ಈ ವರ್ಷ ವಿಜಯ್ ದೇವರಕೊಂಡ ಜೊತೆ 'ಮದುವೆ'ಯಾಗ್ತಾರಾ ರಶ್ಮಿಕಾ ಮಂದಣ್ಣ ? ನಿವೃತ್ತಿಯ ಬಗ್ಗೆ ಮಾತನಾಡಿದ್ದೇಕೆ ?

ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ.

ಇಂಥಾ ರಶ್ಮಿಕಾ ಮಂದಣ್ಣ ಈ ವರ್ಷ ಮದುವೆಯಾಗಲಿದ್ದಾರಾ ಎನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಕಾರಣ ರಶ್ಮಿಕಾ ನಿವೃತ್ತಿಯ ಬಗ್ಗೆ ಮಾತನಾಡಿದ ಮಾತು. ಹೌದು, ಅಸಲಿಗೆ ಕಳೆದ ವರ್ಷದ ಅಂತ್ಯದಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಇದಕ್ಕೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಉತ್ತರವನ್ನು ನೀಡದಿದ್ದರು ಕೂಡ ಅನೇಕರು ಹಬ್ಬಿರುವ ಸುದ್ದಿ ನಿಜಾ ಎಂದೇ ವಾದ ಮಾಡುತ್ತಿದ್ದಾರೆ.

Rashmika Mandanna s Retirement Comment Sparks Rumours About Her Plans to Marry This Year

ಇನ್ನು, ಪುಷ್ಪ 2 ಚಿತ್ರದ ಬಿಡುಗಡೆ ಸಮಯದಲ್ಲಿ ರಶ್ಮಿಕಾಗೆ ನಿರೂಪಕರು ನೀವು ಸಿನಿಮಾ ಇಂಡಸ್ಟ್ರಿಯನ್ನು ಮದುವೆ ಆಗ್ತೀರಾ ಅಥವಾ ಹೊರಗಿನವರನ್ನು ಮದುವೆ ಆಗ್ತೀರಾ? ನೀವು ಕ್ಲ್ಯಾರಿಟಿ ಕೊಟ್ಟರೆ ನಾವು ಹುಡುಗನನ್ನು ಹುಡುಕುತ್ತೇವೆ ಎಂದು ಕೇಳಿದಾಗ ನಸು ನಕ್ಕ ರಶ್ಮಿಕಾ ಎಲ್ಲರಿಗೂ ಈ ವಿಷಯ ಗೊತ್ತು ಎಂದು ಹೇಳಿದ್ದರು.

ಆ ನಂತರ ಕಾಸ್ಮೋಪಾಲಿಟನ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರೀತಿ, ಮದುವೆ, ಸಂಗಾತಿಯ ಬಗ್ಗೆ ಮಾತನಾಡಿರುವ ರಶ್ಮಿಕಾ ಮಂದಣ್ಣ ಜೀವನದ ಪ್ರತಿಯೊಂದು ಹಂತದಲ್ಲಿ ನನಗೆ ನನ್ನ ಸಂಗಾತಿ ಜೊತೆ ಇರಬೇಕು ಎಂದಿದ್ದರು. ನನಗೆ ನನ್ನ ಹುಡುಗನಿಂದ ಭದ್ರತೆ, ಸಹಾನುಭೂತಿ ಬೇಕು ಎಂದು ಹೇಳಿದ್ದರು. ರಶ್ಮಿಕಾ ಅವರ ಈ ಹೇಳಿಕೆ ಮದುವೆಯ ಕುರಿತ ಸುದ್ದಿಗಳಿಗೆ ಇನ್ನಷ್ಟು ರೆಕ್ಕೆ ಪುಕ್ಕ ಮೂಡಿದಂತಾಗಿತ್ತು.

ಹೀಗಿರುವಾಗ ಈಗ ರಶ್ಮಿಕಾ ಮಂದಣ್ಣ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ನಡೆದ ಛಾವಾ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಕುರಿತು ಮಾತನಾಡಿ, ವಿಕ್ಕಿ ಕೌಶಲ್ ಅವರನ್ನು ಹಾಡಿ ಹೊಗಳಿದ ರಶ್ಮಿಕಾ ಆ ನಂತರ ನನ್ನ ಪಾಲಿಗೆ ಇದೊಂದು ಬಹುದೊಡ್ಡ ಗೌರವ, ದಕ್ಷಿಣದಿಂದ ಬಂದು ಮಹಾರಾಣಿ ಯೇಸುಬಾಯಿ ಪಾತ್ರವನ್ನು ನಾನು ಮಾಡಿದ್ದೇನೆ, ಛಾವಾ ನನ್ನ ಜೀವಿತಾವಧಿಯ ಬಹುದೊಡ್ಡ ಸಾಧನೆ, ಇಂತಹ ಪಾತ್ರದ ನಂತರ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ನಾನು ನಿರ್ದೇಶಕ ಲಕ್ಷ್ಮಣ್ ಅವರಿಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ರಶ್ಮಿಕಾ ಅವರ ಮದುವೆಯ ಸುದ್ದಿಗೆ ಈಗ ಮತ್ತೆ ಮರುಜೀವ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.

ಇನ್ನು, ಸಾಮಾನ್ಯವಾಗಿ ಸಾಮಾನ್ಯವಾಗಿ ಅಪಾರ ಜನಪ್ರಿಯತೆ ದಕ್ಕಿದ ಸಮಯದಲ್ಲಿ, ಚಿತ್ರರಂಗದಲ್ಲಿ ನಾಯಕ ಇರಲಿ ಅಥವಾ ನಾಯಕಿಯೇ ಇರಲಿ ಮದುವೆಯ ಬಂಧನಕ್ಕೊಳಗಾಗುವುದು ಅಪರೂಪ. ತುಂಬಾ ಜನ ಸದ್ಯ ಕೈ ತುಂಬಾ ಕೆಲಸ ಇದೆ. ಜೊತೆಯಲ್ಲಿ ಹಣ ಕೂಡ ಸಿಕ್ತಿದೆ. ಇಂತಹ ಸಮಯದಲ್ಲಿ ಸದ್ಯಕ್ಕೆ ವೃತ್ತಿ ಜೀವನದ ಕಡೆ ಗಮನ ಕೊಟ್ಟರಾಯಿತು ಎಂದು ತಮ್ಮ ವ್ಯೆಯಕ್ತಿಕ ಬದುಕಿನ ಖುಷಿಯ ಕ್ಷಣಗಳನ್ನು ಮುಂದೂಡುತ್ತಲೇ ಇಲ್ಲಿ ಬರುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಇರುವ ರಶ್ಮಿಕಾ ಅವರ ಕೈಯಲ್ಲಿ ಸದ್ಯ ಅನೇಕ ಸಿನಿಮಾಗಳಿವೆ. ಭಾರತದೆಲ್ಲೆಡೆ ಬೇಡಿಕೆ ಇದೆ. ಹೀಗಿರುವಾಗ ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ರಶ್ಮಿಕಾ ಮದುವೆಯಾಗಲು ಸಾಧ್ಯವೇ ಇಲ್ಲ ಎನ್ನುವ ವಾದವನ್ನು ಕೂಡ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ಇದೇ ಸಮಯದಲ್ಲಿ ತಮ್ಮ ವಾದವನ್ನು ಸೋಶಿಯಲ್ ಮೀಡಿಯಾದಲ್ಲಿ ಮಂಡಿಸುತ್ತಿದೆ. ಸತ್ಯ ಏನು ? ರಶ್ಮಿಕಾ ಬಾಯಿಂದ ನಿವೃತ್ತಿಯ ಮಾತು ಬಂದಿದ್ದೇಕೆ ? ಉತ್ತರ ರಶ್ಮಿಕಾ ಮಂದಣ್ಣ ಅವರಿಗೆ ಗೊತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X