'ಬೆಲ್ ಬಾಟಂ' ಚಿತ್ರತಂಡದ ವಿರುದ್ದ ಮುನಿಸು: ಕೇಸ್ ದಾಖಲಿಸಿದ ರವಿ ವರ್ಮ.!

ಜಯತೀರ್ಥ ನಿರ್ದೇಶನದ ರಿಶಬ್ ಶೆಟ್ಟಿ, ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಕನ್ನಡ ಸಿನಿಮಾ 'ಬೆಲ್ ಬಾಟಂ' ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆಯ್ತು. ಈ ಚಿತ್ರದ ತೆಲುಗು, ತಮಿಳು ಮತ್ತು ಹಿಂದಿ ರೀಮೇಕ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೋಲ್ಡ್ ಔಟ್ ಆಗಿತ್ತು.

ಆಗಲೇ ನೋಡಿ.. ಕನ್ನಡದ 'ಬೆಲ್ ಬಾಟಂ' ಚಿತ್ರವನ್ನ ನೋಡಿ, ಇಂಪ್ರೆಸ್ ಆಗಿ ಹಿಂದಿಯಲ್ಲಿ 'ಬೆಲ್ ಬಾಟಂ' ಧರಿಸಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ರೆಡಿ ಆಗಿದ್ದಾರಂತೆ ಎಂಬ ಅಂತೆ-ಕಂತೆ ಶುರುವಾಗಿದ್ದು. ಇದರ ಬೆನ್ನಲ್ಲೇ 'ಬೆಲ್ ಬಾಟಂ' ತೊಟ್ಟ ಅಕ್ಷಯ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗ್ಬಿಡ್ತು. ಅಲ್ಲಿಗೆ, ಕನ್ನಡದ 'ಬೆಲ್ ಬಾಟಂ' ಚಿತ್ರವನ್ನ ಹಿಂದಿಯಲ್ಲಿ ಅಕ್ಷಯ್ ಕುಮಾರ್ ರೀಮೇಕ್ ಮಾಡ್ತಿದ್ದಾರೆ ಅಂತ ಎಲ್ಲರೂ ಭಾವಿಸಿರುವಾಗಲೇ, ''ಇದು ರೀಮೇಕ್ ಅಲ್ಲ'' ಎಂದು ಅಕ್ಷಯ್ ಕುಮಾರ್ ಸ್ಪಷ್ಟ ಪಡಿಸಿದರು.

ಈಗ ಇದೇ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಕನ್ನಡದ 'ಬೆಲ್ ಬಾಟಂ' ಚಿತ್ರವನ್ನು ಕದ್ದು ಹಿಂದಿಯಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂದು ರವಿ ವರ್ಮ ಗರಂ ಆಗಿದ್ದಾರೆ. ರೈಟರ್ ಅಸೋಸಿಯೇಷನ್ ನಲ್ಲಿ ರವಿ ವರ್ಮ ಕೇಸ್ ದಾಖಲಿಸಿದ್ದಾರೆ. ಮುಂದೆ ಓದಿರಿ...

ರವಿ ವರ್ಮಗೂ 'ಬೆಲ್ ಬಾಟಂ'ಗೂ ಏನು ಸಂಬಂಧ.?

ರವಿ ವರ್ಮಗೂ 'ಬೆಲ್ ಬಾಟಂ'ಗೂ ಏನು ಸಂಬಂಧ.?

'ಬೆಲ್ ಬಾಟಂ' ಚಿತ್ರದ ಹಿಂದಿ ರೀಮೇಕ್ ಹಕ್ಕುಗಳನ್ನು ಖರೀದಿ ಮಾಡಿದ್ದವರು ಇದೇ ರವಿ ವರ್ಮ. ಬಾಲಿವುಡ್ ನಲ್ಲಿ 'ಬೆಲ್ ಬಾಟಂ' ಚಿತ್ರವನ್ನ ತಯಾರು ಮಾಡಲು ರವಿ ವರ್ಮ ಸಿದ್ಧತೆ ನಡೆಸುತ್ತಿದ್ದರು. ಪರಿಣಾಮ, ಮುಂಬೈನಲ್ಲಿ ನಿಖಿಲ್ ಅಡ್ವಾಣಿ ಸೇರಿದಂತೆ ಹಲವರಿಗೆ 'ಬೆಲ್ ಬಾಟಂ' ಚಿತ್ರವನ್ನ ಪೆನ್ ಡ್ರೈವ್ ಮೂಲಕ ರವಿ ವರ್ಮ ಕೊಟ್ಟಿದ್ದರು. ಇದೀಗ ನಿಖಿಲ್ ಅಡ್ವಾಣಿ ಮತ್ತು ಅಕ್ಷಯ್ ಕುಮಾರ್ ಸೇರಿಕೊಂಡು 'ಬೆಲ್ ಬಾಟಂ' ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಇದರಿಂದ ಅನುಮಾನಗೊಂಡಿರುವ ರವಿ ವರ್ಮ ಕೇಸ್ ದಾಖಲಿಸಿ, ಅಕ್ಷಯ್ ಕುಮಾರ್ ಮತ್ತು ನಿಖಿಲ್ ಅಡ್ವಾಣಿಗೆ ನೋಟೀಸ್ ಕಳುಹಿಸಿದ್ದಾರೆ.

ರವಿ ವರ್ಮ ಏನಂತಾರೆ.?

ರವಿ ವರ್ಮ ಏನಂತಾರೆ.?

''ಸಿನಿಮಾದ ಟೈಟಲ್, ಅಕ್ಷಯ್ ಕುಮಾರ್ ಲುಕ್ ನಮ್ಮ ಕನ್ನಡದ ಬೆಲ್ ಬಾಟಂ ಚಿತ್ರವನ್ನೇ ಹೋಲುತ್ತಿದೆ. ಹೀಗಾಗಿ ನನಗೆ ಅನುಮಾನ ಬಂದಿದೆ. ಚಿತ್ರತಂಡಕ್ಕೆ ಪಬ್ಲಿಕ್ ನೋಟೀಸ್ ನೀಡಿದ್ದೇನೆ. ರೈಟರ್ ಅಸೋಸಿಯೇಷನ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಈ ರೀತಿ ಕತೆ ಕದ್ದು ನಮಗೆ ಮೋಸ ಮಾಡಬಾರದು. ನನ್ನ ಗುಮಾನಿ ನಿಜ ಆದಲ್ಲಿ ಕಾನೂನು ಹೋರಾಟ ಮಾಡುವೆ'' ಎಂದಿದ್ದಾರೆ ರವಿ ವರ್ಮ.

ಮಾತುಕತೆಗೆ ಕರೆದಿದ್ದಾರೆ ಅಕ್ಷಯ್ ಕುಮಾರ್

ಮಾತುಕತೆಗೆ ಕರೆದಿದ್ದಾರೆ ಅಕ್ಷಯ್ ಕುಮಾರ್

ನೋಟೀಸ್ ತಲುಪಿದ ಮೇಲೆ ಎಚ್ಚೆತ್ತುಕೊಂಡಿರುವ ಅಕ್ಷಯ್ ಕುಮಾರ್, ರವಿ ವರ್ಮ ರನ್ನ ಮಾತುಕತೆಗೆ ಆಹ್ವಾನಿಸಿದ್ದಾರಂತೆ. ಅಕ್ಷಯ್ ಕುಮಾರ್ ಜೊತೆಗೆ ರಾಜಿ ಸಂಧಾನ ಆಗುತ್ತಾ ಅಂತ ಕೇಳಿದರೆ ''ಅವರು ಏನು ಹೇಳುತ್ತಾರೋ, ನೋಡೋಣ'' ಎನ್ನುತ್ತಾರೆ ರವಿ ವರ್ಮ.

ಅನ್ಯಾಯ ಆಗಬಾರದು.!

ಅನ್ಯಾಯ ಆಗಬಾರದು.!

ಇನ್ನೂ ಕೆಲವೇ ದಿನಗಳಲ್ಲಿ ಮುಂಬೈನಲ್ಲಿ ರವಿ ವರ್ಮ ಪತ್ರಿಕಾಗೋಷ್ಠಿ ಮಾಡುತ್ತಾರಂತೆ. ''ಕನ್ನಡ ಸಿನಿಮಾಗೆ ಅನ್ಯಾಯ ಆಗಬಾರದು'' ಎನ್ನುವ ರವಿ ವರ್ಮ 'ಬೆಲ್ ಬಾಟಂ' ಚಿತ್ರವನ್ನ ಹಿಂದಿಯಲ್ಲಿ ರೀಮೇಕ್ ಮಾಡಲು ಪ್ರತಿಷ್ಟಿತ ಕಂಪನಿ ಜೊತೆಗೆ ಮಾತುಕತೆ ನಡೆಸಿದ್ದಾರಂತೆ. ಎಲ್ಲವೂ ರವಿ ವರ್ಮ ಪ್ಲಾನ್ ಪ್ರಕಾರ ನಡೆದರೆ, ಆ ಪ್ರತಿಷ್ಟಿತ ಕಂಪನಿಗೆ 'ಬೆಲ್ ಬಾಟಂ' ಚಿತ್ರದ ಕಥೆ ಮಾರಾಟ ಆಗಲಿದೆ.

More from Filmibeat

English summary
Ravi Varma files case against Bell Bottom hindi remake team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X