twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರವೀನಾ ಟಂಡನ್: ಪಕ್ಷ ಯಾವುದು?

    |

    ಸಿನಿಮಾ ಹಾಗೂ ರಾಜಕೀಯ ಹಲವು ದಶಕಗಳಿಂದಲೂ ಜೊತೆ- ಜೊತೆಯಾಗಿಯೇ ಸಾಗುತ್ತಿವೆ. ಎರಡೂ ರಂಗಗಳಿಗೆ ಪರಸ್ಪರ ಹೋಲಿಕೆಯೇ ಇಲ್ಲದೇ ಇದ್ದರೂ ಎರಡೂ ಕ್ಷೇತ್ರಗಳ ಸೆಲೆಬ್ರಿಟಿಗಳು ಪರಸ್ಪರ ಬಹು ಆತ್ಮೀಯ, ಒಬ್ಬರ ಮೇಲೆ ಇನ್ನೊಬ್ಬರ ಅವಲಂಬನೆಯೂ ಹೆಚ್ಚು.

    ಹಲವು ಸಿನಿಮಾ ನಟ-ನಟಿಯರು ರಾಜಕೀಯವನ್ನು ತಮ್ಮ 'ರಿಟೈರ್‌ಮೆಂಟ್ ಪ್ಲಾನ್' ಎಂಬಂತೆಯೂ ನೋಡುತ್ತಾರೆ. ಬೇಡಿಕೆ ಇರುವವರೆಗೂ ಸಿನಿಮಾ ರಂಗದಲ್ಲಿದ್ದು ಹಣ, ಖ್ಯಾತಿ ಗಳಿಸಿ ಬೇಡಿಕೆ ಕಡಿಮೆ ಆದ ಕೂಡಲೇ ರಾಜಕೀಯಕ್ಕೆ ಧುಮುಕಿ, ಸಿನಿಮಾ ರಂಗದಲ್ಲಿ ಗಳಿಸಿದ ಖ್ಯಾತಿಯನ್ನೇ ಬಳಸಿ ಚುನಾವಣೆ ಎದುರಿಸುತ್ತಾರೆ.

    ಈಗಾಗಲೇ ಹಲವು ಸಿನಿಮಾ ಮಂದಿ ದೇಶದಾದ್ಯಂತ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಇದೇ ಪಟ್ಟಿಗೆ ಸೇರಲು ಮತ್ತೊಬ್ಬ ಜನಪ್ರಿಯ ಬಹುಭಾಷಾ ನಟಿ ಸಜ್ಜಾಗಿದ್ದಾರೆ. ಅವರೇ ನಟಿ ರವೀನಾ ಟಂಡನ್.

    ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರವೀನಾ ಟಂಡನ್‌ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಆದರೆ ನಾಯಕಿ ಪಾತ್ರದ ಬದಲಿಕೆ ಪ್ರಮುಖ ಪೋಷಕ ಪಾತ್ರಗಳಷ್ಟೆ ಅವರನ್ನು ಅರಸಿ ಬರುತ್ತಿದೆ. ಈಗ ಈ ನಟಿ ರಾಜಕೀಯ ಸೇರುವ ಮಾತನ್ನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಡೆದ ಅಭಿಮಾನಿಗಳೊಟ್ಟಿಗಿನ ಸಂವಾದದಲ್ಲಿ ಮಾತನಾಡಿರುವ ನಟಿ ರವೀನಾ ಟಂಡನ್‌ಗೆ 'ರಾಜಕೀಯದಲ್ಲಿ ಆಸಕ್ತಿ ಇದೆಯೇ, ರಾಜಕೀಯದಲ್ಲಿ ಕರಿಯರ್ ನಿರ್ಮಿಸಿಕೊಳ್ಳುವ ಉದ್ದೇಶವನ್ನೇನಾದರೂ ಇಟ್ಟುಕೊಂಡಿದ್ದೀರ? ಎಂಬ ಪ್ರಶ್ನೆಯನ್ನು ಅಭಿಮಾನಿಯೊಬ್ಬ ಕೇಳಿದ್ದಾನೆ.

    ರಾಜಕೀಯಕ್ಕೆ ರವೀನಾ? ನಟಿ ಹೇಳಿದ್ದೇನು?

    ರಾಜಕೀಯಕ್ಕೆ ರವೀನಾ? ನಟಿ ಹೇಳಿದ್ದೇನು?

    ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ನಟಿ ರವೀನಾ ಟಂಡನ್, ''ಯಾವುದಕ್ಕೂ, ಯಾವತ್ತು ಇಲ್ಲ ಎಂದು ಹೇಳಬೇಡ'' (ನೆವರ್ ಸೇ ನೆವರ್). ಈ ಮೊದಲೇ ನಾನು ರಾಜಕೀಯ ಸೇರುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದೆ. ಆಗ ನನಗೆ ಹಲವು ರಾಜಕೀಯ ಪಕ್ಷಗಳು ಆಫರ್‌ ಅನ್ನು ಸಹ ನೀಡಿದ್ದವು. 'ಪಶ್ಚಿಮ ಬಂಗಾಳ, ಪಂಜಾಬ್, ಮುಂಬೈ ಗಳಲ್ಲಿ ಚುನಾವಣೆ ಟಿಕೆಟ್ ಸಹ ನೀಡಲು ಮುಂದೆ ಬಂದಿದ್ದವು. ಆದರೆ ಆ ಸಮಯದಲ್ಲಿ ನಾನು ಪೂರ್ಣವಾಗಿ ರಾಜಕೀಯಕ್ಕೆ ತಯಾರಾಗಿರಲಿಲ್ಲ. ಹಾಗಾಗಿ ಅವಕಾಶ ನಿರಾಕರಿಸಿದೆ'' ಎಂದಿದ್ದಾರೆ ರವೀನಾ ಟಂಡನ್.

    ಪಕ್ಷಗಳೊಂದಿಗೆ ನನ್ನ ಸಹಮತ ಇಲ್ಲ: ರವೀನಾ

    ಪಕ್ಷಗಳೊಂದಿಗೆ ನನ್ನ ಸಹಮತ ಇಲ್ಲ: ರವೀನಾ

    ''ಈಗಿರುವ ಯಾವ ಪಕ್ಷಗಳೊಂದಿಗೂ ನನ್ನ ಪೂರ್ಣ ಸಹಮತ ಇಲ್ಲ. ಕೆಲವು ಪಕ್ಷಗಳ ಕೆಲವು ಸಿದ್ಧಾಂತಗಳು ಇಷ್ಟವಾಗುತ್ತವೆ. ಕೆಲವು ಇಷ್ಟವಾಗುವುದಿಲ್ಲ. ನಾನು ಯಾವುದೋ ಒಂದು ಪಕ್ಷ ಸೇರಿ ಬಳಿಕ ಅವರ ಸಿದ್ಧಾಂತ ನನಗೆ ಹಿಡಿಸಲಿಲ್ಲವಾದರೆ ನಾನು ಆ ಪಕ್ಷದೊಡನೆ ಮುಂದುವರೆಯುವುದು ಕಷ್ಟವಾಗುತ್ತದೆ. ಅಥವಾ ಪಕ್ಷವೇ ನನ್ನನ್ನು ಮೂಲೆಗುಂಪು ಮಾಡಿಬಿಡಬಹುದು. ಹಾಗಾಗಿ ಪಕ್ಷ ರಾಜಕೀಯ, ಅದರಿಂದ ಎದುರಾಗುವ ಸಮಸ್ಯೆಗಳು, ಹಿನ್ನಡೆಗಳನ್ನೆಲ್ಲ ಸಹಿಸಿಕೊಳ್ಳುವ ಶಕ್ತಿ ನನಗೆ ಬಂದಿದೆ ಎಂದು ನನಗೆ ಅನಿಸಿದ ದಿನ ನಾನು ರಾಜಕೀಯ ಸೇರುತ್ತೇನೆ'' ಎಂದಿದ್ದಾರೆ ರವೀನಾ.

    ಮಾತು ತಪ್ಪಿದವಳು ಎನಿಸಿಕೊಳ್ಳಲು ಇಷ್ಟವಿಲ್ಲ: ರವೀನಾ

    ಮಾತು ತಪ್ಪಿದವಳು ಎನಿಸಿಕೊಳ್ಳಲು ಇಷ್ಟವಿಲ್ಲ: ರವೀನಾ

    ''ಈಗ ನಾನು ರಾಜಕೀಯ ಸೇರುವುದಿಲ್ಲ ಎಂದು ಹೇಳಿ ಬಳಿಕ ಒಂದು ದಿನ ರಾಜಕೀಯ ಸೇರಿ ಮಾತು ತಪ್ಪಿದವಳು ಎನಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ ನನಗೆ ರಾಜಕೀಯ ಸೇರುವ ಆಸೆಯಿದೇ ಎಂದು ನಾನು ಹೇಳುತ್ತೇನೆ'' ಎಂದಿದ್ದಾರೆ ರವೀನಾ. ನಟಿ ರವೀನಾ ಕೋವಿಡ್ ಸಮಯದಲ್ಲಿ ಕೆಲವು ಸಾಮಾಜಿಕ ಕಾರ್ಯಗಳನ್ನು ತಮ್ಮ ಫೌಂಡೇಶನ್ ವತಿಯಿಂದ ಮಾಡಿದ್ದರು. ಮುಂಬೈನಲ್ಲಿ ಜನಿಸಿರುವ ರವೀನಾ, ನಟಿಯಾಗಿ ಹಿಂದಿ, ಕನ್ನಡ, ತೆಲುಗು, ತಮಿಳು, ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

    'ಕೆಜಿಎಫ್ 2' ಸಿನಿಮಾದಲ್ಲಿ ನಟನೆ

    'ಕೆಜಿಎಫ್ 2' ಸಿನಿಮಾದಲ್ಲಿ ನಟನೆ

    ರವೀನಾ ಟಂಡನ್ ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಸಿನಿಮಾದಲ್ಲಿ ರಾಜಕಾರಣಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಗ್ಗೆ ರವೀನಾಗೆ ಬಹಳಷ್ಟು ನಿರೀಕ್ಷೆ ಇದೆ. ''ಕೆಜಿಎಫ್ 2' ಸಿನಿಮಾದಲ್ಲಿ ನಾನು ಹೀರೋ ಹಾಗೂ ವಿಲನ್ ಎರಡೂ' ಎಂದು ರವೀನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 'ಕೆಜಿಎಫ್ 2' ಹೊರತಾಗಿ ರವೀನಾ ಉಪೇಂದ್ರ ನಟನೆಯ 'ಉಪೇಂದ್ರ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಹೊರತಾಗಿ 'ಅರಣ್ಯಕ್' ವೆಬ್ ಸರಣಿಯಲ್ಲಿಯೂ ರವೀನಾ ಟಂಡನ್ ನಟಿಸಿದ್ದಾರೆ.

    English summary
    Actress Raveena Tandon said she will join politics in future. She also said she was offered election ticket from many political parties.
    Tuesday, January 25, 2022, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X