ಎಬಿ ಡಿವಿಲಿಯರ್ಸ್ ಪತ್ನಿ ಹಂಚಿಕೊಂಡ ಫೋಟೋದಲ್ಲಿರುವ ಮಗು ವಮಿಕಾನ?
ಆರ್‌ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಪತ್ನಿ ಡೇನಿಯಲ್ ಡಿವಿಲಿಯರ್ಸ್ ತನ್ನ ಇನ್ಸ್ಟಾಗ್ರಾಮ್ ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದರು. ಮಗಳ ಜೊತೆ ಮತ್ತೊಂದು ಮಗು ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಡೇನಿಯಲ್ ಡಿವಿಲಿಯರ್ಸ್ ಪತ್ನಿ ಹಂಚಿಕೊಂಡಿರುವ ಫೋಟೋದಲ್ಲಿರುವ ಮಗು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಯ ಮಗಳು ವಮಿಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಡಿವಿಲಿಯರ್ಸ್ ಪತ್ನಿ ಇನ್ಸ್ಟಾಗ್ರಾಂನಲ್ಲಿ ಇಬ್ಬರು ಮಕ್ಕಳು ಹಾಸಿಗೆ ಮೇಲೆ ಮಲಗಿರುವ ಫೋಟೋ ಹಾಕಿ, ''ಬೇಬಿ ತನ್ನ ಮೊದಲ ಫ್ರೆಂಡ್‌ನ ಅಪ್ಪಿಕೊಂಡಿದೆ, ಮುದ್ದಾಡಿದೆ'' ಎಂದು ಬರೆದುಕೊಂಡಿದ್ದಾರೆ.

ಡಿವಿಲಿಯರ್ಸ್ ಮಗುವಿನ ಜೊತೆಗಿರುವ ಮತ್ತೊಂದು ಮಗು ವಿರಾಟ್ ಮಗಳು ಎನ್ನುವುದು ಖಾತ್ರಿಯಿಲ್ಲ. ಈ ಪೋಸ್ಟ್‌ಗೆ ಅನುಷ್ಕಾ ಶರ್ಮಾ ಪ್ರೀತಿಯ ಎಮೋಜಿ ಹಾಕಿದ್ದರಿಂದ ಇದು ಖಂಡಿತಾ ವಮಿಕಾ ಫೋಟೋ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.
ಪ್ರಸ್ತುತ, ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಹಾಗೂ ವಮಿಕಾ ಸಹ ಹೋಗಿದ್ದಾರೆ. ಮೇ ತಿಂಗಳಿನಿಂದ ವಿರಾಟ್ ಕುಟುಂಬ ಯುಕೆಯಲ್ಲಿದ್ದಾರೆ.
2017ರ ಡಿಸೆಂಬರ್ ತಿಂಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆಯಾಗಿದ್ದರು. 2021ರ ಜನವರಿ 11 ರಂದು ಹೆಣ್ಣು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದರು.


Click it and Unblock the Notifications










