twitter
    For Quick Alerts
    ALLOW NOTIFICATIONS  
    For Daily Alerts

    'ಸ್ಮೈಲ್ ಫಿಲ್ಮ್ ಫೆಸ್ಟಿವಲ್' ಉದ್ಘಾಟನೆ ಮಾಡಿದ ನಟಿ ರವೀನಾ ಟಂಡನ್

    By Pavithra
    |

    'ಸ್ಮೈಲ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಫಾರ್ ಚಿಲ್ಡ್ರನ್ ಅಂಡ್ ಯೂಥ್ಸ್' (2017)ನ ಮೂರನೇ ಆವೃತಿಗೆ ಚಾಲನೆ ಸಿಕ್ಕಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್ ಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.

    ಸ್ಮೈಲ್ ಫೌಂಡೇಶನ್ ನ ಚೇರ್ಮನ್ ಮತ್ತು ಎಕ್ಸಿಕ್ಯುಟಿವ್ ಟ್ರಸ್ಟಿ ಸಂತಾನು ಮಿಶ್ರಾ, ಚಿತ್ರೋತ್ಸವದ ನಿರ್ದೇಶಕರಾದ ಜಿತೇಂದ್ರ ಮಿಶ್ರಾ, ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಿದ್ದರು. ಡಿ 13ರಿಂದ ಪ್ರಾರಂಭವಾಗಿರುವ ಸಿನಿಮೋತ್ಸವ ಡಿಸೆಂಬರ್ 17ರ ವರೆಗೂ ದೆಹಲಿಯ ಸಿರಿಫೋರ್ಟ್ನಲ್ಲಿ ನಡೆಯುತ್ತಿದೆ.

    raveena tandon integrate smile international film festival

    ಚಲನಚಿತ್ರೋತ್ಸವದ ಪ್ರಾರಂಭದ ಚಿತ್ರವಾಗಿ 'ರಿಮಾ ದಾಸ್' ಅವರ 'ವಿಲೇಜ್ ರಾಕ್ ಸ್ಟಾರ್ಸ್' ಆಯ್ಕೆ ಮಾಡಲಾಗಿದೆ. ಫೀಚರ್ ಫಿಲ್ಮ್ಸ್, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು, ಮತ್ತು ಮಕ್ಕಳು ನಿರ್ದೇಶಿಸಿದ ಚಲನಚಿತ್ರಗಳನ್ನು ಸಿನಿಮೋತ್ಸವದಲ್ಲಿ ಪ್ರದರ್ಶನವಾಗಲಿದೆ. ಈ ವರ್ಷದ ಉತ್ಸವದಲ್ಲಿ 30ಕ್ಕೂ ಹೆಚ್ಚಿನ ದೇಶಗಳಿಂದ ಆಯ್ಕೆಯಾದ 100ಕ್ಕಿಂತಲೂ ಹೆಚ್ಚಿನ ಚಲನಚಿತ್ರಗಳು 7 ದಿನಗಳು ಪ್ರದರ್ಶನವಾಗಲಿದೆ.

    raveena tandon integrate smile international film festival

    ಚಿತ್ರೋತ್ಸವದಲ್ಲಿ 'ದಿ ಡೇ ಮೈ ಫಾದರ್ ಬಿಕೆಮ್ ಎ ಬ್ರಶ್' , 'ನಫಾಸ್ ಅಂಡ್ ಗ್ಲಾಸಸ್', ಇಂತಹ ಅನೇಕ ಚಿತ್ರಗಳನ್ನ ಪ್ರದರ್ಶನ ಮಾಡಲಾಗುತ್ತಿದೆ. "ಟೇಕ್ ಒನ್" ವಿಭಾಗದಲ್ಲಿ ಜಗತ್ತಿನಾದ್ಯಂತದ ಮಕ್ಕಳು ಮಾಡಿದ 25 ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

    raveena tandon integrate smile international film festival

    ಚಲನಚಿತ್ರೋತ್ಸವದಲ್ಲಿ ಛಾಯಾಗ್ರಹಣ, ಕಥಾಹಂದರ, ಕಲೆ ವಿನ್ಯಾಸ ಮತ್ತು ಇತರ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಆಸ್ಕರ್ ಆಯ್ಕೆ ಸಮಿತಿಯಲ್ಲಿ ಸಹ ಪ್ರಶಸ್ತಿ ವಿಜೇತರಾಗಿದ್ದ ಸೌಂಡ್ ಡಿಸೈನರ್ ಅಮೃತ್ 'ಪ್ರೀತಮ್ ದತ್ತಾ' ಧ್ವನಿ ವಿನ್ಯಾಸ ಕಾರ್ಯಾಗಾರವನ್ನು ನಡೆಸಲಿದ್ದಾರೆ.

    English summary
    Actress raveena tandon integrate third edition of smile international film festival at delhi, this film festival especially for children's movie,
    Thursday, December 14, 2017, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X