For Quick Alerts
  ALLOW NOTIFICATIONS  
  For Daily Alerts

  ಮುಂಬೈನ ಹೊಸ ಮನೆಗೆ ವಾಸ್ತವ್ಯ ಬದಲಿಸಿದ ರಶ್ಮಿಕಾ

  |

  ಕೊಡಗಿನ ವಿರಾಜಪೇಟೆಯ ನಿವಾಸಿಯಾಗಿದ್ದ ರಶ್ಮಿಕಾ ಮಂದಣ್ಣ, ಬಾಲಿವುಡ್‌ನಲ್ಲಿ ಅವಕಾಶ ದೊರಕಿದ್ದೇ ತಡ ಮುಂಬೈಗೆ ಶಿಫ್ಟ್‌ ಆಗಿದ್ದಾರೆ. ಅಲ್ಲಿಯೇ ನೆಲೆಗೊಳ್ಳಲು ಯೋಜನೆ ಹಾಕಿದಂತಿದೆ.

  'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸುತ್ತಿದ್ದ ವೇಳೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ರಶ್ಮಿಕಾ ಮಂದಣ್ಣ, ತೆಲುಗು ಸಿನಿಮಾರಂಗದಲ್ಲಿ ಅವಕಾಶಗಳು ಹೆಚ್ಚಾಗುವ ವೇಳೆಗೆ ಹೈದರಾಬಾದ್‌ನಲ್ಲಿ ಹೊಸ ಅಪಾರ್ಟ್‌ಮೆಂಟ್ ಖರೀದಿಸಿ ಅಲ್ಲಿ ವಾಸ ಮಾಡುತ್ತಿದ್ದರು.

  ಇದೀಗ ಬಾಲಿವುಡ್‌ನಲ್ಲಿ ಅವಕಾಶಗಳು ರಶ್ಮಿಕಾರನ್ನು ಅರಸಿ ಬರುತ್ತಿದ್ದು, ಇನ್ನೂ ಹೆಚ್ಚಿನ ಅವಕಾಶ ನಿರೀಕ್ಷಿಸಿ ರಶ್ಮಿಕಾ ತಮ್ಮ ವಾಸ್ತವ್ಯವನ್ನು ಮುಂಬೈಗೆ ಬದಲಾಯಿಸಿದ್ದಾರೆ. ಇತ್ತೀಚೆಗಷ್ಟೆ ರಶ್ಮಿಕಾ ಮುಂಬೈನ ತಮ್ಮ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆದೆ ಎಂದ ರಶ್ಮಿಕಾ

  ಅಪಾರ್ಟ್‌ಮೆಂಟ್‌ಗೆ ಶಿಫ್ಟ್‌ ಆದೆ ಎಂದ ರಶ್ಮಿಕಾ

  'ಡಿಯರ್ ಡೈರಿ' ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಕಿರು ಲೇಖನಗಳನ್ನು ಬರೆಯುತ್ತಿರುವ ರಶ್ಮಿಕಾ, ''ಇಂದು ಸಾಕಷ್ಟು ವಿಷಯಗಳು ನಡೆದವು. ನಾನು ಕೊನೆಗೂ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆದೆ. ಸಾಕಷ್ಟು ವಸ್ತುಗಳನ್ನು ನಾನು ಖರೀದಿಸಬೇಕಿದೆ. ಅದೊಂದು ಎಂದೂ ಮುಗಿಯದ ಖರ್ಚು'' ಎಂದಿದ್ದಾರೆ.

  ಮನೆಯನ್ನೆಲ್ಲ ಒಪ್ಪ ಓರಣ ಮಾಡಿದೆ: ರಶ್ಮಿಕಾ

  ಮನೆಯನ್ನೆಲ್ಲ ಒಪ್ಪ ಓರಣ ಮಾಡಿದೆ: ರಶ್ಮಿಕಾ

  ಮುಂದುವರೆದು, ''ಮುದ್ದಿನ ನಾಯಿ ಔರಾ ದಿನವೆಲ್ಲ ಹೊರಗೇ ಇತ್ತು. ನನ್ನ ಇಬ್ಬರು ಗೆಳೆಯರನ್ನು ಇಂದು ಭೇಟಿಯಾದೆ. ಮನೆಯನ್ನು ಒಪ್ಪ ಓರಣಗೊಳಿಸಿದೆ. ಈ ಕಾರ್ಯದಲ್ಲಿ ನನ್ನ ಸಹಾಯಕ ಸಾಯಿ ನನಗೆ ಸಹಾಯ ಮಾಡಿದರು. ಕೊನೆಗೆ ಸುಸ್ತಾಗಿ ಮಲಗಿಬಿಟ್ಟೆ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

  ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದ ರಶ್ಮಿಕಾ

  ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದ ರಶ್ಮಿಕಾ

  ಈ ಹಿಂದೆ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ವೇಳೆ ಹೈದರಾಬಾದ್‌ನ ದುಬಾರಿ ಏರಿಯಾಗಳಲ್ಲಿ ಒಂದಾದ ಗಚ್ಚಿಬೋಲಿಯಲ್ಲಿ ರಶ್ಮಿಕಾ ಮಂದಣ್ಣ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದರು. ನಾಲ್ಕು ಬೆಡ್‌ರೂಮ್‌ನ ವಿಶಾಲವಾದ ಮನೆ ಅದಾಗಿತ್ತು. ಶಂಶಾಬಾದ್‌ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿಯೇ ಇತ್ತು ಆ ಮನೆ.

  ರಶ್ಮಿಕಾ ಜೊತೆ ಸೆಲ್ಫಿ ಗಾಗಿ ಪೊಲೀಸರು ಏನ್ ಮಾಡಿದ್ರು ನೋಡಿ | Rashmika Mandanna | Filmibeat Kannada
  ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ರಶ್ಮಿಕಾ ಮಂದಣ್ಣ ಪ್ರಸ್ತುತ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ 'ಗುಡ್ ಬೈ' ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ, ಸಿದ್ಧಾರ್ಥ್ ಮಲ್ಹೋತ್ರಾ ಒಜೊತೆಗೆ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಪುಷ್ಪ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ರಶ್ಮಿಕಾ.

  English summary
  Actress Rashmika Mandanna shifted to new apartment in Mumbai. She is acting in Hindi movies and expecting act more Hindi movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X