"ಚೂರು ಬಟ್ಟೆ ಹರಿಯದೇ ಬಲತ್ಕಾರದ ಸನ್ನಿವೇಶದಲ್ಲಿ ನಟಿಸಿದವಳು ನಾನೊಬ್ಳೆ": ರವೀನಾ ಟಂಡನ್
ರವೀನಾ ಟಂಡನ್ 90ರ ದಶಕದ ಬಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದರು. 'ಉಪೇಂದ್ರ' ಚಿತ್ರದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ಕುಣಿದು ಕನ್ನಡ ಸಿನಿರಸಿಕರಿಗೂ ಪರಿಚಿತರಾದರು. ಇತ್ತೀಚೆಗೆ 'KGF'- 2 ಚಿತ್ರದಲ್ಲಿ ರಮಿಕಾ ಸೇನ್ ಆಗಿ ಮತ್ತೊಮ್ಮೆ ರವೀನಾ ಮೋಡಿ ಮಾಡಿದ್ದು ಗೊತ್ತೇಯಿದೆ.
ಒಂದ್ಕಾಲದಲ್ಲಿ ರವೀನಾ ಟಂಡನ್ ಹೆಸರು ಕೇಳಿದ್ರೆ, ಪಡ್ಡೆ ಹುಡುಗರು ಅಲರ್ಟ್ ಆಗ್ತಿದ್ದರು. 'ಥೂ ಚೀಸ್ ಬಡಿ ಹೈ ಮಸ್ತ್ ಮಸ್ತ್' ಎಂದು 'ಮೆಹ್ರಾ' ಸಿನಿಮಾ ಚೆಲುವೆ ಕುಣಿದಿದ್ದನ್ನು ಸಿನಿರಸಿಕರು ಇನ್ನು ಮರೆತ್ತಿಲ್ಲ. ಆಕೆಯ ಮಾದಕ ಮೈಮಾಟಕಂತೂ ಇಡೀ ಬಾಲಿವುಡ್ ಫಿದಾ ಆಗಿ ಹೋಗಿತ್ತು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಮಸ್ತ್ ಮಸ್ತ್ ಹುಡುಗಿ ಕಮಾಲ್ ಮಾಡಿದ್ದರು. ಆದರೆ ರವೀನಾಗೆ ಅಹಂಕಾರ ಹೆಚ್ಚು, ನಿರ್ಮಾಪಕ ನಿರ್ದೇಶಕರ ಮಾತು ಕೇಳಲ್ಲ ಎನ್ನುವ ಆರೋಪ ಇತ್ತು.
ಈ ಆಟಿಟ್ಯೂಡ್‌ನಿಂದ ರವೀನಾಗೆ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಒಳ್ಳೆ ಅವಕಾಶಗಳನ್ನು ಕೈಚೆಲ್ಲುವಂತಾಗಿತ್ತು. ಆದರೆ ಅದಕ್ಕೆ ಕಾರಣ ಏನು ಎನ್ನುವುದನ್ನು ಇದೀಗ ಸ್ವತಃ ರವೀನಾ ಬಿಚ್ಚಿಟ್ಟಿದ್ದಾರೆ. ANIಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಕಿಸ್ಸಿಂಗ್ ಸೀನ್‌ನಲ್ಲಿ ನಟಿಸ್ತಿರಲಿಲ್ಲ
"ನನಗೆ ಕೆಲ ವಿಚಾರಗಳು ಕಂಫರ್ಟ್ ಎನಿಸುತ್ತಿರಲಿಲ್ಲ. ಉದಾಹರಣೆಗೆ ಡ್ಯಾನ್ಸ್ ಸ್ಟೆಪ್ಸ್. ನನಗೆ ಯಾವುದಾದರೂ ಸ್ಟೆಪ್ ಕಂಫರ್ಟ್ ಅನ್ನಿಸದಿದ್ದರೆ ನೇರವಾಗಿ ಹೇಳಿಬಿಡುತ್ತಿದ್ದೆ. ನಾನು ಆ ಸ್ಟೆಪ್ ಮಾಡುತ್ತಿರಲಿಲ್ಲ. ನನಗೆ ಸ್ವಿಮ್‌ಸೂಟ್ ಧರಿಸಲು ಇಷ್ಟವಾಗುತ್ತಿರಲಿಲ್ಲ. ಜೊತೆಗೆ ನಾನು ಕಿಸ್ಸಿಂಗ್ ಸೀನ್‌ಗಳಲ್ಲೂ ನಟಿಸುತ್ತಿರಲಿಲ್ಲ. ಶೂಟಿಂಗ್‌ಗೂ ಮೊದಲೇ ಒಪ್ಪಂದದ ಸಮಯದಲ್ಲಿ ಈ ಷರತ್ತುಗಳನ್ನೆಲ್ಲಾ ಹೇಳುತ್ತಿದ್ದೆ."

ದುರಹಂಕಾರಿ ಎನ್ನುವ ಹಣೆಪಟ್ಟಿ
"ನನ್ನ ಈ ಷರತ್ತುಗಳಿಂದ ನನಗೆ ಮೇಲೆ ದುರಹಂಕಾರಿ ಎನ್ನುವ ಹಣೆಪಟ್ಟಿ ಕಟ್ಟಿಬಿಟ್ಟಿದ್ದರು. ಇದರಿಂದಲೇ ಸಾಕಷ್ಟು ಅವಕಾಶಗಳು ಕಳೆದುಕೊಳ್ಳುವಂತಾಯಿಯಿತು. ಆದರೂ ಕೂಡ ನಾನು ಅಂತ ಸನ್ನಿವೇಶಗಳಲ್ಲಿ ನಟಿಸಲಿಲ್ಲ. ಎರಡು ರೇಪ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದರು ಅಶ್ಲೀಲತೆಗೆ ಆಸ್ಪದ ಕೊಡದಂತೆ ಕಾಣಿಸಿಕೊಂಡಿದ್ದೆ. ಒಂದು ಚೂರು ಬಟ್ಟೆ ಹರಿಯದೇ ರೇಪ್ ಸೀನ್‌ನಲ್ಲಿ ನಟಿಸಿದ್ದು ನಾನು ಮಾತ್ರ ಎನಿಸುತ್ತೆ" ಎಂದು ರವೀನಾ ಹೇಳಿದ್ದಾರೆ.

'ಢರ್' ಅವಕಾಶ ನನಗೆ ಬಂದಿತ್ತು
"ನನ್ನ ಬಟ್ಟೆ ಹರಿಯುವಂತಿಲ್ಲ. ಬೇಕಿದ್ದರೆ ನೀನು ರೇಪ್ ಸೀನ್ ಮಾಡು ಎನ್ನುತ್ತಿದ್ದೆ. (Mera dress phatega nahi..tum karlo rape scene agar karna hai) ಇದಕ್ಕೆ 'ನನ್ನನ್ನು ಅಹಂಕಾರಿ' ಎನ್ನುತ್ತಿದ್ದರು. 'ಢರ್' ಸಿನಿಮಾ ಅವಕಾಶ ಮೊದಲು ನನಗೆ ಬಂದಿತ್ತು. ಅದರಲ್ಲಿ ಅಶ್ಲೀಲ ಎನ್ನುವುದು ಏನು ಇರಲಿಲ್ಲ. ಆದರೆ ಮೊದಲಿಗೆ ಚಿತ್ರದಲ್ಲಿ ಒಂದು ಸೀನ್ ಇತ್ತು. ಅದು ನನಗೆ ಕಂಫರ್ಟ್ ಎನ್ನಿಸಲಿಲ್ಲ. ನಾನು ಸ್ವಿಮ್ ಸೂಟ್ ಧರಿಸುತ್ತಿರಲಿಲ್ಲ. ನಾನು ಸ್ವಿಮ್ ಸೂಟ್ ಧರಿಸೋಕೆ ಆಗುವುದಿಲ್ಲ ಎಂದು ಹೇಳಿದ್ದೆ."

ತೆಲುಗು, ಕನ್ನಡ ಚಿತ್ರಗಳಲ್ಲಿ ನಟನೆ
ಇನ್ನು 'ಪ್ರೇಮ್ ಖೈದಿ' ಸಿನಿಮಾ ಅವಕಾಶ ಕೂಡ ಮೊದಲು ನನಗೆ ಬಂದಿತ್ತು. ಕರೀಷ್ಮಾ ಕಪೂರ್ ಆ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲೂ ಕೂಡ ನನಗೆ ಒಂದು ಸನ್ನಿವೇಶ ನನಗೆ ಅದು ಕಂಫರ್ಟ್ ಎನಿಸಲಿಲ್ಲ. ಅದಕ್ಕಾಗಿ ಆ ಸಿನಿಮಾ ಕೂಡ ಒಪ್ಪಿಕೊಂಡಿರಲಿಲ್ಲ" ಎಂದು ರವೀನಾ ಟಂಡನ್ ವಿವರಿಸಿದ್ದಾರೆ. 1991ರಲ್ಲಿ 'ಪಥರ್ ಕೆ ಫೂಲ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮುಂಬೈ ಬೆಡಗಿ ಮುಂದೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದರು. ತೆಲುಗು, ಕನ್ನಡ ಸಿನಿಮಾಗಳಲ್ಲೂ ಮಿಂಚಿದರು.


Click it and Unblock the Notifications











