Don't Miss!
- News
Padma Awards: ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೇ ಬರುತ್ತಿರಲಿಲ್ಲ; ಎಸ್.ಎಲ್. ಭೈರಪ್ಪ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಶ್ಮಿಕಾ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ರೆಡಿ: 'ಮಿಷನ್ ಮಜ್ನು' ಅಲ್ಲ!
ರಶ್ಮಿಕಾ ಮಂದಣ್ಣ ಇದೀಗ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ. ಕನ್ನಡದ ನಂತರ, ತೆಲುಗು ಮತ್ತು ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ' ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತಷ್ಟು ರಶ್ಮಿಕಾ ಕ್ರೇಜ್ ಹೆಚ್ಚಿದೆ. ಈ ಒಂದೇ ಚಿತ್ರದ ಮೂಲಕ ನಾರ್ತ್‌ನಲ್ಲೂ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಅವರ ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇಲ್ಲಿ ತನಕ ಒಂದು ಸಿನಿಮಾ ಕೂಡ ತೆರೆಕಂಡಿಲ್ಲ.
2022ರ
ಅತ್ಯಂತ
ಜನಪ್ರಿಯ
ಕನ್ನಡದ
ನಟಿ
ಯಾರು?
ರಮ್ಯಾ,
ರಶ್ಮಿಕಾ,
ರಚಿತಾಗೆ
ಯಾವ
ಸ್ಥಾನ?
ಇದೀಗ ರಶ್ಮಿಕಾ ಅಭಿಮಾನಿಗಳಿಗೆ ಸಿಹಿ- ಸುದ್ದಿ ಸಿಕ್ಕಿದೆ. ಅಂತೂ ಇಂತೂ ರಶ್ಮಿಕಾ ನಟನೆಯ ಮೊದಲ ಬಾಲಿವುಡ್ ಸಿನಿಮಾ ತೆರೆಗೆ ಬರುತ್ತಿದೆ. ಅಷ್ಟಕ್ಕೂ ಅದು ಯಾವ ಸಿನಿಮಾ. ಇದೇ ರಶ್ಮಿಕಾ ಮೊದಲ ಬಾಲಿವುಡ್ ಸಿನಿಮಾ ಆಗಲಿದೆಯಾ ಎನ್ನುವ ಬಗ್ಗೆ ಮುಂದೆ ಓದಿ...

'ಗುಡ್ ಬೈ' ಸಿನಿಮಾ ರಿಲೀಸ್‌ಗೆ ರೆಡಿ!
ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಬಳಿಕ, ಅದೃಷ್ಟ ಒಲಿದುಬಂತು. ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಯಾವುದೋ ಸಿನಿಮಾ ಮಾಡುವುದರ ಬದಲು ಹೆಸರಾಂತ ಕಲಾವಿದರು ಮತ್ತು ಹೆಸರಾಂತ ಟೀಮ್ ಜೊತೆಗೆ ಸೇರಿಕೊಂಡು ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಶ್ಮಿಕಾ ಬಾಲಿವುಡ್ ಸಿನಿಮಾಗಳ ಲಿಸ್ಟ್ ನಲ್ಲಿ ಇರುವುದು ಎಲ್ಲವೂ ಬಹುತೇಕ ದೊಡ್ಡ ಸಿನಿಮಾಗಳೇ. ಆ ಸಾಲಿನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸುತ್ತಿರುವ 'ಗುಡ್ ಬೈ' ಸಿನಿಮಾ ಕೂಡ ಒಂದು. ಈಗ ಇದೇ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಆ
ಸಿನಿಮಾ
ಒಪ್ಪಿಕೊಂಡು
ತಪ್ಪು
ಮಾಡಿದ್ರಾ
ನ್ಯಾಷನಲ್
ಕ್ರಶ್
ರಶ್ಮಿಕಾ
ಮಂದಣ್ಣ?
|
ಅಕ್ಟೋಬರ್ 7ಕ್ಕೆ ಗುಡ್ ಬೈ ರಿಲೀಸ್!
ಅಮಿತಾಬ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಗುಡ್ ಬೈ' ಸಿನಿಮಾದ ರಿಲೀಸ್ ದಿನಾಂಕ ನಿಗದಿಯಾಗಿದೆ. ರಶ್ಮಿಕಾ ಸಾಲು ಸಾಲಾಗಿ ಬಾಲಿವುಡ್‌ನಲ್ಲಿ ಸಿನಿಮಾಗಳನ್ನ ಮಾಡುತ್ತಿದ್ದರು ಕೂಡ ಯಾವೊಂದು ಸಿನಿಮಾವೂ ಇನ್ನೂ ರಿಲೀಸ್ ಆಗಿಲ್ಲ. ಆದರೆ ಈಗ 'ಗುಡ್ ಬೈ' ಸಿನಿಮಾ ರಿಲೀಸ್ ದಿನಾಂಕ ಪ್ರಕಟವಾಗಿದೆ. ಹಾಗಾಗಿ ರಿಲೀಸ್ ಆಗ್ತಿರುವ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

'ಮಿಷನ್ ಮಜ್ನು' ಕಥೆ ಏನು?
ಅಷ್ಟಕ್ಕೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮೊಟ್ಟಮೊದಲ ಹಿಂದಿ ಸಿನಿಮಾ 'ಮಿಷನ್ ಮಜ್ನು'. ಈ ಸಿನಿಮಾ ಈಗಾಗಲೇ ಹಲವು ಬಾರಿ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿತ್ತು. ಆದರೆ ಕಾರಣಾಂತರಗಳಿಂದ ಹಲವು ಬಾರಿ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಿತ್ತು. ಆದ್ರೀಗ 'ಮಿಷನ್ ಮಜ್ನು' ಸಿನಿಮಾ ರಿಲೀಸ್ ಯಾವಾಗ ಎನ್ನುವ ಬಗ್ಗೆ ಚಿತ್ರತಂಡ ಇನ್ನು ಕೂಡ ಖಚಿತಪಡಿಸಿಲ್ಲ. ಒಂದು ವೇಳೆ 'ಗುಡ್ ಬೈ' ಚಿತ್ರಕ್ಕೂ ಮೊದಲು ಈ ಸಿನಿಮಾ ಬಂದರೆ, ಇದೇ ರಶ್ಮಿಕಾಳ ಮೊದಲ ಬಾಲಿವುಡ್ ರಿಲೀಸ್ ಆಗಲಿದೆ.

ಬಾಲಿವುಡ್‌ನಲ್ಲಿ ರಶ್ಮಿಕಾಗೆ ಬೇಡಿಕೆ!
ಅಲ್ಲದೇ ರಶ್ಮಿಕಾಗೆ ಇದೀಗ ಬಾಲಿವುಡ್‌ನಲ್ಲೂ ಕೂಡ ಬೇಡಿಕೆ ಹೆಚ್ಚಾಗುತ್ತಿದೆ. ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿ ಬಂದ ರಶ್ಮಿಕಾ ಬಗ್ಗೆ ಮತ್ತಷ್ಟು ಸುದ್ದಿಗಳು ಹಬ್ಬಿವೆ. ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಮತ್ತಷ್ಟು ಸಿನಿಮಾಗಳಿಗೆ ಸಹಿ ಮಾಡಿರುವ ಸೂಚನೆಯನ್ನು ಕೊಟ್ಟಿದ್ದಾರೆ. ಈಗಾಗಲೇ ರಣ್ಬೀರ್ ಕಪೂರ್ ಜೊತೆಗೆ ಸಿನಿಮಾ ಮಾಡುತ್ತಿದ್ದು, ಸಲ್ಮಾನ್ ಖಾನ್ ಜೊತೆಗೂ ರಶ್ಮಿಕಾ ಹೆಸರು ಕೇಳಿ ಬರ್ತಿದೆ.