆ ಕಾಣಿಸಿಕೊಂಡಿದ್ದಾರೆ.

  ಬಹುತೇಕ ನಾಯಕ ಪ್ರಧಾನ ಸಿನಿಮಾಗಳಲ್ಲಿಯೇ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ ಆದರೆ ಇದೀಗ ರಶ್ಮಿಕಾ ಹಿಂದಿಯಲ್ಲಿ ನಟಿಸಿರುವ 'ಗುಡ್ ಬೈ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಈ ಕಥಾ ಪ್ರಧಾನ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ!ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ!

  'ಗುಡ್ ಬೈ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ. 'ಗುಡ್ ಬೈ' ಸಿನಿಮಾವು ಕೌಟುಂಬಿಕ ಕತೆಯಾಗಿದ್ದು, ಜನರೇಷನ್ ಗ್ಯಾಪ್‌, ಅಪ್ಪ ಮಕ್ಕಳ ನಡುವಿನ ಸಂಬಂಧ. ಆಧುನಿಕತೆ ಮತ್ತು ಹಳೆಯ ಸಂಪ್ರದಾಯಗಳ ನಡುವಿನ ತಿಕ್ಕಾಟ, ಕೌಟುಂಬಿಕ ಮೌಲ್ಯ, ಪೋಷಕರ ಮಹತ್ವ ಇನ್ನಿತರೆ ವಿಷಯಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ.

  'ಗುಡ್ ಬೈ' ಸಿನಿಮಾದಲ್ಲಿ ರಶ್ಮಿಕಾರ ತಾಯಿಯ ಸಾವಾಗಿರುತ್ತದೆ, ಅವರ ತಾಯಿಯ ಅಂತಿಮ ಕಾರ್ಯವನ್ನು ರಶ್ಮಿಕಾ ಸೇರಿದಂತೆ ಮಕ್ಕಳು ಹೇಗೆ ನಡೆಸಿಕೊಡುತ್ತಾರೆ ಎಂಬುದನ್ನು ಹಾಸ್ಯಮಿಶ್ರಿತ ಭಾವುಕ ಮಾದರಿಯಲ್ಲಿ ತೋರಿಸುವ ಸಿನಿಮಾ 'ಗುಡ್ ಬೈ'. ಸಿನಿಮಾದಲ್ಲಿ ರಶ್ಮಿಕಾರ ತಾಯಿಯ ಪಾತ್ರದಲ್ಲಿ ನೀನಾ ಗುಪ್ತಾ ನಟಿಸಿದ್ದಾರೆ.

  ಟ್ರೈಲರ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಅಮಿತಾಬ್ ಬಚ್ಚನ್ ಜಗಳವಾಡುತ್ತಿರುವ ದೃಶ್ಯಗಳು ಹೆಚ್ಚಿವೆ. ಆದರೆ ರಶ್ಮಿಕಾರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಪಾತ್ರ ಅವರಿಂದ ಹೆಚ್ಚಿನ ಅಭಿನಯ ಬೇಡುತ್ತಿದೆ. ಅಂತೆಯೇ ರಶ್ಮಿಕಾ ಸಹ ಶ್ರಮಪಟ್ಟು ನಟಿಸಿರುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.

  ಅಮಿತಾಬ್ ಬಚ್ಚನ್, ರಶ್ಮಿಕಾ ಮಂದಣ್ಣ, ನೀನಾ ಗುಪ್ತ ಮಾತ್ರವೆ ಅಲ್ಲದೆ, ಸಿನಿಮಾದಲ್ಲಿ ಪವೈಲ್ ಗುಲಾಟಿ, ಇಲಿ ಅವರ್ಮಾ, ಕಮಿಡಿಯನ್ ಸುನಿಲ್ ಗ್ರೋವರ್, ಸಾಹಿಲ್ ಮೆಹ್ತಾ, ಆಶಿಷ್ ವಿಧ್ಯಾರ್ಥಿ ಇನ್ನೂ ಹಲವರಿದ್ದಾರೆ. ಸಿನಿಮಾವನ್ನು ವಿಕಾಸ್ ಭಾಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್. ಜೊತೆಗೆ ಶೋಭಾ ಕಪೂರ್, ರುಚಿಕಾ ಕಪೂರ್ ಅವರುಗಳು ಸಹ ನಿರ್ಮಾಪಕಿಯರಾಗಿದ್ದಾರೆ. ಸಿನಿಮಾವು ಅಕ್ಟೋಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

  ರಶ್ಮಿಕಾ ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮೊದಲು ಸಹಿ ಹಾಕಿದ ಹಿಂದಿ ಸಿನಿಮಾ 'ಮಿಷನ್ ಮಜ್ನು' ಇನ್ನೂ ಬಿಡುಗಡೆ ಆಗಿಲ್ಲ. ಆ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಭೂಮಿಕಾ ಚಾವ್ಲಾ ಜೊತೆ ನಟಿಸಿದ್ದಾರೆ ರಶ್ಮಿಕಾ. ಜೊತೆಗೆ ದಕ್ಷಿಣದಲ್ಲಿ 'ಪುಷ್ಪ 2' ಹಾಗೂ ತಮಿಳು ನಟ ವಿಜಯ್ ಜೊತೆ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

  English summary
  Rashmika Mandanna's Hindi movie Good Bye's trailer released. Amitabh Bachchan Acted along with Rashmika in the movie.
  Tuesday, September 6, 2022, 20:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X