ಹಾರರ್ ಚಿತ್ರದಲ್ಲಿ ರಶ್ಮಿಕಾ ಬಿಂದಾಸ್ ಸ್ಟೆಪ್ಸ್ ; ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್
'ಕುಬೇರ' ಬಳಿಕ ರಶ್ಮಿಕಾ ಮಂದಣ್ಣ ನಟನೆಯ 'ಥಮ್ಮಾ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ರಶ್ಮಿಕಾ ಮಂದಣ್ಣ ಬಿಂದಾಸ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಚಿತ್ರಿಸಿದ್ದು ರಶ್ಮಿಕಾ ಹಾಟ್ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
'ತುಮ್ ಮೇರೆ ನಾ ಹುಯೆ' ಸಾಂಗ್‌ಗೆ ಸಚಿನ್-ಜಿಗರ್ ಟ್ಯೂನ್ ಹಾಕಿದ್ದು ಅಮಿತಾಬ್ ಭಟ್ಟಾಚಾರ್ಯ ಲಿರಿಕ್ಸ್ ಬರೆದಿದ್ದಾರೆ. ಮಧುಬಂತಿ ಬಾಗ್ಚಿ ವಾಯ್ಸ್‌ನಲ್ಲಿ ಸಾಂಗ್ ಮತ್ತಷ್ಟು ಕಿಕ್ ಕೊಡುತ್ತಿದೆ. ರೆಡ್ ಕಲರ್ ಔಟ್‌ಫಿಟ್‌ನಲ್ಲಿ ಬೋಲ್ಡ್ ಎಕ್ಸ್‌ಪ್ರೆಷನ್ ಕೊಡುತ್ತಾ ರಶ್ಮಿಕಾ ಹೆಜ್ಜೆ ಹಾಕಿದ್ದಾರೆ. ಆಯುಷ್ಮಾನ್ ಖುರಾನಾ ಸಾಥ್ ಸಿಕ್ಕಿದೆ. ಒಂದಷ್ಟು ಡ್ಯಾನ್ಸರ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.

ಆದಿತ್ಯಾ ಸರ್‌ಪುತದಾರ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಹಾರರ್ ಸಿನಿಮಾ 'ಥಮ್ಮಾ'. ನವಾಜುದ್ದೀನ್ ಸಿದ್ಧಿಕಿ, ಪರೇಶ್ ರಾವರ್, ಸತ್ಯರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವರುಣ್ ಧವನ್, ಮಲೈಕಾ ಅರೋರ, ನೋರಾ ಫತೇಹಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ರಶ್ಮಿಕಾ ಬಾಲಿವುಡ್‌ನಲ್ಲಿ ನಟಿಸಿದ 'ಸಿಕಂದರ್' ಸಿನಿಮಾ ಸೋತಿತ್ತು. ಹಾಗಾಗಿ ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇತ್ತೀಚೆಗೆ 'ಥಮ್ಮಾ' ಚಿತ್ರದ ಟ್ರೈಲರ್ ಬಂದು ಸದ್ದು ಮಾಡಿತ್ತು. ಇದೀಗ ಫಸ್ಟ್ ಸಾಂಗ್ ಸರದಿ. ಮಡೋಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್ ಹಾಗೂ ಅಮರ್ ಕೌಶಿಕ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಚಿತ್ರದ ಪ್ರಚಾರ ಶುರುವಾಗಿದೆ. ಈ ವರ್ಷ 'ಛಾವ' ಹಾಗೂ 'ಸಯ್ಯಾರ' ಬಿಟ್ಟರೆ ಬಾಲಿವುಡ್‌ನಲ್ಲಿ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ಥಮ್ಮಾ' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ರಶ್ಮಿಕಾ ಬಾಲಿವುಡ್ ಬೆಡಗಿಯರಿಗೆ ಭಾರೀ ಪೈಪೋಟಿ ಕೊಡುತ್ತಿದ್ದಾರೆ. ಎಲ್ಲಾ ವಿಧದಲ್ಲೂ ಹಿಂದಿ ಸಿನಿಮಾಗಳಲ್ಲಿ ಪರ್ಫಾರ್ಮ್ ಮಾಡಿ ಗೆಲ್ಲುತ್ತಿದ್ದಾರೆ. ಬಾಲಿವುಡ್ ಬೆಡಗಿಯರು ಸಿಕ್ಕಾಪಟ್ಟೆ ಬಿಂದಾಸ್ ಆಗಿ ಇರುತ್ತಾರೆ. ರಶ್ಮಿಕಾ ಕೂಡ ಅದನ್ನೆಲ್ಲಾ ಮೈಗೂಡಿಸಿಕೊಂಡು ಅಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕ್ರೇಜಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. 'ಅನಿಮಲ್', 'ಛಾವ' ಚಿತ್ರಗಳ ಸಕ್ಸಸ್ ಆಕೆಗೆ ಶಕ್ತಿ ತುಂಬಿದೆ.
ಸಿನಿಮಾ ನಾಯಕಿಯರೇ ಸ್ಪೆಷಲ್ ಸಾಂಗ್‌ಗಳಲ್ಲಿ ಕುಣಿಯುವುದು ಬಾಲಿವುಡ್ ಟ್ರೆಂಡ್. ರಶ್ಮಿಕಾ ಮಂದಣ್ಣ ಈಗ ಅದೇ ಹಾದಿಯಲ್ಲಿ ಸಾಗಿದ್ದಾರೆ. ಮುಂದೆ ಬೇರೆ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಅವಕಾಶ ಸಿಕ್ಕರೆ ಹೆಜ್ಜೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಮಡೋಕ್ ಫಿಲ್ಮ್ಸ್ ಹಾರರ್ ಕಾಮಿಡಿ ಯೂನಿವರ್ಸ್‌ನಲ್ಲೇ 'ಥಮ್ಮಾ' ಸಿನಿಮಾ ಬರ್ತಿದೆ. ಈ ಸರಣಿಯ 'ಸ್ತ್ರೀ', 'ಮುಂಜ್ಯ', 'ಸ್ತ್ರೀ-2' ಹಾಗೂ 'ಭೇದಿಯಾ' ಚಿತ್ರಗಳು ಹಿಟ್ ಆಗಿದೆ.
ಬಾಲಿವುಡ್‌ನಲ್ಲಿ ಇದು ರಶ್ಮಿಕಾ ಮಂದಣ್ಣ ನಟನೆಯ 5ನೇ ಸಿನಿಮಾ. ಮುಂದೆ ಆಕೆ ನಟಿಸಿರುವ ತೆಲುಗಿನ 'ಗರ್ಲ್ ಫ್ರೆಂಡ್' ಸಿನಿಮಾ ತೆರೆಗೆ ಬರಲಿದೆ. ಸದ್ಯ 'ಕಾಕ್‌ಟೇಲ್'-2 ಚಿತ್ರದ ಚಿತ್ರೀಕರಣದಲ್ಲಿ ಆಕೆ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಜೋಡಿಯ ಬಹುಕೋಟಿ ವೆಚ್ಚದ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ.


Click it and Unblock the Notifications











