ಸೂಪರ್ ಹಿಟ್ ಟಿಪ್ ಟಿಪ್ ಬರ್ಸಾ ಪಾನಿ ಶೂಟ್ ನಂತರ ಆಗಿದ್ದೇನು? ರವೀನಾ ಟಂಡನ್ ಹೇಳುತ್ತಾರೆ ನೋಡಿ!
ಟಿಪ್ ಟಿಪ್ ಬರ್ಸಾ ಪಾನಿ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ.. ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಮಳೆಯಲ್ಲಿ ಕುಣಿಯುವ ಈ ಹಾಡು ಅದೇಷ್ಟೋ ಜನರ ಫೇವರಿಟ್ ಕೂಡ. ಇಡೀ ಹಾಡನ್ನು ಪೂರ್ತಿಯಾಗಿ ಮಳೆಯ ಹಾಡಾಗಿ ಶೂಟ್ ಮಾಡಿದ್ದಾರೆ. ನೋಡುವ ನಮಗೆ ಏನು ಅನ್ನಿಸದಿದ್ದರೂ ಮಳೆಯಲ್ಲಿ ನೆನೆದ ಅವರ ಸ್ಥಿತಿ ಬಗ್ಗೆ ನಮಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಹೇಳಿದ್ದಾರೆ.
1994 ರಲ್ಲಿ ಬಿಡುಗಡೆಯಾದ ಮೊಹ್ರಾ ಚಿತ್ರದ ಹಾಡು ಟಿಪ್ ಟಿಪ್ ಬರ್ಸಾ ಪಾನಿ. ಈ ಸೂಪರ್ ಹಿಟ್ ಹಾಡಿನ ಶೂಟಿಂಗ್ ಮುಗಿದ ನಂತರ ತಾನು ಟೆಟನಸ್ ಚುಚ್ಚುಮದ್ದು ಪಡೆಯಬೇಕಾಗಿತ್ತು. ಅಷ್ಟು ಅನಾರೋಗ್ಯಕ್ಕೆ ಒಳಗಾಗಿದ್ದಾಗಿ ನಟಿ ರವೀನಾ ಟಂಡನ್ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್‌ನ ವೇದಿಕೆಗೆ ಅತಿಥಿಯಾಗಿ ಭೇಟಿ ನೀಡಿದ್ದರು. ಈ ವೇಳೆ ಮಾಹಿತಿ ಹಂಚಿಕೊಂಡಿದ್ದಾರೆ.

ಸೂಪರ್ ಹಿಟ್ ಟಿಪ್ ಟಿಪ್ ಬರ್ಸಾ ಪಾನಿ
ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಸೂಪರ್ ಹಿಟ್ ಟಿಪ್ ಟಿಪ್ ಬರ್ಸಾ ಪಾನಿ ರೋಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಳದಿ ಸೀರೆಯಲ್ಲಿ ರವೀನಾ ಅವರ ನೃತ್ಯ ಇನ್ನೂ ನೆನಪಿಸಿಕೊಳ್ಳಬಹುದು. ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್‌ನ ವೇದಿಕೆಯಲ್ಲಿ ಸ್ಪರ್ಧಿಯೊಬ್ಬರು ಈ ಹಾಡಿಗೆ ನೃತ್ಯ ಮಾಡಿದ ನಂತರ, ರವೀನಾ ಹಾಡಿನ ಚಿತ್ರೀಕರಣವನ್ನು ನೆನಪಿಸಿಕೊಂಡಿದ್ದಾರೆ.
ಈ ಹಾಡಿನಲ್ಲಿ ಮಳೆ ಮತ್ತು ನೆಲದ ತುಂಬಾ ಮೊಳೆಗಳು ಬಿದ್ದಿದ್ದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಶೂಟಿಂಗ್ ಮಾಡಲಾಗಿದೆ. ಈ ವೇಳೆ ತಾನು ಬರಿಗಾಲಿನಲ್ಲಿ ಇರಬೇಕಾಗಿತ್ತು ಎಂದು ಹೇಳಿದ್ದಾರೆ. ಇದಲ್ಲದೆ ನೀಡಿನಲ್ಲಿ ಇಡೀ ಹಾಡನ್ನು ಶೂಟ್ ಮಾಡಿದ್ದ ಕಾರಣ ತಾನು ಅನಾರೋಗ್ಯಕ್ಕೆ ಒಳಗಾಗಿದ್ದನ್ನು ನೆನಪಿಸಿಕೊಂಡರು.

ರವೀನಾಗೆ ಟೆಟನಸ್ ಚುಚ್ಚುಮದ್ದು
ಹಾಡಿನ ಚಿತ್ರೀಕರಣದಲ್ಲಿ ಮೊಣಕಾಲು ಪ್ಯಾಡ್‌ಗಳನ್ನು ಧರಿಸಿದ್ರೂ ಗಾಯ ಆಗದೇ ಇರಲಿಲ್ಲ. ಎರಡು ದಿನಗಳ ನಂತರ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದೆ ಎಂದಿದ್ದಾರೆ. "ನಾನು ಟೆಟನಸ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗಿತ್ತು ಮತ್ತು ಎರಡು ದಿನಗಳ ನಂತರ ಮಳೆಯಲ್ಲಿ ನೆನೆದ ಕಾರಣ ನಾನು ಮತ್ತೆ ಅನಾರೋಗ್ಯಕ್ಕೆ ಒಳಗಾಗಾಬೇಕಾಯಿತು. ನೀವು ತೆರೆಯ ಮೇಲೆ ಕಾಣುವ ಗ್ಲಾಮರ್ ತೆರೆಯ ಹಿಂದೆ ಹೇಳಲಾಗದ ಕಥೆಗಳನ್ನು ಮರೆಮಾಚುತ್ತದೆ. ಅಭ್ಯಾಸದ ಸಮಯದಲ್ಲಿ ಗಾಯಗಳು ಸಾಮಾನ್ಯ. ನಾವೆಲ್ಲರೂ ಅವುಗಳನ್ನು ಸಹಿಸಿಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.
ಕಲಾವಿದರು ಮತ್ತು ನೃತ್ಯ ನಿರ್ದೇಶಕರ ಕಷ್ಟವನ್ನು ವಿವರಿಸಿದ ಅವರು, " ಗಾಯ, ಅನಾರೋಗ್ಯಕ್ಕಿಂತ ಪರದೆಯ ಮೇಲೆ ಅಥವಾ ವೇದಿಕೆಯ ಮೇಲೆ ಪ್ರದರ್ಶನ ಮುಂದುವರಿಯಬೇಕು. ಸಹಿಸಿಕೊಂಡ ನೋವನ್ನು ಲೆಕ್ಕಿಸದೆ ಕೆಲಸ ಮಾಡುತ್ತೇವೆ. ಎಲ್ಲಾ ಕಲಾವಿದರು ಮತ್ತು ನೃತ್ಯ ನಿರ್ದೇಶಕರು ತೆರೆಮರೆಯಲ್ಲಿ ಸಹಿಸಿಕೊಳ್ಳುವ ಹೋರಾಟಗಳು ಇವು" ಎಂದು ರವಿನಾ ಟಂಡನ್ ತಿಳಿಸಿದ್ದಾರೆ.
90 ರ ದಶಕದ ಹಿಟ್ ಹಾಡಿನ ಚಿತ್ರೀಕರಣದ ಸಮಯದಲ್ಲಿ ರವೀನಾ ಟಂಡನ್ ಅವರು ಎದುರಿಸಿದ ಕಷ್ಟಗಳನ್ನು ಹಂಚಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2020ರಲ್ಲಿ ಪಿಂಕ್ವಿಲ್ಲಾ ಪೋರ್ಟಲ್ ಜೊತೆಗಿನ ಸಂದರ್ಶನದಲ್ಲಿ, ರವೀನಾ ಟಂಡನ್ ಅವರು ನಿರ್ಮಾಣ ಸ್ಥಳದಲ್ಲಿ ಕಲ್ಲುಗಳು ಮತ್ತು ಮೊಳೆಗಳು ಬಿದ್ದಿದ್ದವು. ಹಾಡಿಗೆ ಬಳಸಿದ ನೀರು ತುಂಬಾ ತಣ್ಣಗಿದ್ದ ಕಾರಣ ಚಿತ್ರೀಕರಣದ ವೇಳೆ ಜ್ವರ ಬಂದಿತ್ತು ಎಂದು ಬಹಿರಂಗಪಡಿಸಿದ್ದರು.
ರವೀನಾ ಅವರ ಮುಂದಿನ ಸಿನಿಮಾ
ರವೀನಾ ಟಂಡನ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಜೊತೆಗೆ ವೆಲ್ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸುನೀಲ್ ಶೆಟ್ಟಿ, ಸಂಜಯ್ ದತ್, ಅರ್ಷದ್ ವಾರ್ಸಿ, ಪರೇಶ್ ರಾವಲ್, ಜಾನಿ ಲಿವರ್ , ತುಷಾರ್ ಕಪೂರ್, ಜಾಕ್ವೆಲಿನ್ ಫರ್ನಾಂಡೀಸ್, ಶ್ರೇಯಸ್ ತಲ್ಪಾಡೆ, ಮತ್ತು ದಿಶಾ ಪಟಾನಿ ಸೇರಿದಂತೆ ಇನ್ನೂ ಕೆಲವರಿದ್ದಾರೆ.


Click it and Unblock the Notifications











