twitter
    For Quick Alerts
    ALLOW NOTIFICATIONS  
    For Daily Alerts

    'ರಾವಣ'ನ ಪಾತ್ರದಲ್ಲಿ ಖ್ಯಾತಿ ಗಳಿಸಿದ ನಟ ಅರವಿಂದ್ ತ್ರಿವೇದಿ ನಿಧನ

    |

    ಹಿಂದಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯಗಳಿಸಿಕೊಂಡಿದ್ದ ನಟ ಅರವಿಂದ್ ತ್ರಿವೇದಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

    82 ವರ್ಷದ ಅರವಿಂದ್ ತ್ರಿವೇದಿ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಬಹಳ ದಿನಗಳಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದರು. ಇದೇ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ. ಅವರ ಅಂತಿಮ ಸಂಸ್ಕಾರವನ್ನು ಬುಧವಾರ ಬೆಳಗ್ಗೆ ಮುಂಬೈನಲ್ಲಿ ನಡೆಯಲಿದೆ.

    ಖ್ಯಾತ ನಟ ಮನೋಜ್ ಬಾಜಪೇಯಿ ತಂದೆ ನಿಧನಖ್ಯಾತ ನಟ ಮನೋಜ್ ಬಾಜಪೇಯಿ ತಂದೆ ನಿಧನ

    ಅರವಿಂದ್ ತ್ರಿವೇದಿ ಅವರ ಸಾವಿನ ಸುದ್ದಿ ತಿಳಿದ ನಂತರ ರಾಮಾಯಣ ಧಾರಾವಾಹಿಯಲ್ಲಿ ಸಹನಟರಾಗಿ ಅಭಿನಯಿಸುತ್ತಿದ್ದ ಕಲಾವಿದರು ಸಂತಾಪ ಸೂಚಿಸಿದ್ದಾರೆ. ಸುನಿಲ್ ಲಾಹೀರ್ (ಲಕ್ಷ್ಮಣ), ದೀಪಿಕಾ ಚಿಖ್ಲಿಯಾ (ಸೀತಾ), ಅರುಣ್ ಗೋವಿಲ್ (ರಾಮ್) ಸೇರಿದಂತೆ ಇತರರು ಬೇಸರ ವ್ಯಕ್ತಪಡಿಸಿದರು.

     Ravan Fame Actor Arvind Trivedi passes away at 82

    ರಮಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯಲ್ಲಿ ಅರವಿಂದ್ ತ್ರಿವೇದಿ ರಾವಣನ ಪಾತ್ರ ಮಾಡಿದ್ದರು. ಪೌರಾಣಿಕ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಅರವಿಂದ್ ತ್ರಿವೇದಿ ಅಂದ್ರೆ ರಾವಣ ಎಂದೇ ಗುರುತಿಸುತ್ತಿದ್ದರು. ಅಷ್ಟರ ಮಟ್ಟಿಗೆ ಈ ಪಾತ್ರ ಅವರಿಗೆ ಯಶಸ್ಸು ತಂದುಕೊಟ್ಟಿತ್ತು. ಗುಜರಾತಿ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಅರವಿಂದ್ ತ್ರಿವೇದಿ ಹಿಂದೆಯೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 1991ರ ಲೋಕಸಭೆ ಚುನಾವಣೆಯಲ್ಲಿ ಸಬರಕಂಠ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು.

    ಕೇವಲ ರಾಮಾಯಣ ಮಾತ್ರವಲ್ಲ, ವಿಕ್ರಮ್ ಔರ್ ಬೇತಾಳ್ ಧಾರಾವಾಹಿಯಲ್ಲೂ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಹಿಂದಿ ಮತ್ತು ಗುಜರಾತಿ ಸೇರಿದಂತೆ 300 ಚಲನಚಿತ್ರಗಳಲ್ಲಿ ಸಾಮಾಜಿಕ ಮತ್ತು ಪೌರಾಣಿಕ ಪಾತ್ರಗಳ ಮೂಲಕ ಅರವಿಂದ್ ತ್ರಿವೇದಿ ಹೆಚ್ಚು ಗಮನ ಸೆಳೆದಿದ್ದರು.

    8 ನವೆಂಬರ್ 1938ರಲ್ಲಿ ಜನಿಸಿದ ಅರವಿಂದ್ ತ್ರಿವೇದಿ ಗುಜರಾತಿ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 40 ವರ್ಷದಿಂದ ತೊಡಗಿಕೊಂಡಿದ್ದರು. ಇವರ ಸಹೋದರ ಉಪೇಂದ್ರ ತ್ರಿವೇದಿ ಸಹ ನಟ ಮತ್ತು ರಂಗಭೂಮಿ ಕಲಾವಿದ. ರಮಾನಂದ್ ಸಾಗರ್ ನಿರ್ದೇಶನದ ರಾಮಾಯಣ್, ವಿಕ್ರಮ್ ಔರ್ ಬೇತಾಳ್, ದೇಶ್ ರೇ ಜೋಯಾ ದಾದಾ ಪರದೇಶ ಜೋಯಾ' ಅಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

    2002ರಲ್ಲಿ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ತ್ರಿವೇದಿ ಅವರ ನಟನೆಗಾಗಿ ಏಳು ಬಾರಿ ಗುಜರಾತ್ ಸರ್ಕಾರ ನೀಡುವ ಅತ್ಯುನ್ನತ ಸಿನಿಮಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಮನೋಜ್ ಬಾಜಪೇಯಿ ತಂದೆ ನಿಧನ
    ಇತ್ತೀಚಿಗಷ್ಟೆ ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್‌ಕೆ ಬಾಜಪೇಯಿ ಅಕ್ಟೋಬರ್ 3 ಬೆಳಗ್ಗೆ ನಿಧನರಾದರು. 83 ವರ್ಷದ ಆರ್‌ಕೆ ಬಾಜಪೇಯಿ ಅವರ ಆರೋಗ್ಯ ಕಳೆದ ಹಲವು ದಿನಗಳಿಂದಲೂ ಹದಗೆಟ್ಟಿತ್ತು. ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

    English summary
    Arvind Trivedi, the actor who very successfully portrayed the role of Ravan in Ramanand Sagar's popular series "Ramayan" is no more.
    Wednesday, October 6, 2021, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X