ಅನುಷ್ಕಾ ಶರ್ಮಾ ಬಾಯಲ್ಲಿ ಕನ್ನಡ ಪದ: ನಿಜಕ್ಕೂ ಕನ್ನಡ ಬಳಸಿದ್ರಾ ಕೊಹ್ಲಿ ಪತ್ನಿ?

Recommended Video

ಅನುಷ್ಕಾ ಶರ್ಮಾ ಬಾಯಲ್ಲಿ ಕನ್ನಡ ಕೇಳೋಕೆ ಚಂದ | Anushka Sharma

ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ.....ಕನ್ನಡಿಗರಿಗೆ ಉದ್ಯೋಗ ಇಲ್ಲ.... ಹಿಂದಿ ಬೋರ್ಡ್ ಕಿತ್ತು ಹಾಕಿದ್ದಕ್ಕೆ ಜೈಲಿಗೆ ಹಾಕ್ತಾರೆ.....ನಮ್ಮವರೇ ಕನ್ನಡಕ್ಕೆ ಗೌರವ ಕೊಡಲ್ಲ.....ಕನ್ನಡ ನಟರೇ ಕನ್ನಡ ಮಾತನಾಡಲ್ಲ.....ಹೀಗೆ ಕನ್ನಡ ಭಾಷೆಯ ಬಗ್ಗೆ ಅಭಿಯಾನ, ಹೋರಾಟ ಮಾಡುತ್ತಿರುವ ಈ ಸಮಯದಲ್ಲಿ ಕನ್ನಡದವರೇ ಅಲ್ಲದ ಅನುಷ್ಕಾ ಶರ್ಮಾ ಕನ್ನಡ ಪದ ಬಳಸಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದಾರೆ.

ಸಿನಿಮಾಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲು ತೊಡಗಿಸಿಕೊಂಡಿರುವ ಅನುಷ್ಕಾ ಶರ್ಮಾ, ಇತ್ತೀಚಿಗಷ್ಟೆ ಟ್ವಿಟ್ಟರ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪಾಸಿಟೀವ್ ವಿಷ್ಯಗಳ ಬಗ್ಗೆ ಮಾತನಾಡಿರುವ ಅನುಷ್ಕಾ, ಟ್ವಿಟ್ಟರ್ ನಲ್ಲಿ ಕಂಡಿರುವ ಕೆಲವು ಪಾಸಿಟೀವ್ ಟ್ವೀಟ್ ಗಳನ್ನ ಓದಿದ್ದಾರೆ.

1.29 ನಿಮಿಷದ ಈ ವಿಡಿಯೋದಲ್ಲಿ ಐದಾರು ಟ್ವೀಟ್ ಓದಿದ್ದಾರೆ. ಈ ವಿಡಿಯೋ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿದೆ. ಅನುಷ್ಕಾ ಕೂಡ ಪೂರ್ತಿ ಆಂಗ್ಲ ಭಾಷೆಯಲ್ಲೇ ಮಾತನಾಡಿದ್ದಾರೆ. ಕೊನೆಯಲ್ಲಿ 'ದಟ್ಸ್ ಇಟ್' ಎನ್ನುವ ಜಾಗದಲ್ಲಿ 'ಅಷ್ಟೇ' ಎಂದು ಕನ್ನಡದಲ್ಲಿ ಹೇಳಿ ಕೈಮುಗಿದಿದ್ದಾರೆ. ಮುಂದೆ ಓದಿ...

ಅನುಷ್ಕಾ ಬಳಸಿದ್ದು ಕನ್ನಡವೇನಾ?

ಅನುಷ್ಕಾ ಬಳಸಿದ್ದು ಕನ್ನಡವೇನಾ?

ಅನುಷ್ಕಾ ಶರ್ಮಾ 'ಅಷ್ಟೇ' ಎಂಬ ಕನ್ನಡ ಪದ ಬಳಸಿರುವುದರಿಂದ ಈ ವಿಡಿಯೋ ಕನ್ನಡಿಗರ ಗಮನ ಸೆಳೆದಿದೆ. ಎಲ್ಲಾ ಓಕೆ, ಕೊನೆಯಲ್ಲಿ ಅಷ್ಟೇ ಎಂದಿದ್ದೇಕೆ ಎಂದು ಕೆಲವರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಮತ್ತೆ ಕೆಲವರು ನಿಜಕ್ಕೂ ಅನುಷ್ಕಾ 'ಅಷ್ಟೇ' ಎಂದು ಕನ್ನಡದಲ್ಲೇ ಹೇಳಿದ್ರಾ ಎಂದು ಸರ್ಪ್ರೈಸ್ ಆಗಿದ್ದಾರೆ.

ಗೊತ್ತಿದ್ದಿ ಹೇಳಿದ್ರಾ, ಗೊತ್ತಿಲ್ಲದೇ ಹೇಳಿದ್ರಾ

ಗೊತ್ತಿದ್ದಿ ಹೇಳಿದ್ರಾ, ಗೊತ್ತಿಲ್ಲದೇ ಹೇಳಿದ್ರಾ

ಅನುಷ್ಕಾ ಅವರು 'ಅಷ್ಟೇ' ಎಂಬ ಪದದ ಅರ್ಥ ಗೊತ್ತಿದ್ದು ಹಾಗೆ ಹೇಳಿದ್ರಾ ಅಥವಾ ಏನೋ ಹೇಳಲು ಹೋಗಿ ಹಾಗೆ ಹೇಳಿರಬಹುದು ಎಂದು ಯೋಚಿಸಿದರೂ, ಅದು ಉದ್ದೇಶ ಪೂರ್ವಕವಾಗಿ 'ಅಷ್ಟೇ' ಎಂದಂತೆ ಇದೆ. ಕೊನೆಯಲ್ಲಿ ಕೈಮುಗಿದು ಅಷ್ಟೇ ಎಂದಿರುವುದನ್ನ ಗಮನಿಸಿದ್ರೆ ಇದು ಕನ್ನಡ ಪದ ಎಂದು ಗೊತ್ತಿದ್ದೆ ಹೇಳಿದ್ದಾರೆ ಎಂಬುದು ಖಾತ್ರಿಯಾಗಿದೆ.

ಅನುಷ್ಕಾ ಓದಿದ್ದು ಬೆಂಗಳೂರಿನಲ್ಲಿ

ಅನುಷ್ಕಾ ಓದಿದ್ದು ಬೆಂಗಳೂರಿನಲ್ಲಿ

ಅನುಷ್ಕಾ ಶರ್ಮಾ ಅವರಿಗೆ ಕನ್ನಡ ಬರುತ್ತಾ ಎಂದು ಕೇಳಬೇಡಿ. ಅದರ ಬಗ್ಗೆ ನಮಗೂ ಪೂರ್ಣ ಮಾಹಿತಿ ಇಲ್ಲ. ಆದ್ರೆ, ಒಂದಂತೂ ನಿಜಾ. ಅನುಷ್ಕಾ ಶರ್ಮಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಹಾಗಾಗಿ, ಅನುಷ್ಕಾಗೆ ಕನ್ನಡ ಗೊತ್ತಿರುತ್ತೆ ಎಂದು ಊಹಿಸಬಹುದು.

ಅಯೋಧ್ಯೆ ಕುವರಿ, ಬೆಂಗಳೂರಿನ ನಂಟು

ಅಯೋಧ್ಯೆ ಕುವರಿ, ಬೆಂಗಳೂರಿನ ನಂಟು

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದ ಅನುಷ್ಕಾ ಶರ್ಮಾ, ಬೆಂಗಳೂರಿನ ಆರ್ಮಿ ಶಾಲೆಯಲ್ಲಿ ಓದಿದ್ದರು. ನಂತರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅಲ್ಲಿಂದ ಮುಂಬೈಗೆ ಬಂದ ಅನುಷ್ಕಾ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿ, ನಂತರ ಬಾಲಿವುಡ್ ಗೆ ಲಗ್ಗೆಯಿಟ್ಟಿದ್ದಾರೆ.

ವಿರಾಟ್ ಗೂ ಲಿಂಕ್ ಇದೆ

ವಿರಾಟ್ ಗೂ ಲಿಂಕ್ ಇದೆ

ಸೋ, ಶಿಕ್ಷಣವನ್ನ ಬೆಂಗಳೂರಿನಲ್ಲಿ ಕಲಿತ ಹಿನ್ನೆಲೆ ಅನುಷ್ಕಾ ಶರ್ಮಾಗೆ ಕನ್ನಡ ಬರುತ್ತೆ. ಹೀಗಾಗಿ, ಬೆಂಗಳೂರಿನ ಜೊತೆ ಅನುಷ್ಕಾಗೆ ಹೆಚ್ಚು ನಂಟಿದೆ. ಮತ್ತೊಂದೆಡೆ ಕಳೆದ ಒಂದು ದಶಕದಿಂದ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಆಟಗಾರನಾಗಿ ಐಪಿಎಲ್ ಆಡುತ್ತಿದ್ದಾರೆ. ಆಗಲೂ ಪಂದ್ಯಗಳನ್ನ ನೋಡಲು ಅನುಷ್ಕಾ ಬೆಂಗಳೂರಿಗೆ ಬರ್ತಾರೆ.

More from Filmibeat

English summary
Bollywood actress anushka sharma used kannada word in video, when she talked about positivity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X