ಸಾವಿನ ದವಡೆಯಿಂದ ಪಾರಾದ ರಶ್ಮಿಕಾ ; 30 ನಿಮಿಷ ಜೀವ ಕೈಯಲ್ಲಿ ಹಿಡ್ಕೊಂಡು ಕುಂತಿದ್ದ ನಟಿ..!

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು ರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು. ಸ್ಟಾರ್ ನಟರೊಂದಿಗೆ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ ಸದ್ಯಕ್ಕೆ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು, ಅಸಲಿಗೆ ಹೈದ್ರಾಬಾದ್ To ಮುಂಬೈ.. ಮುಂಬೈ To ಹೈದ್ರಾಬಾದ್ ಎಂದು ಮೇಲಿಂದ ಮೇಲೆ ವಿಮಾನ ನಿಲ್ಧಾಣದಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ, ಇತ್ತೀಚಿಗೆ ಮುಂಬೈನಿಂದ ಹೈದ್ರಾಬಾದ್ ಗೆ ಮರಳುತ್ತಿದ್ದರು.

Rashmikas flight makes emergency landing

ಇದೇ ಸಮಯದಲ್ಲಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣಕ್ಕೆ 30 ನಿಮಿಷಗಳವರೆಗೆ ಗಗನದಲ್ಲಿ ಹಾರಾಡಿದ ವಿಮಾನ, ಆನಂತರ ಮರಳಿ ಮುಂಬೈಗೆ ಬಂದಿದೆ. ನಂತರ ವಿಮಾನ ಭೂ ಸ್ಪರ್ಶ ಮಾಡಿದೆ. ಅದೃಷ್ಟವಶಾತ ಯಾರಿಗೂ ಯಾವುದೇ ತರಹದ ಹಾನಿಗಳಾಗಿಲ್ಲ.

ಇನ್ನೂ ಈ ಭಯಾನಕವಾದ ಪರಿಸ್ಥಿತಿಯಲ್ಲಿ ರಶ್ಮಿಕಾ ಒಬ್ಬರೇ ಇರಲಿಲ್ಲ. ಬಾಲಿವುಡ್ ನ ಇನ್ನೊಬ್ಬ ನಟಿ ಶ್ರದ್ಧಾ ದಾಸ್ ಕೂಡ ರಶ್ಮಿಕಾ ಜೊತೆ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದರು.

Rashmikas flight makes emergency landing

ಹೀಗಾಗಿ ಘಟನೆಯ ಬಳಿಕ ಶ್ರದ್ಧಾ ದಾಸ್ ಜೊತೆ ಫೋಟೋ ಕ್ಲಿಕಿಸಿಕೊಂಡಿರುವ ರಶ್ಮಿಕಾ ಸಾವಿನಿಂದ ತಪ್ಪಿಸಿಕೊಂಡಿದ್ದೇವೆ ಎಂಬ ಸಂದೇಶವನ್ನ ಅಭಿಮಾನಿಗಳಿಗಾಗಿ, ಸಿನಿ ಪ್ರೇಮಿಗಳಿಗಾಗಿ ರವಾನಿಸಿದ್ದಾರೆ.

ಸುದೀಪ್ ಜೊತೆ ತೆರೆ ಹಂಚಿಕೊಂಡಿರುವ ಶ್ರದ್ಧಾ ದಾಸ್

2008ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರದ್ಧಾ ದಾಸ್, ಇಲ್ಲಿಯವರೆಗೆ ತೆಲುಗು, ಹಿಂದಿ, ಬೆಂಗಾಲಿ, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹತ್ತು ಹಲವು ಪಾತ್ರಗಳನ್ನ ಮಾಡಿದ್ದಾರೆ.

Rashmikas flight makes emergency landing

ಇನ್ನೂ ಹೊಸ ಪ್ರೇಮ ಪುರಾಣ ಚಿತ್ರದ ಮೂಲಕ 2012ರಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ಶ್ರದ್ಧಾ ದಾಸ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಕೋಟಿಗೊಬ್ಬ 3 ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಕಂಗನಾ ಹೆಸರಿನ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾ ದಾಸ್ ಪ್ರಾಣಾಪಾಯದಿಂದ ಪಾರಾದ ಸುದ್ದಿಯನ್ನ ಕೇಳಿ, ಅಭಿಮಾನಿಗಳು ನಿರಾಳರಾಗಿದ್ದಾರೆ. ಸೆಲೆಬ್ರಿಟಿಗಳು ವಿಸ್ತಾರ ಏರ್ ಲೈನ್ಸ್ ಮೇಲೆ ಕೆಂಡ ಕಾರುತ್ತಿದ್ದಾರೆ.

More from Filmibeat

English summary
Bollywood actor Rashmika Mandanna escaped death after her Air Vistara flight reportedly made an emergency landing due to a technical glitch and extreme turbulence
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X