ರಶ್ಮಿಕಾ ಗೆ ಬಾಲಿವುಡ್ ಬಾಗಿಲು ತೆರೆದ 'ಟಾಪ್ ಠಕ್ಕರ್' ಹಾಡು ಬಿಡುಗಡೆ

ನಟಿ ರಶ್ಮಿಕಾ ಮಂದಣ್ಣ ರ ಬಾಲಿವುಡ್ ಪಯಣ ಈಗಾಗಲೇ ಆರಂಭವಾಗಿದೆ. ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಅವರ ಬಾಲಿವುಡ್ ಪಯಣ ಆರಂಭವಾಗಿದ್ದು ಹಾಡೊಂದರ ಮೂಲಕ. ಆ ಹಾಡು ಈಗ ಬಿಡುಗಡೆ ಆಗಿದೆ.

Recommended Video

ಸರ ಕದಿಯಲು ಬಂದವರಿಗೆ ಪಾಠ ಕಲಿಸಿದ ರಶ್ಮಿಕಾ ಮಂದಣ್ಣ | Filmibeat Kannada

ರ್ಯಾಪರ್ ಬಾದ್‌ಶಾ 'ಟಾಪ್ ಠಕ್ಕರ್' ಆಲ್ಬಂ ನ ಹಾಡಿಗೆ ಸೊಂಟ ಬಳುಕಿಸಿದ್ದಾರೆ ರಶ್ಮಿಕಾ ಮಂದಣ್ಣ. ಆ ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ಎರಡು ಹಿಂದಿ ಸಿನಿಮಾಗಳಿಂದ ರಶ್ಮಿಕಾ ಗೆ ಬುಲಾವ್ ಬಂದಿತ್ತು. ರಶ್ಮಿಕಾರ ಬಾಲಿವುಡ್ ಪಯಣ ಆರಂಭಕ್ಕೆ ನಾಂದಿಯಾಗಿದ್ದ 'ಟಾಪ್ ಠಕ್ಕರ್' ಹಾಡು ಇಂದು (ಫೆಬ್ರವರಿ 12) ಬಿಡುಗಡೆ ಆಗಿದೆ.

ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಿಸಿ, ಬಾದ್‌ ಶಾ, ರಶ್ಮಿಕಾ ಮಂದಣ್ಣ, ಅಮಿತ್ ಉಚ್ಚಾನಾ ನಟಿಸಿರುವ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.

Rashmika Mandannas Top Tucker Son Released On You Tube

ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಚೆಲುವೆಯಾಗಿದ್ದು, ಆಕೆಯ ಹಿಂದೆ ಕಳ್ಳರಾದ ಬಾದ್‌ ಶಾ, ಅಮಿತ್ ಉಚ್ಚಾನಾ ಬಿದ್ದಿದ್ದಾರೆ. ಆಕೆಯ ಮನಸ್ಸು ಗೆಲ್ಲುವ ಜೊತೆಗೆ ಆಕೆಯ ಸರವನ್ನೂ ದೋಚುವ ಉದ್ದೇಶ ಅವರದ್ದು.

ಆದರೆ ಚಾಲಾಕಿ ರಶ್ಮಿಕಾ ಮಂದಣ್ಣ ಅವರ ಯೋಚನೆಗಳನ್ನು ಫಲಿಸಲು ಬಿಡುವುದಿಲ್ಲ. ಅವರದ್ದೇ ಯೋಜನೆಯನ್ನು ಅವರಿಗೆ ತಿರುಗಿಸಿ ಸರ ಉಳಿಸಿಕೊಳ್ಳುತ್ತಾರೆ. ರಶ್ಮಿಕಾ ಜೊತೆಗೆ ಯುವನ್ ಶಂಕರ್ ರಾಜಾ ಸಹ ಹಾಡಿನಲ್ಲಿ ನಟಿಸಿದ್ದಾರೆ.

ಹಾಡಿಗೆ ಸಾಹಿತ್ಯವನ್ನು ಬಾದ್‌ ಶಾ ಬರೆದಿದ್ದಾರೆ. ಹಾಡಿನಲ್ಲಿ ಬರುವ ತಮಿಳು ಸಾಲುಗಳನ್ನು ನಯನತಾರಾ ಬಾಯ್‌ಫ್ರೆಂಡ್ ವಿಗ್ನೇಶ್ ಶಿವನ್ ಬರೆದಿದ್ದಾರೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಬಾರಿ ಹಾಡನ್ನು ವೀಕ್ಷಿಸಲಾಗಿದೆ.

More from Filmibeat

English summary
Rashmika Mandanna's Top Tucker song released on YouTube. Badshah, Amit Uchchana, Yuvan Shankar Raja acted in the song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X