For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್‌ಗೆ 'ಫಾದರ್ಸ್ ಡೇ' ಸರ್ಪ್ರೈಸ್ ಗಿಫ್ಟ್ ನೀಡಿದ ನಟಿ ರಶ್ಮಿಕಾ ಮಂದಣ್ಣ

  |

  ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಬಳಿಕ ಈಗ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾ ಚಿತ್ರೀಕರಣಕ್ಕೂ ಮೊದಲೇ ರಶ್ಮಿಕಾ 2ನೇ ಸಿನಿಮಾಗೆ ಸಹಿ ಮಾಡಿದ್ದು, ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಂತೆ ಸೂಪರ್ ಸ್ಟಾರ್ ಅಮಿತಾಬ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಆಗಲೇ ಚಿತ್ರೀಕರಣ ಕೂಡ ಪ್ರಾರಂಭ ಮಾಡಿದ್ದಾರೆ.

  ಮುಂಬೈನಲ್ಲಿ ಕೊರೊನಾ ಲಾಕ್ ಡೌನ್ ಮಾಡುತ್ತಿದ್ದಂತೆ ಹೈದರಾಬಾದ್ ಗೆ ವಾಪಸ್ ಆಗಿದ್ದ ರಶ್ಮಿಕಾ ಇದೀಗ ಮತ್ತೆ ಮುಂಬೈಗೆ ಹಿಂದಿರುಗಿದ್ದಾರೆ. ರಶ್ಮಿಕಾ ಸದ್ಯ ಹಿಂದಿಯಲ್ಲಿ 'ಮಿಷನ್ ಮಜ್ನು' ಮತ್ತು 'ಗುಡ್ ಬೈ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಸದ್ಯ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಚಿತ್ರೀಕರಣ ಪ್ರಾರಂಭ ಮಾಡಿರುವ ರಶ್ಮಿಕಾ ನಿನ್ನೆ (ಜೂನ್ 20) ಫಾದರ್ಸ್ ಡೇ ವಿಶೇಷವಾಗಿ ಬಿಗ್ ಬಿಗೆ ವಿಶೇಷವಾದ ಗಿಫ್ಟ್ ನೀಡುವ ಮೂಲಕ ಚಿತ್ರೀಕರಣ ಸೆಟ್ ನಲ್ಲಿ ಸರ್ಪ್ರೈಸ್ ನೀಡಿದ್ದಾರೆ. ಚಿತ್ರೀಕರಣ ಸೆಟ್ ಬಂದ ಅಮಿತಾಬ್ ಗೆ ರಶ್ಮಿಕಾ ಮತ್ತು ತಂಡ ಗಿಫ್ಟ್ ನೀಡಿರುವ ಗಿಫ್ಟ್ ನೋಡಿ ಅಚ್ಚರಿ ಪಟ್ಟಿದ್ದಾರೆ.

  'ಗುಡ್ ಬೈ' ಸಿನಿಮಾದ ನಟಿಯರಾದ ರಶ್ಮಿಕಾ ಮತ್ತು ಎಲಿ ಅವ್ರಾಮ್ ಬಿಗ್ ಬಿ ಅಮಿತಾಬ್ ಗೆ ಕೇಕ್ ಮತ್ತು ಹೂ ಗುಚ್ಛ ನೀಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅಮಿತಾಬ್, "ಚಿತ್ರದ ನಿರ್ದೇಶಕರು ಮತ್ತು ಪಾತ್ರವರ್ಗ ಹಾಗೂ ಸಿಬ್ಬಂದಿಯೊಂದಿಗೆ ಹಳೆಯ ಸಮಯದ ನೆನಪು ತುಂಬಿದೆ. ತಂದೆಯ ದಿನವನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ ನನಗೆ ಕೇಕ್ ಮತ್ತು ಹೂ ಗುಚ್ಛವನ್ನು ಉಡುಗೊರೆಯಾಗಿ ನೀಡಲು ಒಟ್ಟಿಗೆ ಸೇರಿದ್ದಾರೆ" ಎಂದಿದ್ದಾರೆ.

  ಅಮಿತಾಬ್ ಗೆ ಶುಭಕೋರಿದ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ. "ಪ್ರತಿ ದಿನವೂ ತಂದೆಯ ದಿನಾಚರಣೆ. ನಾನು ತಂದೆಯಂತೆ ಕಾಣುತ್ತಿದ್ದೇನೆ ಎಂದು ನೀವು ಗಮನಿಸಿರಬಹುದು. ಶುಭಾಶಯ ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ಹಾರೈಕೆಗೆ ನನ್ನ ಕೃತಜ್ಞತೆಗಳು" ಎಂದು ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.

  ವಿಶ್ವ ಯೋಗ ದಿನದಂದು Pooja Hegde ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.. | Filmibeat Kannada

  ರಶ್ಮಿಕಾ ಸದ್ಯ ಹಿಂದಿ ಜೊತೆಗೆ ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಶರ್ವಾನಂದ್ ನಟನೆಯ ಹೊಸ ಸಿನಿಮಾದಲ್ಲೂ ರಶ್ಮಿಕಾ ನಟಿಸಬೇಕಿದೆ. ಜೊತೆಗೆ ನಟ ನಿತಿನ್ ಜೊತೆ ಮತ್ತೊಂದು ಸಿನಿಮಾ ಪ್ರಾರಂಭ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  English summary
  Actress Rashmika Mandanna surprise gifts to Amitabh Bachchan with cake on Father's day in Goodbye shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X