ರಶ್ಮಿಕಾ ಮಂದಣ್ಣಗೆ ಗುಲಾಬಿ ಗುಚ್ಛ ನೀಡಿದ ಪ್ರೇಮಿ, ಕುಣಿದು ಕುಪ್ಪಳಿಸಿದ ಹೈದರಾಬಾದ್ ಚೆಲುವೆ..!

ಮೊನ್ನೆ ಮೊನ್ನೆಯಷ್ಟೇ ನಾನು ಹೈದರಾಬಾದ್‌ನವಳು ಎಂದು ನುಲಿದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದವರು ರಶ್ಮಿಕಾ ಮಂದಣ್ಣ. ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎಂದು ಕರೆಯುವ ಉಮೇದಿಗೆ ಬಿದ್ದಿರುವ ರಶ್ಮಿಕಾ ಮಂದಣ್ಣ ಸದ್ಯ ಛಾವಾ ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದ್ದಾರೆ. ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ.

ಈ ಸಂಭ್ರಮವನ್ನು ಈಗ ಅನಾಮಿಕ ವ್ಯಕ್ತಿಯೊಬ್ಬ ಹೆಚ್ಚಿಸಿದ್ದಾರೆ. ರಶ್ಮಿಕಾ ಮಂದಣ್ಣ ಮನೆಗೆ ಗುಲಾಬಿಯ ಹೂಗುಚ್ಛವನ್ನು ಕಳಿಸಿದ್ದಾರೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ವಿಜಯ್ ದೇವರಕೊಂಡ ಎನ್ನುವ ಅನುಮಾನ ಸದ್ಯಕ್ಕೆ ಅನೇಕರದ್ದು.

Rashmika Mandanna Shares Red Rose Post After Valentine s Day Fans Ask Is It Vijay Deverakonda

ಹೌದು, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ವಿಚಾರ ಎಲ್ಲರಿಗೆ ಗೊತ್ತಿರುವುದೇ. ಇದಕ್ಕೆ ಪೂರಕವಾಗಿ ಕಳೆದ ಕೆಲ ದಿನಗಳಿಂದ ಇಬ್ಬರು ತಮ್ಮ ಸಂಬಂಧದ ಕುರಿತು ಪರೋಕ್ಷವಾಗಿ ಮಾತನಾಡುತ್ತಲೇ ಬಂದಿದ್ದಾರೆ. ನಾವು ಸಿಂಗಲ್ ಅಲ್ಲ ಎನ್ನುವ ಮೂಲಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿರುವ ಸುಳಿವನ್ನು ನೀಡುತ್ತಾ ಬಂದಿದ್ದಾರೆ. ರಶ್ಮಿಕಾ ಮಂದಣ್ಣ ಅವರಂತು ನನ್ನ ಕೈ ಹಿಡಿಯುವ ಹುಡುಗ ನನಗೆ ಗೌರವವನ್ನು ನೀಡಬೇಕು ಯಾಕೆಂದರೆ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಗೌರವಿಸಿದಾಗ, ಪ್ರಾಮಾಣಿಕವಾಗಿದ್ದಾಗ, ಕಾಳಜಿ ವಹಿಸಿದಾಗ ಜವಾಬ್ಧಾರಿ ಇರುತ್ತೆ ಎಂದೆಲ್ಲ ಮಾತನಾಡಿದ್ದಾರೆ.

ಇದರ ನಡುವೆ ಈಗ ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವಿನ ಗುಚ್ಛವನ್ನು ವ್ಯಕ್ತಿಯೊಬ್ಬರು ಕಳಿಸಿದ್ದಾರೆ. ಈ ಗುಲಾಬಿ ಹೂವು ಪ್ರೇಮಿಗಳ ದಿನದಂದು ಕಳುಹಿಸಿದ್ದಾ ಅಥವಾ ಛಾವಾ ಚಿತ್ರ ಗೆದ್ದ ಖುಷಿಗೆ ಕಳುಹಿಸಿದ್ದಾ ಎನ್ನುವ ವಿಚಾರ ಸದ್ಯಕ್ಕೆ ಗೊತ್ತಿಲ್ಲವಾದರೂ ರಶ್ಮಿಕಾ ಮಂದಣ್ಣ ಈ ಗುಲಾಬಿ ಹೂಗಳನ್ನು ಕಂಡು ಫುಲ್ ಖುಷಿಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನ ಸ್ಟೋರಿಯಲ್ಲಿ ಗುಲಾಬಿ ಹೂಗುಚ್ಛದ ಫೋಟೊವನ್ನು ಹಂಚಿಕೊಂಡು 'ನನ್ನ ಮುಖದ ಮೇಲೆ ನಗು ಮೂಡಿಸುವುದು ಹೇಗೆ ಎಂಬುದು ನಿನಗೆ ಯಾವಾಗಲೂ ಗೊತ್ತು' ಎಂಬ ಸಾಲನ್ನು ಬರೆದುಕೊಂಡಿದ್ದಾರೆ.

ರಶ್ಮಿಕಾ ಬರೆದ ಈ ಸಾಲು ಈ ಹೂಗುಚ್ಛವನ್ನು ನೀಡಿದ್ದು ವಿಜಯ್ ದೇವರಕೊಂಡ ಅವರೇ ಎನ್ನುವ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ರಶ್ಮಿಕಾ ಅವರ ಈ ಇನ್ಸ್ಟಾಗ್ರಾಮ್ ಸ್ಟೋರಿಯ ಸ್ಕ್ರೀನ್ ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.

ಅಂದ್ಹಾಗೇ ಜೊತೆಯಲ್ಲಿಯೇ ಇದ್ದರೂ ಕೂಡ ಪ್ರತ್ಯೇಕವಾಗಿರುವಂತೆ ಬಿಂಬಿಸುವ ಪ್ರಯತ್ನವನ್ನು ಆಗಾಗ ಇಬ್ಬರು ಮಾಡುತ್ತಿರುತ್ತಾರೆ. ಆದರೆ. ಅಭಿಮಾನಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಇಬ್ಬರಿಗೂ ಕೂಡ ಸಾಧ್ಯವಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಗೋವಾದಿಂದ ಹಿಡಿದು ಅಮೆರಿಕಾದವರೆಗೆ ಜೊತೆ ಜೊತೆಯಾಗಿಯೇ ಪ್ರವಾಸಕ್ಕೆ ತೆರಳಿದಾಗ, ಇಬ್ಬರು ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಜೊತೆಯಲ್ಲಿ ಆಚರಿಸಿದಾಗೆಲ್ಲ, ಅಭಿಮಾನಿಗಳ ಇಬ್ಬರು ಜೊತೆಯಲ್ಲಿರುವುದನ್ನು ಪತ್ತೆ ಮಾಡಿ ಫೋಟೊಗಳನ್ನು ವೈರಲ್ ಮಾಡಿದ್ದಾರೆ. ಇಬ್ಬರು ಕದ್ದು ಮುಚ್ಚಿ ಬೊಂಬಾಟ್ ಭೋಜನ ಸವಿಯಲು ಹೋದಾಗ ಕೂಡ ಇವರ ಏಕಾಂತಕ್ಕೆ ಭಂಗ ತಂದಿದ್ದಾರೆ.

ಇನ್ನುಳಿದಂತೆ ಸದ್ಯ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಛಾವಾ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ರಶ್ಮಿಕಾ ಮಂದಣ್ಣ ಖುದ್ದು ಹಂಚಿಕೊಂಡ ಫೋಸ್ಟ್ ಪ್ರಕಾರ ಛಾವಾ ಮೂರು ದಿನದಲ್ಲಿ 121.43 ಕೋಟಿಯನ್ನು ಗಳಿಸಿದೆ. ಕೇವಲ ಭಾನುವಾರದಂದು ಚಿತ್ರ 49.3 ಕೋಟಿಯನ್ನು ಕೊಳ್ಳೆ ಹೊಡೆದಿದೆ. ರಶ್ಮಿಕಾ ಮಂದಣ್ಣ ಸಂಭ್ರಮ ಪಡಲು ಇದಕ್ಕಿಂತ ಇನ್ನೇನು ಬೇಕು ?

.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X