Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆಯಾಗದೇ ಮಕ್ಕಳನ್ನು ಪಡೆದಿದ್ದ ರವೀನಾ ಟಂಡನ್! ಸತ್ಯದ ಹಿಂದಿನ ಕತೆ
ಬಾಲಿವುಡ್ ನಟಿ ರವೀನಾ ಟಂಡನ್ ತನ್ನ ಇಬ್ಬರು ದತ್ತು ಪುತ್ರಿಯರಾದ ಪೂಜಾ ಮತ್ತು ಛಾಯಾ ಬಗ್ಗೆ ಈಗ ಮೊದಲ ಬಾರಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 90ರ ದಶಕದಲ್ಲಿರವೀನಾ ಟಂಡನ್ ಹಿಟ್ ನಟಿಯಾಗಿ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಶೂಟಿಂಗ್ ಬಿಟ್ಟರೇ ಬೇರೆ ಯಾವುದಕ್ಕೂ ಸಮಯ ನೀಡಲಾಗದಷ್ಟು ಬ್ಯುಸಿಯಾಗಿದ್ದರು. ಅಷ್ಟೇ ಅಲ್ಲದೇ ರವೀನಾ ಟಂಡನ್ ಅವರಿಗೆ ಆಗ ಕೇವಲ 21 ವರ್ಷ ವಯಸ್ಸು. ಅಷ್ಟೇ ಅಲ್ಲದೇ ಮದುವೆ ಕೂಡ ಆಗಿರದ ರವೀನಾ ಟಂಡನ್ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ಆದರೇ ಮಕ್ಕಳನ್ನು ದತ್ತು ಪಡೆದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಹಲವು ವರ್ಷಗಳ ನಂತರ ತಾನು ಗೌಪ್ಯವಾಗಿ ಇದಿದ್ದಕ್ಕೆ ಕಾರಣವನ್ನು ಬಹಿರಂಗ ಪಡಿಸಿದ್ದಾರೆ ರವೀನ್ ಟಂಡನ್.
ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರ ಸಂದರ್ಶನದಲ್ಲಿ ಮಾತನಾಡುತ್ತಾ "ನಾನು ಮಕ್ಕಳನ್ನು ದತ್ತು ಪಡೆದಾಗ ಟ್ಯಾಬ್ಲಾಯ್ಡ್ ಮತ್ತು ಡರ್ಟಿ ಜರ್ನಲಿಸಂನ ಯುಗವಾಗಿತ್ತು. ಆಗ ವೈಯುಕ್ತಿಕ ವಿಚಾರಗಳನ್ನು ಬರೆಯುವ ಹಾರ್ಡ್‌ಕೋರ್ ಬರಹಗಾರರು ಇದ್ದರು, ಜೀವನದ ಬಗ್ಗೆ ಅಸಹ್ಯವಾಗಿ ಬರೆಯುತ್ತಿದ್ದರು. ಆ ದಿನಗಳಲ್ಲಿ, ಸಿನಿಮಾ ನಟ ನಟಿಯರ ಬಗ್ಗೆ ಸಾಕಷ್ಟು ನೆಗೆಟಿವ್ ಸ್ಟೋರಿಗಳನ್ನು ಬರೆಯುತ್ತಿದ್ದರು. ನಾನು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಾಗ ಯಾರೊಂದಿಗೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಮಕ್ಕಳು ಅವರು 10 ನೇ ತರಗತಿ ಪಾಸಾಗುವವರೆಗೂ ನಾನು ಅವರ ಬಗ್ಗೆ ಮಾತನಾಡಿರಲ್ಲಿಲ್ಲಾ. ನಂತರದಲ್ಲಿ ಇಬ್ಬರು ಮಕ್ಕಳು ನನ್ನೊಂದಿಗೆ ಕಾಣಿಸಿಕೊಳ್ಳಲು ಆರಂಭಿಸಿದರು. ಆಗ ಎಲ್ಲರೂ ಕೇಳಲು ಪ್ರಾರಂಭಿಸಿದರು, 'ಇವರು ಯಾರು? ಯಾರ ಮಕ್ಕಳು ಅಂತ. ಆಗ ನಾನು ಪೂಜಾ ಮತ್ತು ಛಾಯಾ ಬಗ್ಗೆ ಹೇಳಲು ಆರಂಭಿಸಿದ್ದೆ" ಎಂದಿದ್ದಾರೆ.
ಮಾತು ಮುಂದುವರೆಸಿ ಮಾತನಾಡಿದ ಅವರು ಮಕ್ಕಳನ್ನು ದತ್ತು ಪಡೆದಾಗಲೇ ಮಾತನಾಡಿದ್ದರೇ ಒಂದು ಭಯ ಕಾಡುತ್ತಿತ್ತು. ಈ ಜನ ಮಕ್ಕಳ ದತ್ತು ಬಗ್ಗೆ ಏನು ಮಾತನಾಡುತ್ತಾರೋ? ಮ್ಯಾಗಜೀನ್ ನಲ್ಲಿ ಈ ಬಗ್ಗೆ ಕಥೆಗಳನ್ನು ಸೃಷ್ಠಿಸಿ ಏನು ಬರೆಯುತ್ತಾರೋ?, ಈ ಮಕ್ಕಳ ತಂದೆ ಯಾರು ಅಂತ ಆಗ ಹುಡುಕಲು ಆರಂಭಿಸಿದರೇ ಏನು ಮಾಡೋದು? ಎಂಬೆಲ್ಲ ಪ್ರಶ್ನೆ ಕಾಡಲು ಆರಂಭಿಸಿತ್ತು. ಅಲ್ಲದೇ ಸತ್ಯ ಗೊತ್ತಿಲ್ಲದೇ ಬರೀ ಊಹಾಪೋಹಗಳ ಮೇಲೆ ಸ್ಟೋರಿ ಮಾಡುತ್ತಿದ್ದರು. ಅವರ ಮನಸ್ಸು ತುಂಬಾ ಹೊಲಸು ಆಗಿತ್ತು. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ನಾನು ಮಕ್ಕಳನ್ನು ದತ್ತು ಪಡೆದ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲಾ" ಎಂದಿದ್ದಾರೆ.
ಈ ಹಿಂದೆ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ರವೀನಾ ಟಂಡನ್, ಮಕ್ಕಳು ಮತ್ತು ತನ್ನ ನಡುವಿನ ಆತ್ಮೀಯತೆ ಬಗ್ಗೆ ಹೇಳಿಕೊಂಡಿದ್ದರು. "ಇಬ್ಬರೂ ನನ್ನ ಆತ್ಮೀಯ ಸ್ನೇಹಿತರಂತೆ ಇದ್ದಾರೆ. "ನನ್ನ ಇಬ್ಬರು ಹೆಣ್ಣುಮಕ್ಕಳು ನನ್ನ ಉತ್ತಮ ಸ್ನೇಹಿತರು. ನನಗೆ ನೆನಪಿದೆ, ನಾನು ಮದುವೆಯಾದಾಗ, ಅವರೇ ನನ್ನನ್ನು ಕಾರಿನಲ್ಲಿ ಕೂರಿಸಿ ಮಂಟಪಕ್ಕೆ ಕರೆದುಕೊಂಡು ಹೋಗಿದ್ದರು. ಮತ್ತು ಈಗ, ನಾನು ಅವರನ್ನು ತುಂಬಾ ಖುಷಿಯಿಂದ ನೋಡಿಕೊಂಡಿದ್ದೇನೆ. ಇದು ಒಂದು ತರ ವಿಶೇಷ ಭಾವನೆ" ಎಂದು ಹೇಳಿದ್ದಾರೆ.
ಇನ್ನು ರವೀನಾ ಟಂಡನ್ 22 ಫೆಬ್ರವರಿ 2004 ರಲ್ಲಿ ಅನಿಲ್ ಥಡಾನಿ ಅವರನ್ನು ವಿವಾಹವಾದರು. ವಿವಾಹವಾದ ನಂತರ ಮತ್ತೆ ಇಬ್ಬರು ಮಕ್ಕಳಿಗೆ ರವೀನಾ ಜನ್ಮ ನೀಡಿದ್ದರು. ರಾಶಾ ಮತ್ತು ರಣಬೀರ್ವರ್ಧನ್ ಎಂಬ ಇಬ್ಬರು ಮಕ್ಕಳ ಜೊತೆಗೆ ದತ್ತು ಪಡೆದಿದ್ದಾ ಪೂಜಾ ಮತ್ತು ಛಾಯ ಕೂಡ ಅನ್ಯೋನ್ಯವಾಗಿ ಇದ್ದಾರೆ. ಪೂಜಾ ಮತ್ತು ಛಾಯಾ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಕ್ಕಳನ್ನು ಕೂಡ ಹೊಂದಿದ್ದಾರೆ.

ಹೀಗೆ ತನ್ನ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದ ವಿಚಾರವನ್ನು ಸಾಕಷ್ಟು ವರ್ಷಗಳ ನಂತರ ರವೀನಾ ಮಾತನಾಡಿದ್ದಾರೆ. ಟ್ಯಾಬ್ಲಾಯ್ಡ್‌ಗಳ ಭಯದಿಂದ ಈ ವಿಚಾರವನ್ನು ಸಾಕಷ್ಟು ವರ್ಷ ಮುಚ್ಚಿಟ್ಟಿದ್ದೆ ಎಂದು ಕೂಡ ತಿಳಿಸಿದ್ದಾರೆ. ಅದರಂತೆ ಯಾವುದೇ ಮನಸ್ಥಾಪಗಳು ಇಲ್ಲದೇ ಸುಂದರ ಸಂಸಾರವನ್ನು ರವೀನಾ ನಡೆಸುತ್ತಿದ್ದಾರೆ. ಹಾಗೇ ಬಾಲಿವುಡ್‌ನ ಒಂದಷ್ಟು ಪ್ರಾಜೆಕ್ಟ್‌ಗಳ ಜೊತೆಗೆ ಬಹು ನಿರೀಕ್ಷಿತ ಚಿತ್ರ 'ಕೆಜಿಎಫ್ 2' ನಲ್ಲಿ ಅಭಿನಯಿಸಿದ್ದಾರೆ.