ಹಿಂದಿ ಸಿನಿಮಾ ನೋಡಿ ನಟನನ್ನು ಹೊಗಳಿದ ರಶ್ಮಿಕಾ ಮಂದಣ್ಣ

By ಫಿಲ್ಮಿಬೀಟ್ ಡೆಸ್ಕ್

ಕನ್ನಡತಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದಾರೆ. ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಆ ನಂತರ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಬಾಲಿವುಡ್‌ನಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ಅಲ್ಲಿಯೇ ನೆಲೆಯೂರಲು ಸಕಲ ಯತ್ನಗಳನ್ನು ಮಾಡುತ್ತಿದ್ದಾರೆ.

ಅಪ್ಪಿ-ತಪ್ಪಿಯೂ ತಮ್ಮದಲ್ಲದ ಸಿನಿಮಾಗಳ ಬಗ್ಗೆ ಟ್ವೀಟ್ ಮಾಡದಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಸಿನಿಮಾವೊಂದನ್ನು ನೋಡಿ ಸಿನಿಮಾದ ನಾಯಕನ ನಟನನ್ನು ಮೆಚ್ಚಿ ಕೊಂಡಾಡಿದ್ದಾರೆ. ರಶ್ಮಿಕಾ ಮಂದಣ್ಣ ತಾವೇ ನಟಿಸಿದ್ದ ಕನ್ನಡದ 'ಪೊಗರು' ಸಿನಿಮಾ ಬಿಡುಗಡೆ ಬಗ್ಗೆ ಒಂದು ಟ್ವೀಟ್ ಸಹ ಮಾಡದೇ ಇದ್ದದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಇತ್ತಿಚೆಗೆ ಬಿಡುಗಡೆ ಆಗಿ ಸಾಕಷ್ಟು ಸದ್ದು ಮಾಡುತ್ತಿರುವ ಹಿಂದಿ ಸಿನಿಮಾವನ್ನು ನಟಿ ರಶ್ಮಿಕಾ ಮಂದಣ್ಣ ನೋಡಿದ್ದು, ಸಿನಿಮಾದ ಬಗ್ಗೆ ಬಹಳ ಹೊಗಳಿ ಟ್ವೀಟ್ ಮಾಡಿದ್ದಾರೆ. ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿರುವ ಸಿನಿಮಾವನ್ನು ಎಲ್ಲರೂ ನೋಡಿ ಎಂದು ಮನವಿಯನ್ನೂ ಮಾಡಿದ್ದಾರೆ.

'ಶೇರ್ಷಾ' ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ

'ಶೇರ್ಷಾ' ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ

ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿರುವ 'ಶೇರ್ಷಾ' ಸಿನಿಮಾವನ್ನು ರಶ್ಮಿಕಾ ಮಂದಣ್ಣ ನೋಡಿದ್ದಾರೆ. ''ನಿನ್ನೆ ರಾತ್ರಿಯಷ್ಟೆ 'ಶೇರ್ಷಾ' ಸಿನಿಮಾ ನೋಡಿದೆ. ತ್ಯಾಗ ಬಲಿದಾನ ನೀಡಿ ನಮ್ಮನ್ನೆಲ್ಲ ಭದ್ರತೆಯಿಂದ ನೋಡಿಕೊಳ್ಳುತ್ತಿರುವವರ ಕುಟುಂಬಕ್ಕೆ ದೊಡ್ಡ ವಂದನೆಗಳು. ಸಿದ್ಧಾರ್ಥ್ ಮಲ್ಹೋತ್ರಾ ನೀನೊಬ್ಬ ಸೂಪರ್ ಸ್ಟಾರ್ ನಟ. ಪಾತ್ರವನ್ನು ಅದ್ಭುತವಾಗಿ ನಟಿಸಿದ್ದೀಯ. ಕಿಯಾರಾ ಅಡ್ವಾಣಿ ನೀವು ಅತ್ಯಂತ ಸುಂದರಿ. ನಿಮ್ಮ ಡಿಂಪಲ್‌ಗಳಿಗೆ ನನ್ನ ವಿಶೇಷ ಪ್ರೀತಿ. ನಿಮ್ಮಿಬ್ಬರು ಕೆಮಿಸ್ಟ್ರೀ ಬಹಳ ಅದ್ಭುತವಾಗಿದೆ. ವಿಷ್ಣುವರ್ಧನ್ ಸರ್ ನಿಮ್ಮ ಕೆಲಸ ಅದ್ಭುತವಾದುದು. ಕರಣ್ ಜೋಹರ್ ಸರ್ ನಿಮಗೆ ಅಭಿನಂದನೆಗಳು'' ಎಂದು ಬರೆದಿದ್ದಾರೆ ರಶ್ಮಿಕಾ ಮಂದಣ್ಣ.

ವಿಕ್ರಂ ಬಾತ್ರಾ ಜೀವನ ಆಧರಿಸಿದ ಸಿನಿಮಾ

ವಿಕ್ರಂ ಬಾತ್ರಾ ಜೀವನ ಆಧರಿಸಿದ ಸಿನಿಮಾ

'ಶೇರ್ಷಾ' ಸಿನಿಮಾವು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾ ಜೀವನ ಆಧರಿಸಿದ್ದಾಗಿದೆ. ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವಿಕ್ರಂ ಭಾತ್ರಾ ಪಾತ್ರದಲ್ಲಿ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ತಮಿಳಿನ ವಿಷ್ಣುವರ್ಧನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಕರಣ್ ಜೋಹರ್, ಶಬೀರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್, ಅಜಯ್ ಶಾ, ಹಿಮಾಂಶು ಗಾಂಧಿ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು, ರಶ್ಮಿಕಾ ಮಂದಣ್ಣ ಮಾತ್ರವೇ ಅಲ್ಲದೆ ಅಕ್ಷಯ್ ಕುಮಾರ್, ಅಜಯ್ ದೇವಗನ್ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಒಳ್ಳೆಯ ಮಾತನ್ನಾಡಿದ್ದಾರೆ.

'ಮಿಷನ್ ಮಜ್ನು' ಸಿನಿಮಾದಲ್ಲಿ ಒಟ್ಟಿಗೆ ನಟನೆ

'ಮಿಷನ್ ಮಜ್ನು' ಸಿನಿಮಾದಲ್ಲಿ ಒಟ್ಟಿಗೆ ನಟನೆ

ರಶ್ಮಿಕಾ ಮಂದಣ್ಣ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಸಿದ್ಧಾರ್ಥ್ ಮಲ್ಹೋತ್ರಾ, ''ಧನ್ಯವಾದ ರಶ್ಮಿಕಾ ಎಂದಿದ್ದಾರೆ. ನಟಿ ಕಿಯಾರಾ ಅಡ್ವಾಣಿ ಸಹ ರಶ್ಮಿಕಾಗೆ ಧನ್ಯವಾದ ಹೇಳಿದ್ದಾರೆ. 'ಶೇರ್ಷಾ' ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ಹಿಂದಿ ಸಿನಿಮಾ 'ಮಿಷನ್ ಮಜ್ನು'ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಶಂತನು ಬಾಗ್ಚಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಸಿನಿಮಾದಲ್ಲಿ ರಶ್ಮಿಕಾರದ್ದು ಬಬ್ಲಿ ಗರ್ಲ್ ಪಾತ್ರ.

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ

'ಮಿಷನ್ ಮಜ್ನು' ಮಾತ್ರವೇ ಅಲ್ಲದೆ 'ಗುಡ್ ಬೈ' ಹೆಸರಿನ ಹಿಂದಿ ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾರದ್ದು ಅಮಿತಾಬ್ ಬಚ್ಚನ್ ಮಗಳ ಪಾತ್ರ. ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಮೀನಾ ಗುಪ್ತಾ ಇದ್ದಾರೆ. ಸಿನಿಮಾವನ್ನು ವಿಕಾಸ್ ಬಲ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ರಿಲಯನ್ಸ್ ಎಂಟರ್ಟೈನ್‌ಮೆಂಟ್ ಮತ್ತು ಬಾಲಾಜಿ ಮೋಷನ್ ಪಿಕ್ಚರ್ಸ್. ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆಯನ್ನು ರಶ್ಮಿಕಾ ಇಟ್ಟುಕೊಂಡಿದ್ದಾರೆ. ಇದರ ಹೊರತಾಗಿ ತೆಲುಗಿನ ಬಹುನಿರೀಕ್ಷಿತ ಸಿನಿಮಾ 'ಪುಷ್ಪ'ದಲ್ಲಿ ರಶ್ಮಿಕಾರೇ ನಾಯಕಿ. 'ಆಡವಾಳ್ಳು ಮೀಕು ಜೋಹಾರ್ಲು' ಹೆಸರಿನ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ವಿಜಯ್‌ರ ಹೆಸರಿಡದ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗುತ್ತಿದೆ.

More from Filmibeat

English summary
Actress Rashmika Mandanna watched Hindi movie Shershaah and praised actor Siddharth Malhotra who is her co actor in movie Mission Majnu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X