ಕದ್ದು ಮುಚ್ಚಿ ಚಿತ್ರಮಂದಿರದಲ್ಲಿ 'ಥಮ್ಮ' ನೋಡಿದ ರಶ್ಮಿಕಾ - ಪ್ರೇಕ್ಷಕರ ಪ್ರೀತಿಗೆ ಕಿರಿಕ್ ಚೆಲುವೆ ಭಾವುಕ

09 ವರ್ಷದ ಹಿಂದೆ ರಶ್ಮಿಕಾ ಮಂದಣ್ಣ ಅಂದರೆ ಯಾರದು ? ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೆ.. ಆ ನಂತರ ಬಂದ ''ಕಿರಿಕ್ ಪಾರ್ಟಿ'' ಇವರ ಬದುಕನ್ನೇ ಬದಲಿಸಿತು. ''ಕಿರಿಕ್ ಪಾರ್ಟಿ'' ಎಂಬ ಒಂದೇ ಒಂದು ಚಿತ್ರದ ಅತ್ಯದ್ಭುತವಾದ ಗೆಲುವು ರಶ್ಮಿಕಾ ಮಂದಣ್ಣ ಅವರನ್ನು ಎಲ್ಲಿಂದ ಎಲ್ಲಿಗೋ ಕರೆದೊಯ್ದು ನಿಲ್ಲಿಸಿತು. ಇವತ್ತು ರಶ್ಮಿಕಾ ಮಂದಣ್ಣ ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ.

ಕನ್ನಡ ಒಂದು ಹೊರತು ಪಡಿಸಿದರೆ ಬೇರೆ ಎಲ್ಲಾ ಭಾಷೆಯಲ್ಲಿ ರಶ್ಮಿಕಾಗೆ ಚಿನ್ನದಂತಹ ಬೇಡಿಕೆ ಇದೆ. ಅದರಲ್ಲಿಯೂ ಹಿಂದಿಯಲ್ಲಿಯಂತೂ ರಶ್ಮಿಕಾ ಮಂದಣ್ಣ ಕಾಲ್‌ಶೀಟ್‌ಗೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಕಾಕ್‌ಟೈಲ್ 2''.. ''ಕ್ರಿಷ್ 4''.. ''ಅನಿಮಲ್ 2''.. ಸೇರಿ ಹಲವು ಚಿತ್ರಗಳು ರಶ್ಮಿಕಾ ಅವರ ಕೈಯಲ್ಲಿವೆ.

Rashmika Mandanna s Secret Thamma Watch Audience Joy Brings Her to Tears

ಇಂಥಾ ರಶ್ಮಿಕಾ ಮಂದಣ್ಣ ಸದ್ಯ ಕದ್ದು ಮುಚ್ಚಿ ಇತ್ತೀಚೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ತಮ್ಮ ''ಥಮ್ಮ'' ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ್ದಾರೆ. ಅಭಿಮಾನಿಗಳ ಸಂಭ್ರಮ, ಸಡಗರ.. ಶಿಳ್ಳೆ.. ಚಪ್ಪಾಳೆಯನ್ನೆಲ್ಲಾ ಕಣ್ತುಂಬಿಕೊಂಡು ಪುಳಕಿತರಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ರಶ್ಮಿಕಾ ಡಿಯರ್ ಡೈರಿ, ಬುಧವಾರ ರಾತ್ರಿ ನಾನು ''ಥಮ್ಮ'' ನೋಡಲು ಸದ್ದಿಲ್ಲದೆ ಚಿತ್ರಮಂದಿರಕ್ಕೆ ಹೋಗಿದ್ದೆ. ಚಿತ್ರ ನೋಡುವಾಗ ಜನರ ಆ ನಗು.. ಶಿಳ್ಳೆ.. ಅವರ ಆ ಅದ್ಭುತವಾದ ಪ್ರತಿಕ್ರಿಯೆ.. ಈ ಎಲ್ಲವೂ ನನಗೆ ತುಂಬಾ ವಿಶೇಷವಾದವು ಎಂದು ಹೇಳಿದ್ದಾರೆ.

ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ಮೆಚ್ಚಿ ಹರಸಿ ಹಾರೈಸುತ್ತಿರುವ, ಕಾಮೆಂಟ್‌ಗಳ ಮೂಲಕ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದು ಬರೆದುಕೊಂಡಿರುವ ರಶ್ಮಿಕಾ ನಾನು ತುಂಬಾ ಖುಷಿಯಾಗಿದ್ದೇನೆ. ಲವ್ ಯೂ ಆಲ್ ಎಂದು ಹೇಳಿದ್ದಾರೆ. ಓಹ್.. ಕ್ಯಾರಮೆಲ್ ಪಾಪ್‌ಕಾರ್ನ್ ಕೂಡ ನಾನು ಚಿತ್ರಮಂದಿರದಲ್ಲಿ ತಿಂದೆ ಎಂದು ಹೇಳಿದ್ದಾರೆ.

ಕೇವಲ ಇದೊಂದೇ ಪೋಸ್ಟ್ ಅಲ್ಲ ರಶ್ಮಿಕಾ ಮಂದಣ್ಣ ಅವರ ಇನ್‌ಸ್ಟಾಗ್ರಾಮ್‌ನ ಸ್ಟೋರಿಗಳಲ್ಲಿ ಕೇವಲ ''ಥಮ್ಮ'' ಚಿತ್ರದ್ದೇ ಅಬ್ಬರ ಇದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರೇಕ್ಷಕರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಸ್ಕ್ರೀನ್ ಶಾಟ್‌ಗಳನ್ನೆಲ್ಲಾ ತೆಗೆದು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಇಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ರಶ್ಮಿಕಾ ತಾವು ಮಾಡಿದ ಎರಡು ಮತ್ತೊಂದು ಕನ್ನಡ ಚಿತ್ರಗಳ ಪ್ರಚಾರ ಮಾಡಿದ್ದರೆ ನಿರ್ಮಾಪಕರಿಗೆ ಇನ್ನೊಂದಿಷ್ಟು ಲಾಭವಾದರೂ ಆಗಿರುತ್ತಿತ್ತೇನೋ ?

Rashmika Mandanna s Secret Thamma Watch Audience Joy Brings Her to Tears

ಇನ್ನುಳಿದಂತೆ ಸದ್ಯ ದೀಪಾವಳಿ ಹಬ್ಬದ ಪ್ರಯುಕ್ತ ಬಂದ ''ಥಮ್ಮ'' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ಕೂಡ ಗಳಿಕೆ ಚೆನ್ನಾಗಿದೆ. ಬಿಡುಗಡೆಯಾದ ದಿನದಿಂದ ನಿನ್ನೆಯವರೆಗೆ ಈ ಚಿತ್ರದ ಗಳಿಕೆ ಎರಡಂಕಿಯ ಗಡಿಯನ್ನು ದಾಟಿದೆ.

ಇನ್ನು ಇಂದು ( ಅಕ್ಟೋಬರ್ 25 ) ಮತ್ತು ನಾಳೆ ( ಅಕ್ಟೋಬರ್ 26) ವಾರಾಂತ್ಯದ ಹಿನ್ನೆಲೆ ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಸೋಮವಾರ ''ಥಮ್ಮ'' ನೂರು ಕೋಟಿಯ ಗಡಿಯನ್ನು ತಲುಪುವ ಸಾಧ್ಯತೆ ಕೂಡ ಇದೆ.

ಸದ್ಯ ರಶ್ಮಿಕಾ ಮಂದಣ್ಣ ''ಥಮ್ಮ'' ಚಿತ್ರಕ್ಕೆ ಸಿಕ್ಕ ಮತ್ತು ಸಿಕ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದು, ''ಛಾವಾ''.. ''ಅನಿಮಲ್'' ನಂತರ ಈ ಚಿತ್ರದ ಮೂಲಕ ಮತ್ತೊಮ್ಮೆ ಬಾಲಿವುಡ್‌ನಲ್ಲಿ ಗೆಲುವಿನ ಬಾವುಟ ಹಾರಿಸಿದಂತೆ ಆಗಿದೆ.

More from Filmibeat

English summary
Go behind the scenes as Rashmika Mandanna describes the tearful joy of watching 'Thamma' with the audience. See why their priceless reactions moved her
Read more about: rashmika mandanna fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X