For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಬ್ಲಾಕ್ ಬಸ್ಟರ್ 'ಕ್ರ್ಯಾಕ್' ಸಿನಿಮಾ ಹಿಂದಿಗೆ ರೀಮೇಕ್?

  |

  ತೆಲುಗು ಸ್ಟಾರ್ ನಟ ರವಿತೇಜ ನಟನೆಯ ಕ್ರ್ಯಾಕ್ ಸಿನಿಮಾ ಸೌತ್‌ ಇಂಡಸ್ಟ್ರಿಯಲ್ಲಿ ಹಿಟ್ ಬಾರಿಸಿದೆ. ಬಹಳ ದಿನಗಳ ನಂತರ ರವಿ ತೇಜ ಸಿನಿಮಾ ಈ ಮಟ್ಟದ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡ್ತಿದೆ.

  ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಬಾರಿಸಿದ ಚಿತ್ರ ಈಗ ಹಿಂದಿಗೆ ರೀಮೇಕ್ ಆಗಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಹಿಂದಿಯ ಹಲವು ನಿರ್ಮಾಪಕರು ಕ್ರ್ಯಾಕ್ ಸಿನಿಮಾ ರೀಮೇಕ್ ಮಾಡಲು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

  ರವಿತೇಜ ನಟನೆಯ 'ಕ್ರ್ಯಾಕ್' ಸಿನಿಮಾದ ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತೆ?ರವಿತೇಜ ನಟನೆಯ 'ಕ್ರ್ಯಾಕ್' ಸಿನಿಮಾದ ನಾಲ್ಕು ದಿನದ ಗಳಿಕೆ ಎಷ್ಟು ಗೊತ್ತೆ?

  ಕ್ರ್ಯಾಕ್ ಸಿನಿಮಾ ನಿರ್ದೇಶಕ ಗೋಪಿಚಂದ್ ಮಲಾನೆನಿ ಅವರು ಈ ಕುರಿತು ಪಿಂಕ್‌ವಿಲ್ಲ ವೆಬ್‌ಸೈಟ್‌ಗೆ ಮಾಹಿತಿ ನೀಡಿದ್ದು, ''ಹಿಂದಿಯಲ್ಲಿ ಈ ಚಿತ್ರ ರೀಮೇಕ್ ಮಾಡಲು ಪ್ಲಾನ್ ಮಾಡುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

  ಸೌತ್ ಸಿನಿಮಾಗಳನ್ನು ಹಿಂದಿ ಆಡಿಯೆನ್ಸ್ ಹೆಚ್ಚು ಇಷ್ಟಪಡ್ತಾರೆ. ಕ್ರ್ಯಾಕ್ ಚಿತ್ರದಲ್ಲೂ ಬಾಲಿವುಡ್ ಮಂದಿ ಇಷ್ಟ ಪಡುವಂತಹ ಅಂಶಗಳಿವೆ. ಅಲ್ಲಿಗೆ ಬೇಕಾದ ರೀತಿ ಚಿತ್ರವನ್ನು ರೀಮೇಡ್ ಮಾಡುವ ಯೋಜನೆ ಇದೆ ಎಂದು ಗೋಪಿಚಂದ್ ಹೇಳಿಕೊಂಡಿದ್ದಾರೆ.

  ಒಂದು ಕ್ರ್ಯಾಕ್ ಸಿನಿಮಾ ಹಿಂದಿಯಲ್ಲಿ ರೀಮೇಕ್ ಮಾಡಿದ್ರೆ ಅಜಯ್ ದೇವಗನ್ ಅಥವಾ ರಣ್ವೀರ್ ಸಿಂಗ್ ನನ್ನ ಮೊದಲ ಆಯ್ಕೆ ಆಗಿರುತ್ತಾರೆ ಎಂದು ಗೋಪಿಚಂದ್ ಪಿಂಕ್‌ವಿಲ್ಲಾಗೆ ಮಾಹಿತಿ ನೀಡಿದ್ದಾರೆ. ಈ ಇಬ್ಬರು ಈ ಕಥೆಗೆ ಸೂಕ್ತ ಮತ್ತು ಆ ಎನರ್ಜಿ ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಇನ್ನುಳಿದಂತೆ ರವಿ ತೇಜ, ಶ್ರುತಿ ಹಾಸನ್ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಗೋಪಿಚಂದ್ ಮಲಾನೆನಿ ನಿರ್ದೇಶಿಸಿದ್ದಾರೆ. ಬಿ ಮಧು ನಿರ್ಮಾಣ ಮಾಡಿದ್ದು, ಎಸ್ ತಮನ್ ಸಂಗೀತ ಒಳಗೊಂಡಿದೆ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada
  English summary
  Ravi Teja starrer Telugu blockbuster Krack Movie set to Remake In Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X