ಕನ್ನಡಿಗರನ್ನು ಆಗಾಗ ಕೆಣಕುವ, ಕೆರಳಿಸುವ ಈ ನಟಿ ಯಾರು ಎಂದು ಗುರುತಿಸಬಲ್ಲಿರಾ ?
ಈ ಬಣ್ಣದ ಪ್ರಪಂಚದಲ್ಲಿ ಯಾರ ಬದುಕು ಯಾವತ್ತು ಹೇಗೆ ಬದಲಾಗುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಸಿಗದ ಯಶಸ್ಸು, ಇನ್ನು ಕೆಲವರಿಗೆ ಮೊದಲ ಚಿತ್ರದಲ್ಲಿಯೇ ಸಿಕ್ಕಿ ಬಿಡುತ್ತೆ. ಇಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಯಲ್ಲಿ ಕೂಡ ಇವರಿಗೆ ಹೆಬ್ಬಾಗಿಲು ತೆರೆಯುತ್ತೆ. ರತ್ನಗಂಬಳಿ ಹಾಕಿ ಇವರ ಸ್ವಾಗತವನ್ನು ಕೂಡ ಮಾಡಲಾಗುತ್ತೆ.
ಹೀಗೆ ಸಿಕ್ಕ ಈ ಸ್ಟಾರ್‌ಗಿರಿಯಿಂದ ಕೆಲವರು ಮಿರ ಮಿರ ಮಿಂಚಲಾರಂಭಿಸುತ್ತಾರೆ. ಸಂಭ್ರಮದ ಅಲೆಯಲ್ಲಿ ತೇಲುತ್ತಾ ಮೈ ಮರೆತು ಆಗಾಗ ವಿವಾದವನ್ನು ಕೂಡ ಇವರು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದಕ್ಕೆ ರಶ್ಮಿಕಾ ಮಂದಣ್ಣ ಅತ್ಯುತ್ತಮ ಉದಾಹರಣೆ.

ಹೌದು .. ಕುಂತಲ್ಲಿ .. ನಿಂತಲ್ಲಿ .. ವಿವಾದಕ್ಕೀಡಾಗುತ್ತಲೇ ಬಂದಿರುವ, ಅದರಲ್ಲಿಯೂ ಆಗಾಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುವ ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆಯಷ್ಟೇ ನಾನೇ ಕೊಡಗಿನ ಕ್ವೀನ್ ಎಂದು ಹೇಳಿದ್ದರು. ಕೊಡಗಿನಿಂದ ಚಿತ್ರರಂಗದಲ್ಲಿ ಸಾಧನೆಯ ಶಿಖರಕ್ಕೇರಿದ್ದು.. ಬಣ್ಣದ ಪ್ರಪಂಚಕ್ಕೆ ಬಂದಿದ್ದು ನಾನೊಬ್ಬಳೇ ಎಂದು ಹೇಳಿದ್ದರು.
ರಶ್ಮಿಕಾ ಅವರ ಈ ಮಾತು ಸಹಜವಾಗಿಯೇ ಕೊಡಗಿನ ಅನೇಕ ನಾಯಕಿಯರನ್ನು ಕೆರಳಿಸಿತ್ತು. ಕರುನಾಡಿನೆಲ್ಲೆಡೆ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಆದರೆ ಎಂದಿನಂತೆ ರಶ್ಮಿಕಾ ಮಂದಣ್ಣ ತನ್ನ ವಿರುದ್ಧ ನಡೆದ ಈ ಎಲ್ಲ ಬೆಳವಣಿಗೆಯ ಕುರಿತು ತಲೆ ಕೆಡಿಸಿಕೊಂಡಿಲ್ಲ. ರಶ್ಮಿಕಾ ಮಂದಣ್ಣ ಬೇಡಿಕೆ ಕೂಡ ಕುಂದಿಲ್ಲ. ಇದಕ್ಕೆ ಕೈಗನ್ನಡಿಯೇ ವೈರಲ್ ಆಗಿರುವ ಈ ಫೋಟೊ.

ಹೌದು, ಒಂದರ ಹಿಂದೊಂದರಂತೆ ಸ್ಟಾರ್ ನಾಯಕರ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ 'ಡರ್ಟಿ ಕಟ್ 25' ಎಂಬ ಮ್ಯಾಗಜಿನ್‌ಗೆ ಕೆಲ ಫೋಟೊಗಳನ್ನು ಕ್ಲಿಕಿಸಿಕೊಂಡಿದ್ದಾರೆ. ಕಡುಗೆಂಪು ಬಣ್ಣದ ಲಿಪ್ಸ್ಟಿಕ್ ಹಚ್ಚಿಕೊಂಡು, ವಿಭಿನ್ನವಾದ ಹೇರ್ ಸ್ಟೈಲ್ ನಲ್ಲಿ ಕ್ಯಾಮರಾಗೆ ವೆರೈಟಿ ಫೋಸ್‌ಗಳನ್ನು ನೀಡಿದ್ದಾರೆ.
ತಟ್ಟನೆ ನೋಡಿದರೆ ರಶ್ಮಿಕಾ ಮಂದಣ್ಣ ಅವರನ್ನು ಇಲ್ಲಿ ಗುರುತು ಹಿಡಿಯುವುದು ಕಷ್ಟ. ಹೀಗಾಗಿಯೇ ಹಲವರು ಈಗ ರಶ್ಮಿಕಾ ಮಂದಣ್ಣ ಅವರನ್ನು ಕೊಂಡಾಡುತ್ತಿದ್ಧಾರೆ. ಕೇವಲ ಇವರ ಅಭಿಮಾನಿಗಳು ಮಾತ್ರ ಅಲ್ಲ ಅಮಲಾ ಪೌಲ್ ಸೇರಿ ಚಿತ್ರರಂಗದ ಅನೇಕರು ರಶ್ಮಿಕಾ ಅವರ ಈ ನಯಾ ಲುಕ್‌ಗೆ ಕ್ಲೀನ್ ಬೋಲ್ಡ್ ಆಗಿದ್ಧಾರೆ.
ಅಂದ್ಹಾಗೇ ಡರ್ಟಿ ಕಟ್ ಪ್ರತಿಷ್ಠಿತ ಮ್ಯಾಗ್‌ಜಿನ್‌ನಲ್ಲೊಂದು. ಫ್ಯಾಷನ್ ಲೋಕಕ್ಕೆ ಸಂಬಂಧಿಸಿದ ಮ್ಯಾಗ್‌ಜಿನ್ ಇದು. ರಶ್ಮಿಕಾ ಮಂದಣ್ಣ ಅವರ ಈ ಹೊಸ ಅವತಾರವನ್ನು ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಡರ್ಟಿ ಕಟ್ ಹಂಚಿಕೊಂಡಿದ್ದು ರಶ್ಮಿಕಾ ಮಂದಣ್ಣ ಅವರನ್ನು ಬಾಯ್ತುಂಬ ಹೊಗಳಿದೆ. ಬರಗಾಲದಿಂದ ತತ್ತರಿಸಿದ ಬಾಕ್ಸಾಫೀಸ್‌ನ ವಾತಾವರಣ ಬದಲಿಸಿದ್ದು ರಶ್ಮಿಕಾ ಎಂದು ಹೇಳಿದೆ. ರಶ್ಮಿಕಾ ಕೇವಲ ಬ್ರ್ಯಾಂಡ್ ಅಲ್ಲ ಮಾದರಿ ವ್ಯಕ್ತಿ.. ಸಾಂಸ್ಕ್ರತಿಕ ಶಕ್ತಿ ಎಂದೆಲ್ಲಾ ಪದಪುಂಜಗಳನ್ನು ಪೋಣಿಸಿದೆ.


Click it and Unblock the Notifications











