ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆಯಿಂದ ದೂರ ಆಗಿದ್ದೇಕೆ ಸುಶಾಂತ್: ಇಬ್ಬರ ಬ್ರೇಕ್ ಅಪ್ ಬಗ್ಗೆ ಇಲ್ಲಿದೆ ಮಾಹಿತಿ

ಸುಶಾಂತ್ ಸಿಂಗ್ ರಜಪೂತ್ ಸದ್ಯ ನೆನಪು ಮಾತ್ರ. ಆದರೆ ಸಿನಿಮಾಗಳ ಮೂಲಕ ಸುಶಾಂತ್ ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುತ್ತಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆಯ ಪ್ರಕರಣದ ತನಿಖೆ ಜೋರಾಗಿ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಮತ್ತು ಹಾಲಿ ಪ್ರೇಯಸಿ ರಿಯಾ ಚಕ್ರವರ್ತಿ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

ಸುಶಾಂತ್ ಸಿಂಗ್ ಮತ್ತು ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಇಬ್ಬರದು 6 ವರ್ಷದ ಪ್ರೀತಿ. ಇವರಿಬ್ಬರು ಒಂದು ಕಾಲದಲ್ಲಿ ಕಿರುತೆರೆಯಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ ಜೋಡಿ. ಕಿರುತೆರೆಯ ಜನಪ್ರಿಯ ಜೋಡಿ ಎಂದೇ ಖ್ಯಾತಿಗಳಿಸಿದ್ದರು. ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲಿ ಇಬ್ಬರ ಕೆಮಿಸ್ಟ್ರಿಗೆ ಎಲ್ಲರೂ ಫಿದಾ ಆಗಿದ್ದರು. ಸದಾ ಜೊತೆಯಲ್ಲಿಯೆ ಇರುತ್ತಿದ್ದ ಈ ಜೋಡಿ ನೋಡಿ ಎಲ್ಲರೂ ಇಬ್ಬರು ಪಕ್ಕಾ ಮದುವೆ ಆಗುತ್ತಾರೆ ಅಂತಾನೆ ಅಂದುಕೊಂಡಿದ್ದರು. ಆದರೆ ಕೊನೆಗೆ ಆಗಿದ್ದೆ ಬೇರೆ. ಮುಂದೆ ಓದಿ..

2009ರಲ್ಲಿ ಇಬ್ಬರ ಪರಿಚಯ

2009ರಲ್ಲಿ ಇಬ್ಬರ ಪರಿಚಯ

2016ರಲ್ಲಿಯೆ ಇಬ್ಬರು ಹಸೆಮಣೆ ಏರುತ್ತಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಆದರೆ ಅದೆ ವರ್ಷ ಇಬ್ಬರು ಬ್ರೇಕ್ ಅಪ್ ಮಾಡಿಕೊಳ್ಳುವ ಮೂಲಕ ದೊಡ್ಡ ಶಾಕ್ ನೀಡಿದರು. 2009ರಲ್ಲಿ ಇಬ್ಬರು ಪವಿತ್ರಾ ರಿಷ್ಟಾ ಧಾರಾವಾಹಿ ಸೆಟ್ ನಲ್ಲಿ ಪರಿಚಯವಾಗಿದ್ದಾರೆ. ನಂತರ ಇಬ್ಬರು ಉತ್ತಮ ಸ್ನೇಹಿತರಾದರು, ಬಳಿಕ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭಿಸುತ್ತಾರೆ. ಸುಶಾಂತ್ ಟಿವಿ ಕಾರ್ಯಕ್ರಮದಲ್ಲಿಯೇ ಅಂಕಿತಾಗೆ ಪ್ರಪೋಸ್ ಮಾಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ.

ಇಬ್ಬರದು 6 ವರ್ಷದ ಪ್ರೀತಿ

ಇಬ್ಬರದು 6 ವರ್ಷದ ಪ್ರೀತಿ

ಇವರಿಬ್ಬರದು 6 ವರ್ಷದ ಪ್ರೀತಿ. ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಇಬ್ಬರು ಒಟ್ಟಿಗೆ ಹಾಜರಾಗುತ್ತಿದ್ದರು. ಇಬ್ಬರು ಕೊನೆಯದಾಗಿ 2016ರಲ್ಲಿ ನಡೆದ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆನಂತರ ಮತ್ತೆ ಒಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅವಾರ್ಡ್ ಕಾರ್ಯಕ್ರಮದಲ್ಲಿ ಇಬ್ಬರು ರೊಮ್ಯಾಂಟಿಕ್ ಆಗಿ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬ್ರೇಕ್ ಅಪ್ ಗೆ ಕಾರಣವೇನು?

ಬ್ರೇಕ್ ಅಪ್ ಗೆ ಕಾರಣವೇನು?

6 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ 2016ರಲ್ಲಿ ಬೇರೆ ಬೇರೆ ಆಗಲು ನಿರ್ಧರಿಸುತ್ತಾರೆ. ಇಬ್ಬರ ಬ್ರೇಕ್ ಅಪ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಲು ಪ್ರಾರಂಭವಾಯಿತು. ಸುಶಾಂತ್ ಕಿರುತೆರೆಯಿಂದ ಹಿರಿತೆರೆಗೆ ಬಂದಮೇಲೆ ತುಂಬಾ ಬ್ಯುಸಿಯಾಗುತ್ತಾರೆ. ಸದಾ ಒತ್ತಡದಲ್ಲಿ ಇರುತ್ತಿದ್ದ ಸುಶಾಂತ್, ಅಂಕಿತಾಗೆ ಸಮಯ ಕೊಡಲು ಸಾಧ್ಯವಾಗುತ್ತಿರಲಿಲ್ಲವಂತೆ. ಇಬ್ಬರು ಒಟ್ಟಿಗೆ ಸಮಯ ಕಳೆಯಲು ಆಗುತ್ತಿರಲಿಲ್ಲವಂತೆ. ಇದರಿಂದ ಇಬ್ಬರು ಸಂತೋಷವಾಗಿರಲು ಸಾಧ್ಯವಿಲ್ಲವೆಂದು ದೂರ ದೂರ ಆಗಲು ಬಯಸಿದರು ಎಂದು ಆಪ್ತರು ಹೇಳುತ್ತಾರೆ. ಅಂಕಿತಾಗೆ ಅಸರಕ್ಷತೆಯ ಭಾವನೆ ಕಾಡುತ್ತಿತ್ತಂತೆ. ಅಲ್ಲದೆ ಈ ಸಂಬಂಧ ಮುಂದುವರೆಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರಂತೆ. ಹಾಗಾಗಿಯೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಸಂಬಂಧವನ್ನು ಕಡಿದುಕೊಂಡರು ಎಂದು ಹೇಳಲಾಗುತ್ತೆ.

ಕೃತಿ ಸನೂನ್ ಕಾರಣ?

ಕೃತಿ ಸನೂನ್ ಕಾರಣ?

ಅಂಕಿತಾ ಮತ್ತು ಸುಶಾಂತ್ ಬ್ರೇಕ್ ಅಪ್ ಗೆ ನಟಿ ಕೃತಿ ಸನೂನ್ ಕಾರಣ ಎಂದು ಸಹ ಹೇಳಲಾಗುತ್ತಿದೆ. ಸುಶಾಂತ್ ಮತ್ತು ಕೃತಿ ಇಬ್ಬರು ರಾಬ್ತ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸಮಯದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು. ಇದು ಅಂಕಿತಾಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಕೃತಿ ಮತ್ತು ಸುಶಾಂತ್ ಇಬ್ಬರು ಎಲ್ಲಿಯೂ ಪ್ರೀತಿಯನ್ನು ಒಪ್ಪಿಕೊಂಡಿಲ್ಲ.

'ಯಾವಾಗಲು ನಿನ್ನ ಹೃದಯದಲ್ಲಿ ಇರುತ್ತೇನೆ' ಎಂದಿದ್ದ ಅಂಕಿತಾ

'ಯಾವಾಗಲು ನಿನ್ನ ಹೃದಯದಲ್ಲಿ ಇರುತ್ತೇನೆ' ಎಂದಿದ್ದ ಅಂಕಿತಾ

ಇಬ್ಬರ ಬ್ರೇಕ್ ಸುದ್ದಿ ಹರಿದಾಡುತ್ತಿದ್ದಂತೆ ಅಂಕಿತಾ ಲೋಖಂಡೆ ಕೆಂಡಕಾರಿದ್ದರು. ಇಬ್ಬರು ಚೆನ್ನಾಗಿದ್ದೀವಿ. ನಮ್ಮ ನಡುವೆ ಬ್ರೇಕ್ ಅಪ್ ಆಗಿಲ್ಲ. ನಾನು ಸುಶಾಂತ್ ಅವರನ್ನು ಪ್ರೀತಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಸುಶಾಂತ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ 'ಯಾವಾಗಲು ನಿನ್ನ ಹೃದಯದಲ್ಲಿ ಇರುತ್ತೇನೆ' ಎಂದು ಬರೆದುಕೊಂಡಿದ್ದರು.

ಬ್ರೇಕ್ ಅಪ್ ಬಗ್ಗೆ ಬಹಿರಂಗ ಪಡಿಸಿದ ಸುಶಾಂತ್

ಬ್ರೇಕ್ ಅಪ್ ಬಗ್ಗೆ ಬಹಿರಂಗ ಪಡಿಸಿದ ಸುಶಾಂತ್

ಕೆಲವೇ ಸಮಯದ ಬಳಿಕ ಅಂಕಿತಾ ಜೊತೆ ಬ್ರೇಕ್ ಅಪ್ ಆಗಿರುವ ಬಗ್ಗೆ ಸುಶಾಂತ್ ಬಹಿರಂಗಪಡಿಸಿದರು. ಇಬ್ಬರ ಬ್ರೇಕ್ ಅಪ್ ಸುದ್ದಿ ಅನೇಕರಿಗೆ ಶಾಕ್ ನೀಡಿತು. ಮದುವೆ ಆಗಲು ನಿರ್ಧರಿಸಿದ್ದ ಈ ಜೋಡಿ ಬೇರೆ ಬೇರೆ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ಸಹ ಬೇಸರಪಟ್ಟುಕೊಂಡಿದ್ದರು. ಇಬ್ಬರು ಮತ್ತೆ ಒಂದಾಗುವಂತೆ ಕೇಳಿಕೊಂಡಿದ್ದರು.

ಸುಶಾಂತ್ ಬಗ್ಗೆ ಅಂಕಿತಾ ಮಾತು

ಸುಶಾಂತ್ ಬಗ್ಗೆ ಅಂಕಿತಾ ಮಾತು

ಇಬ್ಬರು ಬ್ರೇಕ್ ಅಪ್ ಆದ ಬಳಿಕ ಅಕಿಂತಾ ಸಂದರ್ಶನವೊಂದರಲ್ಲಿ ಸುಶಾಂತ್ ಬಗ್ಗೆ ಮಾತನಾಡಿದ್ದರು. "ನಿಮ್ಮ ಮೇಲೆ ತುಂಬಾ ಪರಿಣಾಮ ಬೀರುತ್ತೆ. ಏನಾಗುತ್ತಿದೆ ಎಂದು ನಿನಗೆ ತಿಳಿದಿಲ್ಲ. ಆದರೆ ಎಲ್ಲಾ ಪತ್ರಿಕೆಗಳಲ್ಲಿ ಇದೆ. ನಿಮ್ಮನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇಂದು ನನಗೆ ಏನು ಅನಿಸುವುದಿಲ್ಲ. ವಿಷಯಗಳು ಏನೆ ಇರಲಿ ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ಇದ್ದಾರೆ" ಎಂದು ಹೇಳಿದ್ದರು. ಸದ್ಯ ಸುಶಾಂತ್ ಸಾವಿನ ಬಳಿಕ ಅಂಕಿತಾ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸುಶಾಂತ್ ಸಿಂಗ್ ಖಿನ್ನತೆಗೆ ಒಳಗಾಗುವ ವ್ಯಕ್ತಿಯಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

More from Filmibeat

English summary
Real reason behind Sushant singh and Ankita Lokhande break up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X