For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟನ ಜೊತೆಗಿನ ರಶ್ಮಿಕಾ ಮಂದಣ್ಣ ಹೊಸ ಹಿಂದಿ ಸಿನಿಮಾ ಬಂದ್: ಕಾರಣ?

  |

  ನಟಿ ರಶ್ಮಿಕಾ ಮಂದಣ್ಣ, ಕನ್ನಡದ ಬಳಿಕ ತೆಲುಗು, ತಮಿಳಿನಲ್ಲಿ ಮಿಂಚಿ ಈಗ ಬಾಲಿವುಡ್‌ನಲ್ಲಿ ರಾರಾಜಿಸಲು ನಿಶ್ಚಯಿಸಿ ಮುಂಬೈಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದಾರೆ.

  ಈದಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಎರಡೂ ಸಿನಿಮಾಗಳಲ್ಲಿ ಸೂಪರ್ ಸ್ಟಾರ್‌ಗಳೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ ಕೊಡಗಿನ ಕುವರಿ. ಈ ಎರಡೂ ಸಿನಿಮಾಗಳು ಬಿಡುಗಡೆ ಆಗುವ ಮುನ್ನವೇ ಬಾಲಿವುಡ್‌ನ ದೊಡ್ಡ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಆಫರ್ ಸಹ ಬಂದಿತ್ತು, ಶೂಟಿಂಗ್ ದಿನಾಂಕ ಸಹ ನಿಗದಿಯಾಗಿತ್ತು. ಆದರೆ ಇನ್ನೇನು ಸಿನಿಮಾ ಶುರುವಾಗಬೇಕು ಎಂದುಕೊಂಡಿದ್ದಾಗ ಸಿನಿಮಾ ಹಠಾತ್ ನಿಂತು ಹೋಗಿದೆ.

  ಕಾರ್ತಿಕ್ ಆರ್ಯನ್ ಜೊತೆ ರಶ್ಮಿಕಾ ಮಂದಣ್ಣ! ಆದರೆ ಸಿನಿಮಾ ಮಾಡುತ್ತಿಲ್ಲ, ಮತ್ತೇನು?ಕಾರ್ತಿಕ್ ಆರ್ಯನ್ ಜೊತೆ ರಶ್ಮಿಕಾ ಮಂದಣ್ಣ! ಆದರೆ ಸಿನಿಮಾ ಮಾಡುತ್ತಿಲ್ಲ, ಮತ್ತೇನು?

  ರಶ್ಮಿಕಾ ಮಂದಣ್ಣ ನಟಿಸಬೇಕಿದ್ದ ಮೂರನೇ ಕನ್ನಡ ಸಿನಿಮಾ ಹಠಾತ್ತನೆ ನಿಂತು ಹೋಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ, ಖ್ಯಾತ ನಟ ಟೈಗರ್ ಶ್ರಾಫ್ ಅವರೊಟ್ಟಿಗೆ ತೆರೆ ಹಂಚಿಕೊಳ್ಳುವವರಿದ್ದರು. ಆದರೆ ಇದೀಗ ಸಿನಿಮಾ ಹಠಾತ್ತನೆ ನಿಂತು ಹೋಗಿದೆ.

  ರಶ್ಮಿಕಾ ಮಂದಣ್ಣ ಹಾಗೂ ಟೈಗರ್ ಶ್ರಾಫ್ ನಟನೆಯ 'ಡೀಲಾ ಸ್ಕ್ರೀವ್' ಸಿನಿಮಾ ಚಿತ್ರೀಕರಣ ಶುರುವಾಗಲು ಕೆಲವು ದಿನಗಳಷ್ಟೆ ಬಾಕಿ ಇತ್ತು. ಆದರೆ ಕೊನೆಯ ಹಂತದಲ್ಲಿ ಸಿನಿಮಾವನ್ನು ನಿಲ್ಲಿಸಲಾಗಿದೆ. ಇದಕ್ಕೆ ಕಾರಣ ಸಿನಿಮಾದ ಬಜೆಟ್.

  ಬಜೆಟ್ ಕಡಿಮೆಯಾದರಷ್ಟೆ ಚಿತ್ರೀಕರಣ

  ಬಜೆಟ್ ಕಡಿಮೆಯಾದರಷ್ಟೆ ಚಿತ್ರೀಕರಣ

  ಸಿನಿಮಾವನ್ನು ಬಾಲಿವುಡ್‌ನ ಜನಪ್ರಿಯ ನಿರ್ಮಾಣ ಸಂಸ್ಥೆ ಧರ್ಮಾ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕೆ ಇಂತಿಷ್ಟೆಂದು ಬಜೆಟ್ ಅನ್ನು ನಿಗದಿಪಡಿಸಲಾಗಿತ್ತು. ಆದರೆ ಸಿನಿಮಾದ ಯೋಜನೆ ಹಂತದಲ್ಲಿ ಸಿನಿಮಾದ ಅಂದಾಜು ಬಜೆಟ್‌ಗಿಂತಲೂ 50% ಹೆಚ್ಚಿನ ಬಜೆಟ್‌ ಸಿನಿಮಾದ್ದಾಗುತ್ತಿರುವ ಕಾರಣ ನಿರ್ಮಾಪಕ ಕರಣ್ ಜೋಹರ್ ಸಿನಿಮಾವನ್ನು ನಿಲ್ಲಿಸಲು ಹೇಳಿದ್ದಾರೆ. ಸಿನಿಮಾದ ಬಜೆಟ್ ಅನ್ನು ಕಂಟ್ರೋಲ್ ಮಾಡಿದ ಬಳಿಕವಷ್ಟೆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

  ಬಜೆಟ್ ಹೆಚ್ಚಳಕ್ಕೆ ಟೈಗರ್ ಶ್ರಾಫ್ ಕಾರಣ

  ಬಜೆಟ್ ಹೆಚ್ಚಳಕ್ಕೆ ಟೈಗರ್ ಶ್ರಾಫ್ ಕಾರಣ

  ಸಿನಿಮಾದ ಬಜೆಟ್ ಹೆಚ್ಚಳಕ್ಕೆ ಟೈಗರ್ ಶ್ರಾಫ್ ಅವರೇ ಕಾರಣ ಎನ್ನಲಾಗುತ್ತಿದೆ. ಇತ್ತೀಚೆಗೆ ಸತತವಾಗಿ ಸಿನಿಮಾಗಳು ಸೋಲುತ್ತಿರುವ ಕಾರಣ ಟೈಗರ್ ಶ್ರಾಫ್ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು ಎಂದು ಕರಣ್ ಜೋಹರ್ ಕೇಳಿದ್ದಾರೆ. ಸಂಭಾವನೆಯಾಗಿ 20 ಕೋಟಿ ರುಪಾಯಿ ಹಣ ನೀಡುವುದಾಗಿ ಕರಣ್ ಜೋಹರ್ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಟೈಗರ್ ಶ್ರಾಪ್ 35 ಕೋಟಿಗಿಂತಲೂ ಕಡಿಮೆ ಮೊತ್ತಕ್ಕೆ ಒಪ್ಪುವುದಿಲ್ಲ ಎಂದು ಹಠ ಮಾಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ನಿಂತಿದೆ.

  140 ಕೋಟಿ ತಲುಪುತ್ತಿದೆ ಬಜೆಟ್

  140 ಕೋಟಿ ತಲುಪುತ್ತಿದೆ ಬಜೆಟ್

  'ಸ್ಕ್ರೂ ಡೀಲಾ' ಸಿನಿಮಾವನ್ನು 80 ಕೋಟಿಯಲ್ಲಿ ಮಾಡಲು ಕರಣ್ ಜೋಹರ್ ನಿರ್ಧಾರ ಮಾಡಿದ್ದರು ಆದರೆ ದುಬಾರಿ ಸಂಭಾವನೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಬಜೆಟ್ ಹೆಚ್ಚಳವಾಗಿ 140 ಕೋಟಿಗೆ ತಲುಪುತ್ತಿದೆ. ಆಮಿರ್ ಖಾನ್‌ ಅಂಥಹಾ ನಟರೇ 100 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವಲ್ಲಿ ಸೋಲುತ್ತಿರುವ ಈ ಸಮಯದಲ್ಲಿ ಟೈಗರ್ ಶ್ರಾಫ್‌ ಅನ್ನು ನೆಚ್ಚಿಕೊಂಡು 140 ಕೋಟಿ ಬಂಡವಾಳ ಹಾಕಲು ಹಿಂಜರಿಯುತ್ತಿದ್ದಾರೆ ನಿರ್ಮಾಪಕ ಕರಣ್ ಜೋಹರ್ ಹಾಗಾಗಿ ಸಿನಿಮಾವನ್ನು ನಿಲ್ಲಿಸಲಾಗಿದೆ.

  ಸ್ಟಾರ್ ನಟರು ಸೋಲುತ್ತಿದ್ದಾರೆ

  ಸ್ಟಾರ್ ನಟರು ಸೋಲುತ್ತಿದ್ದಾರೆ

  ಬಾಲಿವುಡ್‌ನ ಸಿನಿಮಾಗಳು ಸತತವಾಗಿ ಒಂದರ ಹಿಂದೊಂದು ಸೋಲುತ್ತಿವೆ. ಪಕ್ಕಾ ಪೈಸಾ ವಸೂಲ್ ನಟರೆಂದೇ ಕರೆಯಲಾಗುವ ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಮಿರ್ ಖಾನ್, ಅಮಿತಾಬ್ ಬಚ್ಚನ್ ಅವರುಗಳು ಸಿನಿಮಾಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ಧಾರುಣವಾಗಿ ಸೋತಿವೆ. ಇದೇ ಕಾರಣಕ್ಕೆ ಟೈಗರ್ ಶ್ರಾಫ್ ಅಂಥಹಾ ಯುವ ನಟರ ಮೇಲೆ ಬಂಡವಾಳ ಹೂಡಲು ಕರಣ್ ಜೋಹರ್ ಹಿಂದಡಿ ಇಡುತ್ತಿದ್ದಾರೆ. ಆದರೆ ಇದರಿಂದ ನಷ್ಟವಾಗುತ್ತಿರುವುದು ಮಾತ್ರ ಕನ್ನಡತಿ ರಶ್ಮಿಕಾ ಮಂದಣ್ಣಗೆ.

  English summary
  Actress Rashmika Mandanna's new Bollywood movie stops before starting shooting. Karan Johar stops the movie because of Budget issue.
  Friday, September 2, 2022, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X