"ಎಲ್ರಿಗೂ ನನ್ನ ತೊಡೆಗಳ ಮೇಲೆ ಕಣ್ಣು.. 'ತೊಡೆಗಳ ರಾಣಿ' ಅಂತಿದ್ರು: ಯಾರ್ಗೂ ಬೇಡ ಆ ಟಾರ್ಚರ್": ರವೀನಾ

By ಫಿಲ್ಮಿಬೀಟ್ ಡೆಸ್ಕ್

90ರ ದಶಕದ ಬಾಲಿವುಡ್‌ನ ಬಹುಬೇಡಿಕೆಯ ನಟಿ ರವೀನಾ ಟಂಡನ್. ಅಂದಕ್ಕೆ ಅಭಿನಯ ಎನ್ನುವ ಬಟ್ಟೆ ತೊಡಿಸಿದ್ದಂತಿದ್ದ ಚೆಲುವೆ ತಮ್ಮ ಮಾದಕ ಮೈಮಾಟದಿಂದಲೂ ಕ್ರೇಜ್ ಸೃಷ್ಟಿಸಿಕೊಂಡಿದ್ದರು. ರವೀನಾ ಅಂದಿನ ಪಡ್ಡೆಗಳ ಪಾಲಿನ ಕನಸಿನ ರಾಣಿ ಆಗಿದ್ದರು.

'ಉಪೇಂದ್ರ' ಸಿನಿಮಾದಲ್ಲಿ ಕೀರ್ತಿ ಆಗಿ ಮೋಡಿ ಮಾಡಿದ ರವೀನಾ ಟಂಡನ್, ಇತ್ತೀಚೆಗೆ KGF- 2 ಚಿತ್ರದಲ್ಲಿ ರಮಿಕಾ ಸೇನ್ ಆಗಿ ಅಬ್ಬರಿಸಿದ್ದರು. ಹಾಗಾಗಿ ರವೀನಾ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಇತ್ತೀಚೆಗೆ ನಟಿ ರವೀನಾ ಸಂದರ್ಶನವೊಂದರಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ತಮ್ಮ ಬಗ್ಗೆ ಇದ್ದ ಆರೋಪಗಳ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ತಮಗೆ ದುರಹಂಕಾರಿ ಎನ್ನುವ ಪಟ್ಟ ಕಟ್ಟಿದ್ದು ಯಾಕೆ? ಚಿತ್ರರಂಗದಲ್ಲಿ ನೇರವಾಗಿ ನಿಷ್ಠುರವಾಗಿ ಇದ್ದರೆ ಏನೆಲ್ಲಾ ಆಗುತ್ತದೆ. ಕೆಲ ಸಿನಿಮಾಗಳ ಅವಕಾಶಗಳು ಕೈ ತಪ್ಪಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದರು.

ಆಂಗ್ಲ ಮಾಧ್ಯಮಕ್ಕೆ ನೀಡಿರುವ ಮತ್ತೊಂದು ಸಂದರ್ಶನದಲ್ಲಿ ತಮಗಾದ ಬಾಡಿ ಶೇಮಿಂಗ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಂದಿನ ಕೆಲ ಗಾಸಿಪ್ ಮ್ಯಾಗಜೀನ್‌ಗಳಲ್ಲಿ ಬರೆದು ಹೇಗೆ ನಟಿಯರ ಕರಿಯರ್ ಹಾಳಾಗುತ್ತಿತ್ತು ಎನ್ನುವುದನ್ನು ತಿಳಿಸಿದ್ದಾರೆ.

ಗಾಸಿಪ್ ಮ್ಯಾಗಜೀನ್‌ಗಳ ಬಗ್ಗೆ ಬೇಸರ

ಗಾಸಿಪ್ ಮ್ಯಾಗಜೀನ್‌ಗಳ ಬಗ್ಗೆ ಬೇಸರ

"90ರ ದಶಕದ ಗಾಸಿಪ್ ಮ್ಯಾಗಜೀನ್‌ಗಳು ಕೆಟ್ಟದಾಗಿದ್ದವು. ಮತ್ತು ಅದರಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳೆಯರು, ಈಗ ಹೆಂಗಸರ ಲಿಬ್ ಬ್ಯಾಡ್ಜ್ ಅನ್ನು ತಮ್ಮ ತಲೆ ಮತ್ತು ಹೃದಯದ ಮೇಲೆ ಹೊತ್ತುಕೊಂಡು ತಿರುಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಅವರು ಹೆಂಗಸರ ಶತ್ರುಗಳು, ಹೆಂಗಸರ ದೇಹವನ್ನು ಅವಮಾನಿಸುವವರು, ಒಬ್ಬರನ್ನು ಕೆಳಗಿಳಿಸಿ ಮತ್ತೊಬ್ಬರನ್ನು ಕರೆತರಲು ಬೇಕಾದದ್ದನೆಲ್ಲಾ ಮಾಡುತ್ತಾರೆ. ಇಂದು ಅವರು ದೊಡ್ಡ ಸ್ತ್ರೀವಾದಿಗಳಾಗಿ ಸುತ್ತಾಡುತ್ತಿದ್ದಾರೆ, ಇದೆಲ್ಲಾ ಯಾವಾಗ ಸಾಧ್ಯವಾಯಿತು ಎಂದು ನನಗೆ ಅಚ್ಚರಿ ಆಗುತ್ತದೆ. ನಾನು ಅವರ ಬಗ್ಗೆ ಮಾತನಾಡಲು ಆರಂಭಿಸಿದರೆ ಅಷ್ಟೇ" ಎಂದು ನಕ್ಕಿದ್ದಾರೆ.

ನನ್ನನ್ನು ತೊಡೆಗಳ ರಾಣಿ ಎನ್ನುತ್ತಿದ್ದರು

ನನ್ನನ್ನು ತೊಡೆಗಳ ರಾಣಿ ಎನ್ನುತ್ತಿದ್ದರು

"ನನಗೆ ಸಾಕಷ್ಟು ಅಡ್ಡ ಹೆಸರುಗಳನ್ನು ಇಟ್ಟಿದ್ದರು. ಬಿಚ್ಚಮ್ಮ, ತೊಡೆಗಳ ರಾಣಿ, ಅದು ಇದು ಅಂತ ಏನೇನೋ. ನಾನು ಆಗ ಗುಂಡು ಗುಂಡಾಗಿ ದಪ್ಪಗಿದ್ದೆ. ಹದಿನಾರುವರೆ ವರ್ಷಕ್ಕೆ ಚಿತ್ರರಂಗಕ್ಕೆ ಬಂದವಳು. ನನಗೆ ಟೀನೇಜ್‌ನಲ್ಲೂ ಬೇಬಿ ಫ್ಯಾಟ್ ಇತ್ತು. ಅದು ಇನ್ನು ಹೋಗಿಲ್ಲ. ಈಗ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹಾಗೆಯೇ ಇರುತ್ತೇನೆ. ಸಮಸ್ಯೆ ಇಲ್ಲ" ಎಂದಿದ್ದಾರೆ.

ಹೀರೋಗಳು ಹೇಳಿದ್ದು ಬರೀತಿದ್ರು

ಹೀರೋಗಳು ಹೇಳಿದ್ದು ಬರೀತಿದ್ರು

"ಬರೀ ನನಗೆ ಮಾತ್ರ ಇಂತಹ ಅಡ್ಡ ಹೆಸರುಗಳು ಇರಲಿಲ್ಲ. ನನ್ನಂತೆ ಹಲವು ನಟಿಯರನ್ನು ಹೀಗೆ ಕರೆಯುತ್ತಿದ್ದರು. ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಬದಲು ಅವರೇ ಈ ರೀತಿ ಮಾಡುತ್ತಿದ್ದರು. ಕೆಲವರು ಹೀರೊಗಳ ಪ್ರೀತಿಯಲ್ಲಿ ಬಿದ್ದು ಬಿಡುತ್ತಿದ್ದರು. ಆ ಹೀರೊಗಳು ಹೇಳಿದ್ದನ್ನೇ ಬರೆಯುತ್ತಿದ್ದರು. ಆತ ಆಕೆಯನ್ನು ಹಣಿಯಬೇಕು ಎಂದುಕೊಂಡರೆ ಆಕೆಯ ಕಥೆ ಮುಗಿಯಿತು. ನಾಚಿಕೆ ಆಗಬೇಕು. ಮ್ಯಾಗಜೀನ್ ಅಂಕಣಗಳಿಂದ ಆಕೆಯ ಕರಿಯರ್ ಹಾಳಾಗುತ್ತಿತ್ತು. ಹೀರೊಗಳು ಹೇಳಿದರು ಎನ್ನುವ ಕಾರಣಕ್ಕೆ ಸಾಕಷ್ಟು ಸುಳ್ಳು ಅಂಕಣಗಳನ್ನು ಬರೆಯುತ್ತಿದ್ದರು.

ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತಿತ್ತು

ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತಿತ್ತು

"ಒಂದು ವೇಳೆ ಕ್ಷಮೆ ಕೇಳುವಂತೆ ಇದ್ದರೆ, ಅದು ಪತ್ರಿಕೆಯ ಇತರ ಕೆಲವು ಸಂಚಿಕೆಗಳ ಕೊನೆಯ ಸಾಲಿನಲ್ಲಿರುತ್ತಿತ್ತು. ಹಾಗಾದರೆ ಮೊದಲು ಬರೆದ ಕಥೆ ನಿಜ ಅಲ್ಲ ಎಂದು ಸಾಬೀತಾಯಿತು. ಆದರೆ ಅದನ್ನು ಯಾರು ಓದುತ್ತಾರೆ. ಅಷ್ಟರಲ್ಲಿ ಅಬ್ಬರದ ಮುಖ್ಯಾಂಶಗಳ ಸುದ್ದಿ ಸದ್ದು ಮಾಡಿಬಿಟ್ಟಿರುತ್ತಿತ್ತು ಅಲ್ಲವೇ?" ಎಂದು ರವೀನಾ ಕೇಳಿದ್ದಾರೆ. ಇದೇ ಕಾರಣಕ್ಕೆ ಮದುವೆಯ ನಂತರ ಬಹಳ ದಿನಗಳ ಕಾಲ ರವೀನಾ ಟಂಡನ್ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದರು.

More from Filmibeat

English summary
Raveena Tandon on being body-shamed in Btwon: I was called thunder thighs. She Calls 90's Journalists Dirty. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X