ಶೂಟಿಂಗ್‌ ಸೆಟ್‌ನಲ್ಲಿ ಅಮಿತಾಬ್ ಬಚ್ಚನ್‌ ಜೊತೆ ರಶ್ಮಿಕಾ ಮಂದಣ್ಣ ಜಗಳ!

ನಟಿ ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ 'ಗುಡ್ ಬೈ' ಟ್ರೈಲರ್ ಎರಡು ದಿನದ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲಿ ಅಪ್ಪ-ಮಗಳು ಸರಿಯಾಗಿ ಜಗಳವಾಡಿದ್ದಾರೆ. ಟ್ರೈಲರ್‌ನಲ್ಲಿಯೂ ರಶ್ಮಿಕಾ ಹಾಗೂ ಅಮಿತಾಬ್ ಬಚ್ಚನ್ ನಡುವಿನ ಜಗಳವೇ ಹೈಲೆಟ್. ಆದರೆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಿಜವಾಗಿಯೂ ನಟಿ ರಶ್ಮಿಕಾ ಮಂದಣ್ಣ, ಅಮಿತಾಬ್ ಬಚ್ಚನ್ ಜೊತೆ ಜಗಳವಾಡಿದರಂತೆ.

ಮಂಗಳವಾರ 'ಗುಡ್ ಬೈ' ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ಮುಂಬೈನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ, ತಾವು ನಿಜವಾಗಿಯೂ ಲಿಜೆಂಡ್ ಅಮಿತಾಬ್ ಬಚ್ಚನ್ ಜೊತೆ ಸಿನಿಮಾದ ಸೆಟ್‌ನಲ್ಲಿ ಜಗಳವಾಡಿದ್ದಾಗಿ ಹೇಳಿಕೊಂಡಿದ್ದಾರೆ. ಜಗಳಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ನಾಯಿಗಾಗಿ ರಶ್ಮಿಕಾ ಮಂದಣ್ಣ ಜಗಳ

ನಾಯಿಗಾಗಿ ರಶ್ಮಿಕಾ ಮಂದಣ್ಣ ಜಗಳ

'ಗುಡ್ ಬೈ' ಸಿನಿಮಾದಲ್ಲಿ ನಾಯಿಯೊಂದಿದೆ. ಸಿನಿಮಾದಲ್ಲಿ ನಾಯಿಯ ಪಾತ್ರವೂ ಮಹತ್ವದ್ದು. ಮೊದಲೇ ರಶ್ಮಿಕಾ ಮಂದಣ್ಣ ಶ್ವಾನಪ್ರೇಮಿ. ಅವರಿಗೆ 'ಗುಡ್ ಬೈ' ಸಿನಿಮಾದಲ್ಲಿ ನಟಿಸಿರುವ ನಾಯಿ ಬಹುವಾಗಿ ಇಷ್ಟವಾಗಿದೆ. ಶೂಟಿಂಗ್ ಮುಗಿದ ಬಳಿಕ ಆ ನಾಯಿಯನ್ನು ತಾವು ತೆಗೆದುಕೊಂಡು ಹೋಗುವುದಾಗಿ ಹೇಳಿದರಂತೆ. ಆದರೆ ಅಮಿತಾಬ್ ಬಚ್ಚನ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲ ಆ ನಾಯಿ ನನಗೆ ಬೇಕು ಎಂದರಂತೆ. ಹೀಗೆ ಘಟನೆ ವಿವರಸಿದ್ದಾರೆ ರಶ್ಮಿಕಾ ಮಂದಣ್ಣ.

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ಜಗಳ

ಅಮಿತಾಬ್ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ ಜಗಳ

''ನಾಯಿಯ ವಿಷಯವಾಗಿ ನಾನು ಅಮಿತಾಬ್ ಬಚ್ಚನ್ ಸಾಕಷ್ಟು ಜಗಳ ಮಾಡಿದ್ದೇವೆ. ನೀವು ಟ್ರೈಲರ್‌ನಲ್ಲಿ ನೋಡುತ್ತಿರುವಂತೆ ಅಪ್ಪ-ಮಗಳ ಹೇಗೆ ಪರಸ್ಪರ ಜಗಳ, ವಾದ ಮಾಡುತ್ತಾರೊ ಹಾಗೆಯೇ ನಾನು ಹಾಗೂ ಬಚ್ಚನ್ ಸರ್, ಸಿನಿಮಾ ಚಿತ್ರೀಕರಣೆಯ ವೇಳೆ ಆ ನಾಯಿಯನ್ನು ಕೊಂಡೊಯ್ಯುವ ಬಗ್ಗೆ ನಿಜವಾಗಿಯೂ ಜಗಳ ಆಡಿದೆವು. ನಾಯಿ ನನಗೆ ಬೇಕೆಂದು ನಾನು ಹಠ ಮಾಡಿದೆ. ಅಮಿತಾಬ್ ಬಚ್ಚನ್ ಅವರು, ಆ ನಾಯಿಯನ್ನು ನನ್ನ ಮನೆಗೆ ಕೊಂಡೊಯ್ಯುತ್ತೇನೆ ಎಂದರು. ಕೊನೆಗೆ ನಾನು ಆ ನಾಯಿಯನ್ನು ಯಾರಿಗೂ ಗೊತ್ತಾಗದಂತೆ ಸೆಟ್‌ನಿಂದ ಕಿಡ್ನಾಪ್ ಮಾಡಿದೆ'' ಎಂದಿದ್ದಾರೆ.

ನಾಯಿಯನ್ನು ಅಮ್ಮನಿಗೆ ಉಡುಗೊರೆಯಾಗಿ ನೀಡಿದ ರಶ್ಮಿಕಾ

ನಾಯಿಯನ್ನು ಅಮ್ಮನಿಗೆ ಉಡುಗೊರೆಯಾಗಿ ನೀಡಿದ ರಶ್ಮಿಕಾ

'ಸ್ಟುಪಿಡ್' ಎಂದು ಹೆಸರಿಟ್ಟಿರುವ ಆ ನಾಯಿಯನ್ನು ನಟಿ ರಶ್ಮಿಕಾ ಮಂದಣ್ಣ ಕೊಂಡೊಯ್ದು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರಂತೆ. ಅದೂ ಮುಂಬೈ ಅಥವಾ ಹೈದರಾಬಾದ್ ಮನೆಯಲ್ಲಲ್ಲ ಬದಲಿಗೆ ಕೊಡಗಿನ ಮನೆಯಲ್ಲಿ. ತಮ್ಮ ತಾಯಿ ಹಾಗೂ ತಂಗಿಗೆ ಆ ನಾಯಿಯನ್ನು ಉಡುಗೊರೆಯಾಗಿ ರಶ್ಮಿಕಾ ಮಂದಣ್ಣ ನೀಡಿದ್ದಾರೆ. ಆ ನಾಯಿಯ ಚುರುಕುತನಕ್ಕೆ ತಾನು ಮಾರುಹೋಗಿದ್ದಾಗಿ ರಶ್ಮಿಕಾ ಮಂದಣ್ಣ ಟ್ರೈಲರ್ ರಿಲೀಸ್‌ನ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅನ್ನು ಭೇಟಿಯಾದ ಸಂದರ್ಭ ಹೇಗಿತ್ತು?

ಅಮಿತಾಬ್ ಬಚ್ಚನ್ ಅನ್ನು ಭೇಟಿಯಾದ ಸಂದರ್ಭ ಹೇಗಿತ್ತು?

ಅಮಿತಾಬ್ ಬಚ್ಚನ್‌ರನ್ನು ಮೊದಲ ಭಾರಿಗೆ ಭೇಟಿಯಾದ ಸಂದರ್ಭವನ್ನೂ ವಿವರಿಸಿರುವ ರಶ್ಮಿಕಾ ಮಂದಣ್ಣ, ''ನಾನು ಅಮಿತಾಬ್ ಬಚ್ಚನ್ ಅವರಿಗಾಗಿ ಕಾಯುತ್ತಿದ್ದೆ. ಬಚ್ಚನ್ ಸರ್ ಬಂದು ನನ್ನನ್ನು ನೋಡಿಯೂ ನೋಡದಂತೆ ಮುಂದೆ ಹೊರಟು ಹೋದರು. ಆಗ ನನಗೆ ಅನ್ನಿಸಿತು. ಬಹುಷಃ ನಾನು ಅವರಿಗೆ ಇಷ್ಟವಾಗಿಲ್ಲ ಎಂದು. ಆದರೆ ಬಳಿಕ ನಾನು ಹೋಗಿ ನನ್ನ ಪರಿಚಯ ಮಾಡಿಕೊಂಡು ನಿಮ್ಮ ಮಗಳ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದೆ. ಆಗಲೂ ಅವರು ಸಹಜವಾಗಿಯೇ ಮಾತನಾಡಿದರು. ಆದರೆ ಚಿತ್ರೀಕರಣದ ಸಮಯದಲ್ಲಿ ಅವರ ನಿಜವಾದ ವ್ಯಕ್ತಿತ್ವ ಅರ್ಥವಾಯಿತು. ಅವರೊಬ್ಬ ಅದ್ಭುತ ಜೀವಿ. ನಾನು ಅವರೊಟ್ಟಿಗೆ ಇಷ್ಟು ದಿನ ಕಳೆದಿದ್ದು ನಾನು ಮಾಡಿದ ಪುಣ್ಯ'' ಎಂದಿದ್ದಾರೆ ರಶ್ಮಿಕಾ.

More from Filmibeat

English summary
Actress Rashmika Mandanna said she had a fight with Mr Amitabh Bachchan on Good Bye Hindi movie set over a dog.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X