"ಮಗಳ ವಯಸ್ಸಿನ ಹೀರೊಯಿನ್ಸ್ ಜೊತೆ ಹೀರೊಗಳು ರೊಮ್ಯಾನ್ಸ್ ಮಾಡ್ತಾರೆ.. ಅವ್ರಿಗೆಲ್ಲಾ ನಾಚಿಕೆ ಆಗಲ್ವಾ?"

ಸಿನಿಮಾಗಳಲ್ಲಿ ಎಲ್ಲವೂ ಸಾಧ್ಯ ಎನ್ನುವ ಮಾತುಗಳು ಕೆಲವೊಮ್ಮೆ ಕೇಳಿಬರುತ್ತದೆ. ಚಿತ್ರರಂಗದಲ್ಲಿ ಹೀರೊಯಿನ್ಸ್, ಕಾಮಿಡಿಯನ್ಸ್ ಸೇರಿದಂತೆ ಇತರ ಕಲಾವಿದರಿಗೆಲ್ಲಾ ವಯಸ್ಸಾಗುತ್ತದೆ. ಆದರೆ ಹೀರೊಗಳಿಗೆ ಮಾತ್ರ ವಯಸ್ಸಾಗುವುದೇ ಇಲ್ಲ!. ಒಮ್ಮೆ ಹೀರೊಗಳಾಗಿ ಗೆದ್ದುಬಿಟ್ಟರೆ ಮುಗೀತು ದಶಕಗಳ ಕಾಲ ಹೀರೊಗಳಾಗಿಏ ಮೆರೆಯುತ್ತಾರೆ.

ಟಾಲಿವುಡ್, ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್‌ ಎಲ್ಲಾ ಕಡೆ ಇದು ಸರ್ವೇ ಸಾಮಾನ್ಯ. ಎಷ್ಟೇ ವರ್ಷ ಕಳೆದರೂ ನಟರು ಹೀರೊಗಳಾಗಿ ನಟಿಸುವುದರಲ್ಲಿ ಅಭ್ಯಂತರವಿಲ್ಲ. ಆದರೆ ತಮಗಿಂತ ಬಹಳ ಚಿಕ್ಕ ವಯಸ್ಸಿನ ನಟಿಯರ ಜೊತೆ ತೆರೆಮೇಲೆ ರೊಮ್ಯಾನ್ಸ್ ಮಾಡುವುದರ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಆದರೆ ಆ ನಟರು, ನಿರ್ದೇಶಕರು ಇದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

Ratna-Pathak-Shah-on-actors-age-gap

ಒಂದು ಚಿತ್ರದಲ್ಲಿ ನಾಯಕ- ನಾಯಕಿಯಾಗಿ ನಟಿಸಿದವರು ಮತ್ತೊಂದು ಚಿತ್ರದಲ್ಲಿ ತಾಯಿ- ಮಗನಾಗಿ ನಟಿಸಿರುವ ಉದಾಹರಣೆಗಳು ಚಿತ್ರರಂಗದಲ್ಲಿದೆ. ಆದರೆ ಕೆಲವು ನಟರು ತಮಗಿಂತ ಚಿಕ್ಕ ವಯಸ್ಸಿನ ನಟಿಯರ ಜೊತೆ ರೊಮ್ಯಾನ್ಸ್ ಮಾಡಲು ಇಷ್ಟಪಡುವುದಿಲ್ಲ. ಇತ್ತೀಚೆಗೆ ತಮಿಳು ನಟ ವಿಜಯ್ ಸೇತುಪತಿ, ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಮಾಡೋಕೆ ಒಲ್ಲೆ ಎಂದಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ವಿಜಯ್, "ಉಪ್ಪೆನ ಚಿತ್ರದಲ್ಲಿ ಕೃತಿ ತಂದೆಯಾಗಿ ನಾನು ನಟಿಸಿದ್ದೇನೆ. ಆ ಸಿನಿಮಾ ಹಿಟ್ ಆಗಿತ್ತು. ನಂತರ ನಾನು ತಮಿಳಿನ ಚಿತ್ರವೊಂದಕ್ಕೆ ಸಹಿ ಮಾಡಿದ್ದೆ. ಅದರಲ್ಲಿ ನನಗೆ ಜೋಡಿಯಾಗಿ ಕೃತಿ ಶೆಟ್ಟಿ ಇದ್ದರೆ ಚೆನ್ನಾಗಿರುತ್ತದೆ ಎಂದು ನಿರ್ಮಾಪಕರು ಭಾವಿಸಿದರು. ಇದನ್ನು ಕೇಳಿ ತಕ್ಷಣ ನಾನು ಚಿತ್ರತಂಡಕ್ಕೆ ಕರೆ ಮಾಡಿ ಬೇಡ ಅಂದೆ. ನಾನು ತಂದೆಯಾಗಿ ನಟಿಸಿದ ನಟಿ ಜೊತೆ ರೊಮ್ಯಾನ್ಸ್ ಮಾಡಲು ಇಷ್ಟವಿಲ್ಲ. ಅದಕ್ಕೇ ಬೇಡ ಎಂದೆ" ಎಂದು ವಿಜಯ್‌ ಹೇಳಿದ್ದರು.

ಈ ರೀತಿ ಹೀರೊಗಳು ತಮಗಿಂತ ಬಹಳ ಚಿಕ್ಕ ವಯಸ್ಸಿನ ನಟಿಯರ ಜೊತೆ ರೊಮ್ಯಾನ್ಸ್ ಮಾಡುವ ಬಗ್ಗೆ ಬಾಲಿವುಡ್ ಹಿರಿಯ ನಟಿ ರತ್ನ ಪಾಠಕ್ ಶಾ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ 'ಧಕ್ ಧಕ್' ಚಿತ್ರದಲ್ಲಿ ಹಿರಿಯ ನಟಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾತನಾಡುತ್ತಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಈ ಬಗ್ಗೆ ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲ. ತಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯರ ಜೊತೆ ನಟಿಸೋಕೆ ಅವರಿಗೆ ನಾಚಿಕೆ ಆಗುತ್ತಿಲ್ಲ. ಹಾಗಿರುವಾಗ ನಾನೇನು ಮಾತನಾಡಲಿ? ನಾನು ಹೇಳುವುದಕ್ಕೆ ಏನಿಲ್ಲ. ಅಂದರೆ ಈ ಬಗ್ಗೆ ಮಾತನಾಡಲು ನನಗೆ ನಾಚಿಕೆ ಎನಿಸುತ್ತದೆ" ಎಂದಿದ್ದಾರೆ.

"ಖಂಡಿತ ಮುಂದೊಂದು ದಿನ ಬದಲಾವಣೆ ಆಗುತ್ತದೆ. ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಅವರು ಚಿತ್ರರಂಗದಲ್ಲೂ ಅದ್ಭುತಗಳನ್ನು ಮಾಡಬಲ್ಲರು. ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಕಂಡಿತ ನಡೆಯುತ್ತದೆ" ಎಂದು ಹಿರಿಯ ನಟಿ ರತ್ನ ಪಾಠಕ್ ಶಾ ವಿವರಿಸಿದ್ದಾರೆ. 1983ರಲ್ಲಿ 'ಮಂದಿ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ರತ್ನಾ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತರುಣ್ ದುಡೇಜಾ ನಿರ್ದೇಶನದ 'ಧಕ್ ಧಕ್' ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರತ್ನ ಪಾಠಕ್ ಶಾ ಜೊತೆ ದಿಯಾ ಮಿರ್ಜಾ, ಫಾತೀಮಾ ಸನಾ ಶೇಕ್, ಸಂಜನಾ ಸಂಘಿ ನಟಿಸಿದ್ದಾರೆ. ಇದೊಂದು ಮೋಟಾಕ್ ಸೈಕಲ್ ಅಡ್ವೆಂಚರ್ ಸಿನಿಮಾ ಆಗಿದ್ದು 65ರ ಹರಯದಲ್ಲೂ ರತ್ನ ಬೈಕ್ ಚಲಾಯಿಸಿ ಕಾಣಿಸಿಕೊಂಡಿದ್ದಾರೆ. ನಾನು ಕನಸ್ಸಿನಲ್ಲಿ ಸಾಕಷ್ಟು ಬಾರಿ ಬೈಲ್ ಓಡಿಸಿದ್ದೆ. ಆದರೆ ನಿಜವಾಗಿಯೂ 65ನೇ ವಯಸ್ಸಿನಲ್ಲಿ ಆ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಾಕಷ್ಟು ಜನ ನನಗೆ ಬೈಕ್ ಚಲಾಯಿಸಲು ತರಬೇತಿ ನೀಡಿದರು. ಮುಂಬೈನಲ್ಲಿ ಬೈಕ್ ಚಲಾಯಿಸಿದ್ದು ಅದ್ಭುತವಾಗಿತ್ತು. ಇವತ್ತಿಗೂ ನಾನು ಬೈಕ್ ಓಡಿಸಲು ಬರುತ್ತದೆ ಎಂದು ಹೇಳಲ್ಲ. ಕಾರಣ ಟ್ರಾಫಿಕ್‌ನಲ್ಲಿ ಬೈಕ್ ಚಲಾಯಿಸಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ.

More from Filmibeat

English summary
Ratna Pathak Shah on age gap between male and female actors;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X