»   » ಮುದ್ದು ಬೆಡಗಿಗೆ ಬಿಕಿನಿ ಧರಿಸಲು ಸೈಕ್ಲಿಂಗ್ ಸಹಾಯ ಆಯ್ತಂತೆ!

ಮುದ್ದು ಬೆಡಗಿಗೆ ಬಿಕಿನಿ ಧರಿಸಲು ಸೈಕ್ಲಿಂಗ್ ಸಹಾಯ ಆಯ್ತಂತೆ!

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಮುದ್ದು ಮುಖದ ಚೆಲುವೆ ಅಲಿಯಾ ಭಟ್ ಅವರು ಶಾಂದಾರ್' ಸಿನಿಮಾದಲ್ಲಿ ಪಿಂಕ್ ಬಿಕಿನಿ ಧರಿಸಿರುವ ಸೀನ್ ಎಲ್ಲೆಡೆ ವೈರಲ್ ಆಗಿ ಅಲಿಯಾ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದು, ನಿಮಗೆ ಗೊತ್ತೇ ಇದೆ.

ಬಿಟೌನ್ ನ ಈ ಮುದ್ದು ಹುಡುಗಿಗೆ ಬಿಕಿನಿ ಶೇಪ್ ಮೈಕಟ್ಟು ಗಳಿಸಲು ಸೈಕ್ಲಿಂಗ್ ತುಂಬಾ ಸಹಾಯ ಮಾಡಿತ್ತಂತೆ. ಜೊತೆಗೆ ಅಲಿಯಾ ಅವರು ತಮ್ಮ ಬಿಕಿನಿ ಮೈಕಟ್ಟಿನ ಸಿಕ್ರೇಟ್ ಬಿಚ್ಚಿಟ್ಟಿದ್ದಾರೆ.

'ಶೂಟಿಂಗ್ ಮಾಡುತ್ತಿದ್ದ ಪ್ರದೇಶ ಎಷ್ಟು ರಮಣೀಯವಾಗಿತ್ತೆಂದರೆ ಅಲ್ಲಿ ನಾನು ತುಂಬಾ ಸೈಕಲ್ ಹೊಡೆಯುತ್ತಿದೆ, ಇದರಿಂದ ನನ್ನ ಬಿಕಿನಿ ಸೀನ್ ನ ಶೂಟಿಂಗ್ ಗೆ ಬಹಳಷ್ಟು ಸಹಾಯವಾಯಿತು ಎಂದು 'ಶಾಂದಾರ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅಲಿಯಾ ಭಟ್ ತಿಳಿಸಿದ್ದಾರೆ.

ಸ್ಟೂಡೆಂಟ್ಸ್ ಆಫ್ ದ ಇಯರ್ ಚಿತ್ರದ ಮೂಲಕ ಬಿಟೌನ್ ಗೆ ಕಾಲಿಟ್ಟ ಗ್ಲಾಮರ್ ಬೊಂಬೆ ಅಲಿಯಾ ಭಟ್ ಅವರು ಸಿದ್ದಾರ್ಥ್ ಮಲ್ಲೋತ್ರಾ ಹಾಗು ವರುಣ್ ಧವನ್ ಅವರೊಂದಿಗೆ ರೊಮ್ಯಾನ್ಸ್ ಮಾಡಿದ್ದರು. ಮಾತ್ರವಲ್ಲದೇ ತಮ್ಮ ಮೊದಲ ಚಿತ್ರದಲ್ಲಿಯೇ ಹಳದಿ ಬಣ್ಣದ ಬಿಕಿನಿ ಹಾಕುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಮುಂದೆ ಓದಿ...

ಬಿಕಿನಿ ಬೇಬ್ ಅಲಿಯಾ ಭಟ್

ಬಾಲಿವುಡ್ ನಟ ಶಾಹೀದ್ ಜೊತೆ ಶಾಂದಾರ್ ಚಿತ್ರದಲ್ಲಿ ಅಲಿಯಾ ಭಟ್ ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಕಿನಿ ಬಾಡಿ ಶೇಪ್ ಬರಲು ಬಾಲಿವುಡ್ ನಟಿ ಅಲಿಯಾ ಅವರು ಸಖತ್ ಹಾರ್ಡ್ ವರ್ಕ್ ಮಾಡಿದ್ದಾರಂತೆ.

ಶಾಹೀದ್ ಕಪೂರ್ - ಅಲಿಯಾ ಭಟ್

ತಮ್ಮ ನೆಚ್ಚಿನ ನಟ ಶಾಹೀದ್ ಕಪೂರ್ ಅವರೊಂದಿಗೆ 'ಶಾಂದಾರ್' ಚಿತ್ರದಲ್ಲಿ ಮಿಂಚಿರುವ ಅಲಿಯಾ ಭಟ್ ಗೆ ಮುಂಬೈನ ಆ ರುದ್ರರಮಣೀಯ ಪ್ರದೇಶದ ಶುದ್ದ ಪರಿಸರ ಸಖತ್ ಇಷ್ಟವಾಗಿತ್ತಂತೆ ಸೋ ಶೂಟಿಂಗ್ ಫ್ರೀ ಇದ್ದ ಸಂದರ್ಭದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದದ್ದು ಅವರ ಬಿಕಿನಿ ಬಾಡಿಯ ಸೀಕ್ರೇಟ್ ಅಂತೆ.

ಬಿಕಿನಿ ಮೈಕಟ್ಟು

ಶೂಟಿಂಗ್ ಸೆಟ್ ನಲ್ಲಿ ಬಿಡುವಿನ ಸಮಯದಲ್ಲಿ ಅಲಿಯಾ ಭಟ್ ಅವರು ಸೈಕ್ಲಿಂಗ್ ಮಾಡಿದ್ದು, ಅವರ ಬಿಕಿನಿ ಮೈಕಟ್ಟಿಗೆ ಬಹಳಷ್ಟು ಸಹಾಯ ಆಯಿತು. ಜೊತೆಗೆ ದೇಹ ಪ್ರಾಪರ್ ಶೇಪ್ ಗೆ ಬಂದಿದೆ ಎಂದಿದ್ದಾರೆ.

ಪ್ರಕೃತಿಗೆ ತುಂಬಾ ಹತ್ತಿರ

ರಮಣೀಯ ಪ್ರದೇಶದ ಶುದ್ದ ಗಾಳಿಯಲ್ಲಿ ಹೆಚ್ಚೆಚ್ಚು ಜಾಗಿಂಗ್, ವ್ಯಾಯಾಮ ಮಾಡಿದ್ದು, ನನ್ನ ಬಿಕಿನಿ ಬಾಡಿ ಶೇಪ್ ಬರಲು ಪ್ರಮುಖ ಕಾರಣ. ಜೊತೆಗೆ ಅಲ್ಲಿನ ಪರಿಸರದ ಜನರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ರಿಟಿಶ್ ಜನರು ಬಹಳ ಸ್ನೇಹ ಜೀವಿಗಳು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಐಲಾ ಅಲಿಯಾ

ಪ್ರಕೃತಿಯ ತಂಪಾದ ವಾತಾವರಣದಲ್ಲಿ ರಮಣೀಯ ಪ್ರದೇಶಗಳ ಶುದ್ದ ಗಾಳಿ ನನ್ನನ್ನು ಹೆಚ್ಚು ಹೆಚ್ಚು ವಾಕಿಂಗ್, ಜಾಗಿಂಗ್ ಜೊತೆಗೆ ವ್ಯಾಯಾಮ ಮಾಡಲು ಹೆಚ್ಚು ಹೆಚ್ಚು ಪ್ರೆರೇಪಿಸಿತು. ಇದು ನನಗೆ ಬಿಕಿನಿ ಚಿತ್ರೀಕರಣದಲ್ಲಿ ಸ್ವಾಭಾವಿಕವಾಗಿ ನಟಿಸಲು ಸಹಾಯ ಮಾಡಿತು. ಮುಂಬೈನಲ್ಲಿ ಇಷ್ಟು ತೆರೆದ ಪ್ರದೇಶ ಸಿಗುವುದು ಕಷ್ಟ. ಇದು ಅದ್ಭುತ ಅನುಭವ ಎಂದಿದ್ದಾರೆ.

ಸೆಕೆಂಡ್ ಟೈಮ್

'ಸ್ಟೂಡೆಂಟ್ ಆಫ್ ದ ಇಯರ್' ಚಿತ್ರದ ನಂತರ ಅಲಿಯಾ ಭಟ್ ಅವರು ಇದಿಗ 'ಶಾಂದಾರ್' ಚಿತ್ರದಲ್ಲಿ ಮತ್ತೊಮ್ಮೆ ಬಿಕಿನಿ ಬೇಬ್ ಆಗಿದ್ದು, ಪಡ್ಡೆ ಹುಡುಗರ ಮೈ ಬೆಚ್ಚಗಾಗಿಸಲಿದ್ದಾರೆ.

ಗ್ರ್ಯಾಂಡ್ ರಿಲೀಸ್

ಶಾಹೀದ್ ಕಪೂರ್ ಹಾಗೂ ಅಲಿಯಾ ಭಟ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ 'ಶಾಂದಾರ್' ಸಿನಿಮಾ ಅಕ್ಟೋಬರ್ 22 ರಂದು ಎಲ್ಲೆಡೆ ಭರ್ಜರಿಯಾಗಿ ತೆರೆ ಕಾಣುತ್ತಿದೆ.

ಸಿದ್ದಾರ್ಥ್ - ಅಲಿಯಾ ಭಟ್ - ವರುಣ್ ಧವನ್

ಸ್ಟೂಡೆಂಟ್ಸ್ ಆಫ್ ದ ಇಯರ್ ಚಿತ್ರದ ಸ್ಟಾರ್ಸ್ ಸಿದ್ದಾರ್ಥ್ ಮಲ್ಲೋತ್ರಾ ಹಾಗೂ ವರುಣ್ ಧವನ್ ಅವರು ಅಲಿಯಾ ಭಟ್ ಕೆನ್ನೆಗೆ ಮುತ್ತಿಕ್ಕುತ್ತಿರುವುದು.

ಫುಟ್ಬಾಲ್ ಒಪನ್ನಿಂಗ್ ಸಮಾರಂಭದಲ್ಲಿ

ಫುಟ್ಬಾಲ್ ಒಪನ್ನಿಂಗ್ ಸಮಾರಂಭದಲ್ಲಿ ಸಿನಿಮಾ ತಾರೆಯರಾದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನೀತಾ ಅಂಬಾನಿ, ಐಶ್ವರ್ಯ ರೈ ಬಚ್ಚನ್, ಹಾಗು ಮುದ್ದು ಬೆಡಗಿ ಅಲಿಯಾ ಭಟ್

English summary
Alia Bhatt, has donned a bikini for her upcoming flick Shaandaar and worked very hard to get in shape, the actress says she did a lot of cycling during the movies shoot and that has helped her to get into a proper shape.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada