ಕೆಜಿಎಫ್ ನೋಡಿ 'ರಾಕಿ ಭಾಯ್'ಗೆ ಫಿದಾ ಆದ ಬಾಲಿವುಡ್ ನಟಿ.!
Recommended Video

KGF Kannada Movie : ತಮಿಳುನಾಡಿನಲ್ಲಿ ಹೆಚ್ಚಿದ ಕೆಜಿಎಫ್ ಕ್ರೇಜ್ | ಬಾಲಿವುಡ್ ನಟಿ ಯಶ್ ಗೆ ಫಿದಾ
ಕೆಜಿಎಫ್ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಪರಭಾಷಿಗರು ಫಿದಾ ಆಗಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿ ಪ್ರೇಕ್ಷಕರು 'ರಾಕಿ ಭಾಯ್'ಗೆ ಸಲಾಂ ಅಂತಿದ್ದಾರೆ.
ಇದೀಗ ಯಶ್ ಕೆಜಿಎಫ್ ಚಿತ್ರವನ್ನ ನೋಡಿ ಬಾಲಿವುಡ್ ನಟಿ ರವೀನಾ ಟಂಡನ್ ಸಂತಸ ವ್ಯಕ್ತಪಡಿಸಿದ್ದಾರೆ. ''ಕೆಜಿಎಫ್ ನೋಡಲೇಬೇಕಾದ ಸಿನಿಮಾ. ದೇಶದಾದ್ಯಂತ ಸಿನಿಮಾ ಮಿಂಚುತ್ತಿದೆ. ನಿಜಕ್ಕೂ ಅದ್ಭುತ ನಟನೆ. ಯಶ್ ನೀವಂತೂ ಬ್ರಿಲಿಯೆಂಟ್'' ಎಂದು ಟ್ವೀಟ್ ಮಾಡಿದ್ದಾರೆ.

ಬಾಲಿವುಡ್ ನಟಿಯ ಈ ಟ್ವೀಟ್ ಗೆ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದು, ರವಿನಾಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಜೊತೆಗೆ ಕೆಜಿಎಫ್ ಚಿತ್ರಕ್ಕೆ ಬೆಂಬಲವಾಗಿ ನಿಂತು ಸಹಾಯ ಮಾಡಿದ ಅನಿಲ್ ತದಾನಿಗೂ ಯಶ್ ಥ್ಯಾಂಕ್ಸ್ ಹೇಳಿದ್ದಾರೆ.
ಅಂದ್ಹಾಗೆ, ರವಿನಾ ಟಂಡನ್ ಅವರು, ಈ ಹಿಂದೆ ಉಪೇಂದ್ರ ಸಿನಿಮಾದಲ್ಲಿ ಉಪ್ಪಿ ಜೊತೆ ನಟಿಸಿದ್ದರು. ಇನ್ನು ರವಿನಾ ಅವರ ಪತಿ ಅನಿಲ್ ತದಾನಿ ಹಾಗೂ ಫರಾನ್ ಅಖ್ತರ್ ಜೋಡಿಯಲ್ಲಿ ಕೆಜಿಎಫ್ ಚಿತ್ರವನ್ನ ಹಿಂದಿಯಲ್ಲಿ ವಿತರಣೆ ಮಾಡಿದ್ದಾರೆ.
English summary
Bollywood actress Ravina tondon praised KGF movie and rocking star yash.


Click it and Unblock the Notifications