'ಮಾಸ್ಟರ್ ಪೀಸ್'ಅನ್ನು ತೆರೆಮೇಲೆ ನೋಡಲು ಕಾತರಳಾಗಿದ್ದೇನೆ; ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಾತು

ಟಾಲಿವುಡ್ ನ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಗೀತಾ ಗೋವಿಂದಂ ಸಿನಿಮಾ ಬಳಿಕ ಇಬ್ಬರ ನಡುವೆ ಉತ್ತಮ ಸ್ನೇಹ ಬಾಂಧವ್ಯವಿದೆ. ಲವ್, ಡೇಟಿಂಗ್ ಅಂತ ಇಬ್ಬರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು.

'ಡಿಯರ್ ಕಾಮ್ರೇಡ್' ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ರಶ್ಮಿಕಾ, ವಿಜಯ್ ದೇವರಕೊಂಡ ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷೆಯ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ರಿವೀಲ್ ಆಗಿದೆ. ವಿಜಯ್ ಕಿಲ್ಲಿಂಗ್ ಲುಕ್ ನಲ್ಲಿ ವಿಜಯ್ ದೇವರಕೊಂಡ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ.

ಮಾಸ್ಟರ್ ಪೀಸ್ ನೋಡಲು ಕಾತರಳಾಗಿದ್ದೇನೆ-ರಶ್ಮಿಕಾ

ಮಾಸ್ಟರ್ ಪೀಸ್ ನೋಡಲು ಕಾತರಳಾಗಿದ್ದೇನೆ-ರಶ್ಮಿಕಾ

ವಿಜಯ್ ದೇವರಕೊಂಡ ಲುಕ್ ಶೇರ್ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ವಿಜಯ್ ಅವರನ್ನು ಹಾಡಿ ಹೊಗಳಿ ಈ ಸಿನಿಮಾ ನೋಡಲು ಕಾತರಳಾಗಿದ್ದೇನೆ ಎಂದಿದ್ದಾರೆ. ಈ ಮಾಸ್ಟರ್ ಪೀಸ್ ಅನ್ನು ತೆರೆ ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಈ ಬಗ್ಗೆ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ

ಬರೆದುಕೊಂಡಿದ್ದಾರೆ.

ರಶ್ಮಿಕಾ ಟ್ವೀಟ್

ರಶ್ಮಿಕಾ ಟ್ವೀಟ್

'ಈ ಪೋಸ್ಟರ್ ನೋಡಿ ತುಂಬಾ ಹೆಮ್ಮೆಯಾಯಿತು. ಮಾಸ್ಟರ್ ಪೀಸ್ ಅನ್ನು ತೆರೆಮೇಲೆ ನೋಡಲು ಕಾತರಳಾಗಿದ್ದೇನೆ. ನಾನು ನಿಜವಾಗಿಯೂ ಡ್ಯಾನ್ಸ್ ಮಾಡಿ, ಶಿಳ್ಳೆ ಹಾಕುತ್ತೇನೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು' ಎಂದಿದ್ದಾರೆ.

ರಶ್ಮಿಕಾಗೆ ಪ್ರತಿಕ್ರಿಯೆ ನೀಡಿದ ವಿಜಯ್

ರಶ್ಮಿಕಾಗೆ ಪ್ರತಿಕ್ರಿಯೆ ನೀಡಿದ ವಿಜಯ್

ರಶ್ಮಿಕಾ ಟ್ವೀಟ್ ಗೆ ಪ್ರತಿಯಾಗಿ ವಿಜಯ್ ದೇವರಕೊಂಡ ಸಹ ಪ್ರತಿಕ್ರಿಯೆ ಮಾಡಿದ್ದಾರೆ. 'ನಿನ್ನ ಜೊತೆ ಚಿತ್ರಮಂದಿರದಲ್ಲಿರುವವರು ಸಹ ಹೆಜ್ಜೆ ಹಾಕುತ್ತಾರೆ. ಶಿಳ್ಳೆಹೊಡೆಯುತ್ತಾರೆ' ಎಂದು ಹೇಳಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮಾತುಕತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಇಬ್ಬರನ್ನು ತೆರೆಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

Recommended Video

KGF ಮೀರಿಸಲಿದೆ ಸಲಾರ್ | Filmibeat Kannada
ಲೈಗರ್ ಫಸ್ಟ್ ಲುಕ್

ಲೈಗರ್ ಫಸ್ಟ್ ಲುಕ್

ವಿಜಯ್ ದೇರಕೊಂಡ ಮತ್ತು ಅನನ್ಯಾ ಪಾಂಡೆ ನಟನೆಯ ಲೈಗರ್ ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಈ ಸಿನಿಮಾ ಮೂಲಕ ವಿಜಯ್ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ, ಜೊತೆಗೆ ಪ್ಯಾನ್ ಇಂಡಿಯಾ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Rashmika Mandanna says can not wait to watch the masterpiece on screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X