For Quick Alerts
  ALLOW NOTIFICATIONS  
  For Daily Alerts

  ಎಬಿ ಡಿವಿಲಿಯರ್ಸ್ ಪತ್ನಿ ಹಂಚಿಕೊಂಡ ಫೋಟೋದಲ್ಲಿರುವ ಮಗು ವಮಿಕಾನ?

  |

  ಆರ್‌ಸಿಬಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರ ಪತ್ನಿ ಡೇನಿಯಲ್ ಡಿವಿಲಿಯರ್ಸ್ ತನ್ನ ಇನ್ಸ್ಟಾಗ್ರಾಮ್ ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದರು. ಮಗಳ ಜೊತೆ ಮತ್ತೊಂದು ಮಗು ಇರುವುದು ಕುತೂಹಲಕ್ಕೆ ಕಾರಣವಾಗಿದೆ.

  ಡೇನಿಯಲ್ ಡಿವಿಲಿಯರ್ಸ್ ಪತ್ನಿ ಹಂಚಿಕೊಂಡಿರುವ ಫೋಟೋದಲ್ಲಿರುವ ಮಗು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಯ ಮಗಳು ವಮಿಕಾ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

  ಕ್ರಿಕೆಟ್ ಆಡಲಿದ್ದಾರೆ ನಟಿ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ಪ್ರೇರಣೆ?ಕ್ರಿಕೆಟ್ ಆಡಲಿದ್ದಾರೆ ನಟಿ ಅನುಷ್ಕಾ ಶರ್ಮಾ: ವಿರಾಟ್ ಕೊಹ್ಲಿ ಪ್ರೇರಣೆ?

  ಡಿವಿಲಿಯರ್ಸ್ ಪತ್ನಿ ಇನ್ಸ್ಟಾಗ್ರಾಂನಲ್ಲಿ ಇಬ್ಬರು ಮಕ್ಕಳು ಹಾಸಿಗೆ ಮೇಲೆ ಮಲಗಿರುವ ಫೋಟೋ ಹಾಕಿ, ''ಬೇಬಿ ತನ್ನ ಮೊದಲ ಫ್ರೆಂಡ್‌ನ ಅಪ್ಪಿಕೊಂಡಿದೆ, ಮುದ್ದಾಡಿದೆ'' ಎಂದು ಬರೆದುಕೊಂಡಿದ್ದಾರೆ.

  ಡಿವಿಲಿಯರ್ಸ್ ಮಗುವಿನ ಜೊತೆಗಿರುವ ಮತ್ತೊಂದು ಮಗು ವಿರಾಟ್ ಮಗಳು ಎನ್ನುವುದು ಖಾತ್ರಿಯಿಲ್ಲ. ಈ ಪೋಸ್ಟ್‌ಗೆ ಅನುಷ್ಕಾ ಶರ್ಮಾ ಪ್ರೀತಿಯ ಎಮೋಜಿ ಹಾಕಿದ್ದರಿಂದ ಇದು ಖಂಡಿತಾ ವಮಿಕಾ ಫೋಟೋ ಎಂದು ನೆಟ್ಟಿಗರು ಅಭಿಪ್ರಾಯ ಪಡುತ್ತಿದ್ದಾರೆ.

  ಪ್ರಸ್ತುತ, ಇಂಗ್ಲೆಂಡ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಹಾಗೂ ವಮಿಕಾ ಸಹ ಹೋಗಿದ್ದಾರೆ. ಮೇ ತಿಂಗಳಿನಿಂದ ವಿರಾಟ್ ಕುಟುಂಬ ಯುಕೆಯಲ್ಲಿದ್ದಾರೆ.

  Recommended Video

  ದರ್ಶನ್ ವಿರುದ್ದ ತಿರುಗಿ ಬಿದ್ದ ಇಂದ್ರಜಿತ್ ಲಂಕೇಶ್ | Filmibeat Kannada

  2017ರ ಡಿಸೆಂಬರ್ ತಿಂಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆಯಾಗಿದ್ದರು. 2021ರ ಜನವರಿ 11 ರಂದು ಹೆಣ್ಣು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದರು.

  English summary
  Rcb Cricketer ab de villiers Wife Danielle de Villiers shared Vamika's Photo with her daughter?.
  Thursday, July 15, 2021, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X