For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸಂಕಷ್ಟದಲ್ಲಿ ಸೇವೆಗಿಳಿದ ನಟಿ ರವೀನಾ ಟಂಡನ್

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ಹಲವು ನಟರು ನೆರವಿಗೆ ಧಾವಿಸಿದ್ದಾರೆ. ನಟರಿಗೆ ಹೋಲಿಸಿಕೊಂಡರೆ ನಟಿಯರ ಸಂಖ್ಯೆ ಕಡಿಮೆ. ಆದರೆ ಇದಕ್ಕೆ ಅಪವಾದವೆಂಬಂತೆ ನಟಿ ರವೀನಾ ಟಂಡನ್ ಕೋವಿಡ್ ಸಂಕಷ್ಟದಲ್ಲಿ ಅಗತ್ಯ ನೆರವು ನೀಡಿದ್ದಾರೆ.

  ಕೆಜಿಎಫ್2 ಸಿನಿಮಾ ಮೂಲಕ ಕನ್ನಡಕ್ಕೆ ಮರಳಿ ಬಂದಿರುವ ರವೀನಾ ಟಂಡನ್, ಪ್ರಸ್ತುತದ ಅಗತ್ಯತೆಯಾದ ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಿದ್ದಾರೆ.

  ಇತ್ತೀಚೆಗಷ್ಟೆ ಸಮಾನ ಮನಸ್ಕರೊಂದಿಗೆ ಸೇರಿ 'ಆಕ್ಸಿಜನ್ ಆನ್‌ ದಿ ವ್ಹೀಲ್ಸ್ ಮುಂಬೈ ಟು ಡೆಲ್ಲಿ' ಹೆಸರಲ್ಲಿ ಅಭಿಯಾನ ಆರಂಭಿಸಿದ್ದ ರವೀನಾ ಟಂಡನ್ 300 ಆಕ್ಸಿಜನ್ ಸಿಲಿಂಡರ್‌ಗಳನ್ನು ದಾನ ಮಾಡಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ರವೀನಾ.

  ರವೀನಾ ಅವರ ರುದ್ರ ಫೌಂಡೇಶನ್ ವತಿಯಿಂದ ಈ ಉಚಿತವಾಗಿ ಆಮ್ಲಜನಕ ವಿತರಣೆ ಕಾರ್ಯ ನಡೆಯುತ್ತಿದ್ದು, ಆಮ್ಲಜನಕ ಹೆಚ್ಚು ಅಗತ್ಯವಿರುವ ದೆಹಲಿ ಹಾಗೂ ಮುಂಬೈ ನಗರಗಳಿಗೆ ಅಗತ್ಯವಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಸಪ್ಲೈ ಮಾಡುತ್ತಿದ್ದಾರೆ ರವೀನಾ ಹಾಗೂ ತಂಡ.

  ಅಭಿಯಾನವನ್ನು ಮುಂದುವರೆಸಲು ಉದ್ದೇಶಿಸಿರುವ ರವೀನಾ ಹೆಚ್ಚಿನ ಸಿಲಿಂಡರ್‌ಗಳ ಖರೀದಿಗೆ ಹಾಗೂ ಇತರೆ ಮಾದರಿಯ ಸೇವೆಗೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ರವೀನಾ, 'ನಾವು ಯಾರನ್ನೂ ಬಲವಂತ ಮಾಡುತ್ತಿಲ್ಲ ಯಾರ ಬಳಿಯಾದರೂ ಹೆಚ್ಚಿನ ಹಣವಿದ್ದು ಇಂಥಹಾ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಆಸೆಯಿದ್ದರೆ ನಮಗೆ ನೀಡಿ' ಎಂದು ಮನವಿ ಮಾಡಿದ್ದಾರೆ.

  'ನನ್ನ ಕುಟುಂಬದವರು, ಸಮಾನ ಮನಸ್ಕ್ ಗೆಳೆಯರು ಸೇರಿಕೊಂಡು ಈ ಕಾರ್ಯ ಮಾಡುತ್ತಿದ್ದೇವೆ. ಯಾರಿಗೆ ಅಗತ್ಯ ಇದೆಯೋ ಅವರಿಗೆ ಖುದ್ದಾಗಿ ನಾವು ಆಮ್ಲಜನಕ ತಲುಪಿಸುತ್ತಿದ್ದೇವೆ. ನಾವು ಒಮ್ಮೆ ಈ ಕಾರ್ಯಕ್ಕೆ ಇಳಿದ ಮೇಲೆ ಗೊತ್ತಾಗುತ್ತಿದೆ ಇದು ಸಮುದ್ರ ನಾವಿಲ್ಲಿ ಎಷ್ಟು ಮಾಡಿದರೂ ಕಡಿಮೆಯೇ ಎಂದು ಆದರೆ ನಾವು ಅಭಿಯಾನ ಕೈಬಿಡುವುದಿಲ್ಲ, ನಮಗೆ ಸಾಧ್ಯವಾದಷ್ಟು ಸೇವೆ ಮಾಡಿಯೇ ತೀರುತ್ತೇವೆ' ಎಂದಿದ್ದಾರೆ ರವೀನಾ.

  ಕನ್ನಡ ಚಿತ್ರರಂಗಕ್ಕೆ ಬಹಿರಂಗ ಪತ್ರ ಬರೆದ ಮಾಲಾಶ್ರೀ | Filmibeat Kannada

  ಬಾಲಿವುಡ್‌ನ ಹೆಸರಾಂತ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ತಾಪ್ಸಿ ಪನ್ನು, ಭೂಮಿ ಪಡ್ನೇಕರ್‌ ಹಾಗೂ ಮುಂತಾದವರು ಟ್ವಿಟ್ಟರ್‌ಗಳಲ್ಲಿ ತಮಗೆ ಬಂದ ಸಹಾಯದ ಮನವಿಯನ್ನು ದಾಟಿಸುತ್ತಿದ್ದಾರೆ ಅಥವಾ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಸಂಪರ್ಕಿಸಬೇಕಾದ ಸಂಪರ್ಕ ಸಂಖ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಆದರೆ ರವೀನಾ ಅವರು ಪ್ರಸ್ತುತ ಸನ್ನಿವೇಶದ ಅಗತ್ಯಕ್ಕೆ ಸ್ಪಂದಿಸಿ ಮೆಚ್ಚುಗೆಗೆ ಕಾರಣವಾಗಿದ್ದಾರೆ.

  English summary
  Actress Raveena Tandon donates 300 oxygen cylinders in Mumbai and Delhi. She says will continue this work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X