ಅಮಿತಾಬ್ ಬಚ್ಚನ್‌ ಜೊತೆ ನಟಸಿದ ಸಿಹಿ ಅನುಭವ ಹಂಚಿಕೊಂಡ ರಶ್ಮಿಕಾ

By ಫಿಲ್ಮಿಬೀಟ್ ಡೆಸ್ಕ್

ರಶ್ಮಿಕಾ ಮಂದಣ್ಣಾ ತಮ್ಮ ವೃತ್ತಿ ಜೀವನದಲ್ಲಿ ವರ್ಷ-ವರ್ಷವೂ ಹೊಸ ಎತ್ತರಗಳಿಗೆ ಏರುತ್ತಲೇ ಸಾಗುತ್ತಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟ ಈ ಚೆಲುವೆ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಈಗ ಬೇಡಿಕೆಯ ನಟಿ.

ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಆತ್ಮವಿಶ್ವಾಸದಿಂದ ನಟಿಸಿ ಸೈ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಆರಂಭದಲ್ಲಿಯೇ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ.

ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ಭಾರತೀಯ ಸಿನಿಮಾದ ಹಿರಿಯ ಮತ್ತು ಜನಪ್ರಿಯ ನಟ ಅಮಿತಾಬ್ ಜೊತೆ ನಟಿಸುವ ಅವಕಾಶಕ್ಕಾಗಿ ಹಲವರು ಯುವ ನಟ-ನಟಿಯರು ಕಾತರರಾಗಿ ಕಾಯುತ್ತಿರುತ್ತಾರೆ. ಆದರೆ ಈ ಅವಕಾಶ ಬಹು ಬೇಗನೆ ರಶ್ಮಿಕಾಗೆ ದೊರೆತಿದ್ದು, ಅಮಿತಾಬ್ ಬಚ್ಚನ್ ಜೊತೆ ನಟಿಸಿದ ಅನುಭವ ಹೇಗಿತ್ತು ಎಂಬುದನ್ನು ಅವರು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದು ಅದ್ಭುತ ಅನುಭವ: ರಶ್ಮಿಕಾ

ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದು ಅದ್ಭುತ ಅನುಭವ: ರಶ್ಮಿಕಾ

''ಅಮಿತಾಬ್ ಬಚ್ಚನ್ ಜೊತೆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು ಅದ್ಭುತ ಅನುಭವ. ಯಾವುದೇ ಒಂದು ತಂಡದೊಂದಿಗೆ ಹೆಚ್ಚು ದಿನ ಶೂಟಿಂಗ್‌ನಲ್ಲಿ ಭಾಗಿಯಾದರೆ ನಿಮ್ಮ ಸಹನಟರೊಟ್ಟಿಗೆ ನಿಮಗೆ ಸಲಿಗೆ ಏರ್ಪಡುತ್ತದೆ. ಸಲಿಗೆ ಏರ್ಪಟ್ಟ ಬಳಿಕ ಅವರೊಟ್ಟಿಗೆ ಕ್ಯಾಮೆರಾಮುಂದೆ ನಟಿಸುವುದು ಬಹಳ ಸುಲಭವಾಗಿಬಿಡುತ್ತದೆ. ನನಗೂ ಹಾಗೆಯೇ ಆಯಿತು. ಬಚ್ಚನ್ ಅವರೊಟ್ಟಿಗೆ ಬಹಳ ಕಮ್‌ಫರ್ಟ್‌ ಆಗಿ ನಟಿಸಿದೆ. ಸಿನಿಮಾದ ನಿರ್ದೇಶಕರು ಹಾಗೂ ಸೆಟ್‌ನಲ್ಲಿದ್ದ ಎಲ್ಲರಿಗೂ ನನ್ನ ನಟನೆ ಇಷ್ಟವಾಯಿತು'' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

'ಗುಡ್‌ ಬೈ' ಸಿನಿಮಾದಲ್ಲಿ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ

'ಗುಡ್‌ ಬೈ' ಸಿನಿಮಾದಲ್ಲಿ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ

ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದು ಆ ಸಿನಿಮಾದಲ್ಲಿ ರಶ್ಮಿಕಾರದ್ದು ಅಮಿತಾಬ್ ಬಚ್ಚನ್ ಮಗಳ ಪಾತ್ರ. ಅಪ್ಪ-ಮಗಳ ಸಂಬಂಧದ ಬಗ್ಗೆಯೇ ಸಿನಿಮಾ ಕೇಂದ್ರಿತವಾಗಿದ್ದು, ಸಿನಿಮಾವನ್ನು ವಿಕಾಸ್ ಭಾಲ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಾಲಾಜಿ ಮೋಶನ್ ಪಿಕ್ಚರ್ಸ್, ರಿಲಯನ್ಸ್ ಎಂಟರ್ಟೈನ್‌ಮೆಂಟ್‌ನವರು ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ಬಚ್ಚನ್, ರಶ್ಮಿಕಾ ಹೊರತಾಗಿ ಹಿರಿಯ ನಟಿ ನೀನಾ ಗುಪ್ತಾ, ಟಿವಿ ನಟ ಶಿವಿನ್ ನಾರಂಗ್ ಇದ್ದಾರೆ.

ಕನ್ನಡ ಚಿತ್ರರಂಗದ ಜೊತೆಗೆ ಬಚ್ಚನ್‌ಗೆ ಆತ್ಮೀಯ ನಂಟು

ಕನ್ನಡ ಚಿತ್ರರಂಗದ ಜೊತೆಗೆ ಬಚ್ಚನ್‌ಗೆ ಆತ್ಮೀಯ ನಂಟು

ಈ ಮೊದಲು ಅಮಿತಾಬ್ ಬಚ್ಚನ್ ಜೊತೆ ಕನ್ನಡದ ನಟಿ ರಮ್ಯಾ ನಟಿಸಿದ್ದರು. ಅದಕ್ಕೆ ಮುನ್ನಾ ಪ್ರಕಾಶ್ ರೈ ನಟಿಸಿದ್ದರು. 'ರಣ್' ಸಿನಿಮಾದಲ್ಲಿ ನಟ ಸುದೀಪ್‌, ನಟಿ ಭಾವನಾ 'ಫ್ಯಾಮಿಲಿ' ಸಿನಿಮಾದಲ್ಲಿ ಬಚ್ಚನ್ ಜೊತೆ ನಟಿಸಿದ್ದಾರೆ. ನಟಿ ಸುಮಲತಾ ಮಲಯಾಳಂ ಸಿನಿಮಾ 'ಕಂದಹಾರ್‌'ನಲ್ಲಿ ಬಚ್ಚನ್ ಅವರೊಟ್ಟಿಗೆ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ ಸಹ ಬಚ್ಚನ್ ಅವರೊಟ್ಟಿಗೆ ನಟಿಸಿದ್ದಾರೆ. ಶಿವರಾಜ್ ಕುಮಾರ್ ಕೆಲವು ಜಾಹಿರಾತುಗಳಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸಿದ್ದಾರೆ. ರಾಜ್‌ ಕುಮಾರ್ ಜೊತೆ ಬಹಳ ಆಪ್ತ ಬಾಂದವ್ಯ ಹೊಂದಿದ್ದ ಅಮಿತಾಬ್ ಬಚ್ಚನ್ ಆಗಾಗ್ಗೆ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡುತ್ತಿದ್ದರು. ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ಬಚ್ಚನ್ ಅಭಿನಯದ 'ಕೂಲಿ' ಸಿನಿಮಾದಲ್ಲಿ ನಟಿಸುವಂತೆ ರಾಜ್‌ಕುಮಾರ್ ಅವರನ್ನು ಬಚ್ಚನ್ ಕೇಳಿದ್ದರು. ಆದರೆ ಅಣ್ಣಾವ್ರು, ತಾವು ಪರಭಾಷೆ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಅವಕಾಶ ನಿರಾಕರಿಸಿದ್ದರು.

ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಯೋಚನೆಯಲ್ಲಿ ರಶ್ಮಿಕಾ

ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಯೋಚನೆಯಲ್ಲಿ ರಶ್ಮಿಕಾ

ಇನ್ನು ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ 'ಪುಷ್ಪ' ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದೆ. ಅದರ ನಂತರ 'ಆಡುವಾಳ್ಳು ಮೀಕು ಜೋಹಾರ್ಲು' ಸಿನಿಮಾದ ಚಿತ್ರೀಕರಣ ಈಗಷ್ಟೆ ಸೆಟ್ಟೇರಿದೆ. ಇದರ ಜೊತೆಗೆ ತಮಿಳಿನಲ್ಲಿ ಸ್ಟಾರ್ ನಟ ವಿಜಯ್‌ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ರಶ್ಮಿಕಾ. ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ 'ಮಿಷನ್ ಮಜ್ನು' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿ ಸೆಟಲ್ ಆಗಲು ನಿಶ್ಚಯಿಸಿದ್ದು, ಮುಂಬೈನಲ್ಲಿ ಹೊಸದಾಗಿ ಮನೆಯೊಂದನ್ನು ಖರೀದಿಸಿದ್ದಾರೆ.

More from Filmibeat

English summary
Actress Rashmika Mandanna shared her experience of working with Amitabh Bachchan in Good Bye Hindi movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X