ದಮಯ್ಯ ಅಂತೀನಿ ನನಗೆ ಹೊಡಿಬೇಡಿ ; ಬೀದಿಯಲ್ಲಿ ಅಂಗಲಾಚಿದ ರವೀನಾ ಟಂಡನ್..!
ಹೆಂಡದ ಅಮಲು ನಡಿಗೆಯನು ಮಾತ್ರ ತಪ್ಪಿಸಿದರೆ ಹಣದ ಅಮಲು ನಡವಳಿಕೆಯನ್ನೇ ತಪ್ಪಿಸುತ್ತದೆ. ಇದಕ್ಕೆ ಬಾಲಿವುಡ್‌ನ ಸ್ಟಾರ್ ರವೀನಾ ಟಂಡನ್ ಅತ್ಯುತ್ತಮ ಉದಾಹರಣೆ ಅನ್ನುವುದು ಸದ್ಯಕ್ಕೆ ವ್ಯಕ್ತವಾಗ್ತಿರುವ ಸಾರ್ವತ್ರಿಕ ಅಭಿಪ್ರಾಯ. ಯಾಕೆಂದರೆ ವೈರಲ್ ಆದ ವಿಡಿಯೋದಲ್ಲಿ ಕೆ.ಜಿ.ಎಫ್ 02 ಖ್ಯಾತಿಯ ರವೀನಾ ಟಂಡನ್ ಅವರ ನಡಾವಳಿಯೇ ಹಾಗಿದೆ.
ಹೌದು, ಅಸಲಿಗೆ.. ನಿನ್ನೆ ಮುಂಬೈನ ರಿಜ್ವಿ ಲಾ ಕಾಲೇಜ್ ಬಳಿ ಕಾರ್ಟರ್ ರಸ್ತೆಯಲ್ಲಿ ರವೀನಾ ಟಂಡನ್ ಅವರ ಐಶಾರಾಮಿ ಕಾರು ನಿಂತಿತ್ತು. ಇದೇ ಸಮಯದಲ್ಲಿ ತಮ್ಮ ಕುಟುಂಬ ಸಮೇತ ಮೊಹಮ್ಮದ್ ಅಲ್ಲಿಂದ ತೆರಳುತ್ತಿದ್ದರು. ಈ ವೇಳೆ ರವೀನಾ ಅವರ ಕಾರು ಹಿಂಬದಿ ಚಲಿಸಿದೆ. ಪರಿಣಾಮ ಮೊಹಮ್ಮದ್ ಅವರ ತಾಯಿಗೆ ಗಂಭೀರ ಗಾಯವಾಗಿದೆ. ಇದನ್ನ ಮೊಹಮ್ಮದ್ ಮತ್ತು ಅವರ ಮಗಳು ಪ್ರಶ್ನಿಸಿದ್ದಕ್ಕೆ ರವೀನಾ ಟಂಡನ್ ಅವರ ಕಾರು ಚಾಲಕ ಕ್ಯಾತೆ ತೆಗೆದಿದ್ದಾನೆ.

ಇಷ್ಟೇ ಆಗಿದ್ದರೆ ರಂಪ-ರಾಮಾಯಣ ಆಗ್ತಿರಲಿಲ್ಲ. ಆದರೆ.. ಚಾಲಕ ಮತ್ತು ಮೊಹಮ್ಮದ್ ನಡುವೆ ಜಗಳ ತಾರಕಕ್ಕೇರಿದ ಹಿನ್ನೆಲೆ ಕಾರಿಂದ ಇಳಿದು ಬಂದ ರವೀನಾ, ಮೊಹಮ್ಮದ್ ಅವರ ಮೇಲೆ ಹರಿಹಾಯ್ದಿದ್ದಾರೆ. ಇನ್ನೂ ಈ ಬೀದಿ ಜಗಳ ಕಣ್ತುಂಬಿಕೊಳ್ಳುತ್ತಾ ನಿಂತ ಸಾರ್ವಜನಿಕರ ಪ್ರಕಾರ ಮತ್ತು ಮೊಹಮ್ಮದ್ ಆರೋಪ ಮಾಡಿರುವ ಪ್ರಕಾರ ಕುಡಿದ ಮತ್ತಿನಲ್ಲಿದ್ದ ರವೀನಾ ಟಂಡನ್ ಇದೇ ವೇಳೆ ಮೊಹಮ್ಮದ್ ಅವರ ತಾಯಿ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ.
ರವೀನಾ ಟಂಡನ್ ಅವರ ಈ ವರ್ತನೆಯಿಂದ ತಾಳ್ಮೆಯನ್ನ ಕಳೆದುಕೊಂಡ ಮೊಹಮ್ಮದ್ ಮತ್ತು ಅವರ ಕುಟುಂಬ ರವೀನಾ ಟಂಡನ್ ಅವರನ್ನ ಆ ನಂತರ ಸುತ್ತುವರೆದಿದೆ. ಇನ್ನೂ ಅಲ್ಲಿದ್ದ ಸಾರ್ವಜನಿಕರು ಕೂಡ ರವೀನಾ ಟಂಡನ್ ಅವರಿಗೆ ಘೇರಾವ್ ಹಾಕಿದ್ದಾರೆ. ಪೊಲೀಸ್ ಠಾಣೆಗೆ ನಡೆಯುವಂತೆ ಆಕ್ರೋಶವನ್ನ ಹೊರ ಹಾಕಿ ವಿಡಿಯೋ ಮಾಡಿದ್ದಾರೆ.
ಇದೆಲ್ಲದರಿಂದ ವಿಚಲಿತಗೊಂಡ ರವೀನಾ ಟಂಡನ್ ಆ ನಂತರ ಪರಿಸ್ಥಿತಿಯನ್ನ ಸಂಭಾಳಿಸುವ ಪ್ರಯತ್ನವನ್ನ ಮಾಡಿದ್ದಾರೆ. ಸುತ್ತ ಮುತ್ತಲಿನ ನೂಕು ನುಗ್ಗಲಿನಿಂದ ಹೆದರಿ ತನಗೇನು ಮಾಡಂದತೆ ಅಲ್ಲಿದ್ದ ಜನರ ಬಳಿ ಕೇಳಿಕೊಂಡಿದ್ದಾರೆ. ವಿಡಿಯೋ ಮಾಡದಂತೆ ಮನವಿಯನ್ನೂ ಮಾಡಿಕೊಂಡು, ನನ್ನನ್ನು ತಳ್ಳಬೇಡಿ, ನನ್ನನ್ನು ಹೊಡೆಯಬೇಡಿ ಎಂದು ಕೈ ಮುಗಿದು ಗೋಗರೆದಿದ್ದಾರೆ.
ಸದ್ಯಕ್ಕೆ ರವೀನಾ ಟಂಡನ್ ಅವರ ನಡೆ ಮತ್ತು ನುಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಿಡಿಯನ್ನ ಹಚ್ಚಿದೆ. ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಇನ್ನೂ.. ಈ ಗಲಾಟೆಯ ನಂತರ ಮೊಹಮ್ಮದ್ ಘಟನೆಯನ್ನು ವಿವರಿಸಿದ್ದು, ತನ್ನ ತಾಯಿ, ಸಹೋದರಿ ಮತ್ತು ಸೊಸೆ ರಿಜ್ವಿ ಕಾಲೇಜು ಬಳಿ ಹೋಗುತ್ತಿದ್ದಾಗ ರವೀನಾ ಅವರ ಕಾರು ಚಾಲಕ ತನ್ನ ತಾಯಿಯ ಮೇಲೆ ಕಾರು ಹತ್ತಿಸಿದ್ದಾನೆ ಎಂದು ದೂರಿದ್ದಾರೆ. ಇದನ್ನು ಪ್ರಶ್ನಿಸಿದಾಗ ಕಾರು ಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಕುಡಿದ ಅಮಲಿನಲ್ಲಿದ್ದ ರವೀನಾ ಕೂಡ ಮನೆಯಿಂದ ಹೊರ ಬಂದು ನನ್ನ ತಾಯಿಗೆ ಹೊಡೆದಿದ್ದಾರೆ ಅವಳ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಕೂಡ ಮೊಹಮ್ಮದ್ ಹೇಳಿದ್ದಾರೆ.

ಇನ್ನೂ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವುದಕ್ಕಾಗಿ 4 ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾದರೂ ಪೊಲೀಸರು ದೂರು ಸ್ವೀಕರಿಸಿಲ್ಲ ಎಂಬ ಆರೋಪವನ್ನೂ ಕೂಡ ಮೊಹಮ್ಮದ್ ಮಾಡಿದ್ದಾರೆ. ಇದೆಲ್ಲದರ ನಡುವೆ ಅಲ್ಲಿಂದ ಹಾಗೂ ಹೀಗೂ ಮನೆಗೆ ತೆರಳುವಲ್ಲಿ ರವೀನಾ ಟಂಡನ್ ಯಶಸ್ವಿಯಾದ ಬೆನ್ನಲ್ಲಿಯೇ ಅವರ ಪತಿ ಅನಿಲ್ ತಡಾನಿ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲೇ ಪ್ರಕರಣ ಇತ್ಯರ್ಥಪಡಿಸುವಂತೆ ಮೊಹಮ್ಮದ್ ಅವರಲ್ಲಿ ಕೇಳಿದ್ದಾರೆ. ಆದರೆ ಇದಕ್ಕೆ ಮೊಹಮ್ಮದ್ ನಾವು ಅವರೊಂದಿಗೆ ಏಕೆ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀನಾ ಟಂಡನ್ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನ ನೀಡಿಲ್ಲ


Click it and Unblock the Notifications











