For Quick Alerts
  ALLOW NOTIFICATIONS  
  For Daily Alerts

  ಮಿತಿಮೀರಿದ ವರ್ತನೆ: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಸ್ಪರ್ಧಿ

  |

  ಬಿಗ್ ಬಾಸ್ ಮನೆಯಲ್ಲಿ ಗಲಾಟೆ, ಬೈಯುವುದು, ಕಿತ್ತಾಡುವುದು ಸಾಮಾನ್ಯ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೆಲ್ಲವೂ ಸ್ವಲ್ಪ ಜೋರಾಗಿಯೇ ಇರುತ್ತೆ. ಕೈ ಕೈ ಮಿಲಾಯಿಸುವ ಹಂತಕ್ಕೂ ಈ ಶೋನಲ್ಲಿ ಘಟನೆಗಳು ಆಗಿವೆ.

  ಇದೀಗ, ಇಂತಹದ್ದೆ ಮಿತಿಮೀರಿದ ವರ್ತನೆ ತೋರಿದ ಸಿದ್ಧಾರ್ಥ್ ಶುಕ್ಲಾ ಅವರನ್ನು ಬಿಗ್ ಬಾಸ್ ಆಯೋಜಕರು ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರೋಮೋವೊಂದು ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿದೆ.

  ಟಾಸ್ಕ್ ಮಾಡುವ ವೇಳೆ ಇತರೆ ಸ್ಪರ್ಧಿಗಳ ಜೊತೆ ವರ್ತಿಸಿದ ರೀತಿ ಸರಿಯಿಲ್ಲ, ಇದರಿಂದ ಮನೆಯವರಿಗೆ ನೋವು ಉಂಟಾಗಿದೆ ಎಂಬ ಕಾರಣ ನೀಡಿ ಬಿಗ್ ಬಾಸ್ ಸಿದ್ಧಾರ್ಥ್ ಶುಕ್ಲಾ ಅವರನ್ನ ಈ ಕೂಡಲೇ ಮನೆಯಿಂದ ಹೊರಹೋಗಿ ಎಂದು ಪ್ರಕಟಿಸಿದೆ.

  ಈ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರೋಮೋ ಅಷ್ಟೆ ಪ್ರಸಾರವಾಗಿದ್ದು, ಇದರಿಂದ ಸಿದ್ಧಾರ್ಥ್ ಶುಕ್ಲಾ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.

  ಇದು ಬಿಗ್ ಬಾಸ್ ಮಾಡಿರುವ ಪ್ಲಾನ್ ಇರಬಹುದು. ಸಿದ್ಧಾರ್ಥ್ ಶುಕ್ಲಾ ಅವರನ್ನ ಸೀಕ್ರೆಟ್ ರೂಂಮಿಗೆ ಕಳುಹಿಸಿರಬಹುದು ಎಂದು ಕೂಡ ಊಹಿಸುತ್ತಿದ್ದಾರೆ. ಈ ಆವೃತ್ತಿಯಲ್ಲಿ ಸಿದ್ಧಾರ್ಥ್ ಶುಕ್ಲಾ ಅವರು ತಮ್ಮ ಸ್ವಭಾವದಿಂದ ಹೆಚ್ಚು ಸುದ್ದಿಯಾಗಿದ್ದು, ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟು ಮಾಡಿದ್ದಾರೆ.

  English summary
  Really, Siddharth Shukla evicted from bigg boss hindi 13 house? promo is very interesting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X