ಡಿವೋರ್ಸ್ ಪಕ್ಕಾ ; ಅದೊಂದು ಕಾರಣಕ್ಕೆ ಐಶ್ವರ್ಯಗೆ ವಿಚ್ಚೇದನ ಕೊಡ್ತಾರಾ ಅಭಿಷೇಕ್ ಬಚ್ಚನ್ ?

ವಿವಾಹ ಮತ್ತು ವಿಚ್ಚೇದನ.. ಬಣ್ಣದ ಪ್ರಪಂಚದಲ್ಲಿ ತೀರಾ ಕಾಮನ್ನು. ಇಲ್ಲಿ ಇವತ್ತು ಮದುವೆಯಾದವರು ನಾಳೆಯೇ ಸೋಡಾ ಚೀಟಿ ನೀಡಬಹುದು, ಅಷ್ಟರ ಮಟ್ಟಿಗೆ ಸಂಬಂಧಗಳು ಇಲ್ಲಿ ಹದಗೆಟ್ಟಿರುತ್ತವೆ.

ಇನ್ನೂ ಇದು ಸೋಶಿಯಲ್ ಮೀಡಿಯಾ ಕಾಲ. ಯಾರ ಮನೆಯಲ್ಲಿ, ಯಾವ ಗೋಡೆಯಲ್ಲಿ ಬಿರುಕು ಮೂಡಿದೆ ಎಂದು ಅಲ್ಯಾರೋ ಕುಳಿತುಕೊಂಡು ಹೇಳುವ ಕಾಲ ಇದು. ಈ ಕಾಲಘಟ್ಟದಲ್ಲಿ ಸಂಸಾರದ ಗುಟ್ಟನ್ನ ಹೆಚ್ಚು ದಿನ ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದಕ್ಕೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಸದ್ಯದ ತಾಜಾ ಉದಾಹರಣೆ.

reason-behind-rift-between-aishwarya-rai-and-abhishek-bachchan

ಹೌದು.. ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಇವತ್ತಲ್ಲ..ನಾಳೆ ದೂರವಾಗಿಯೇ ಆಗ್ತಾರೆ ಎಂದು ಅನೇಕರು ಅನೇಕ ದಿನಗಳಿಂದ ಕಾಯ್ತಾನೇ ಇದ್ದಾರೆ. ಆದರೆ ಆ ಕಾಲ ಕೂಡಿ ಬರ್ತಿಲ್ಲ. ಯಾಕೆಂದರೆ ಅಭಿಷೇಕ್ ಮತ್ತು ಐಶ್ವರ್ಯ ತಮ್ಮಿಬ್ಬರ ನಡುವೆ ಸಂಬಂಧ ಸರಿಯಾಗಿಯೇ ಇದೆ ಎಂದು ಸರ್ಟಿಫಿಕೇಟ್ ಹಿಡಿದುಕೊಂಡು ಕಾಲ ಕಾಲಕ್ಕೆ ಪ್ರತ್ಯಕ್ಷರಾಗ್ತಾನೇ ಇದ್ದಾರೆ.

ಆದರೂ ಕೂಡ ಅನೇಕರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಿರುವ ಅನುಮಾನ ಇನ್ನೂ ಇದೆ. ಯಾಕೆಂದರೆ ಜುಹುದಲ್ಲಿರುವ ಅಮಿತಾಭ್ ಅವರ ಜಲ್ಸಾ ಮನೆಯಲ್ಲಿ ಆಗಾಗ ಜ್ವಾಲೆ ಅನೇಕರಿಗೆ ಕಾಣ್ತಾನೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ಜಲ್ಸಾ ಮುಖ್ಯದ್ವಾರವನ್ನ ದಾಟಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದೂರವಾಗಲು ಕಾರಣವೊಂದು ಅಲ್ಲಿರುವ ಸಿನಿಪಂಡಿತರ ಕಿವಿವರೆಗೆ ತಲುಪಿದೆ

reason-behind-rift-between-aishwarya-rai-and-abhishek-bachchan

ಹೌದು.. ಅಸಲಿಗೆ ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಎಂಬ ಘೋಷವಾಕ್ಯ ಮೊದಲಿಂದ ಅಭಿಷೇಕ್ ಬಚ್ಚನ್ ತಲೆಯಲ್ಲಿ ಅಚ್ಚೊತ್ತಿದೆ. ಇದಕ್ಕೆ ಪೂರಕವಾಗಿ ಹೆಚ್ಚೇನ್ ಇಲ್ಲ ಈಗ ಎರಡು ವರ್ಷದ ಹಿಂದೆ ತಮಗೆ ಇಬ್ಬರು ಮಕ್ಕಳು ಬೇಕೆಂದು ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ಹೇಳಿದ್ದು ಇದೆ. ಆದರೆ.. ಐಶ್ವರ್ಯ ರೈ ಇದಕ್ಕೆ ತದ್ವಿರುದ್ದ. ಇನ್ನೊಂದು ಮಗು ಸಾಕಲು ಬೇಕಾದ ತಾಳ್ಮೆಯಾಗಲಿ, ಶಕ್ತಿಯಾಗಲಿ ತನಗಿಲ್ಲ ಎಂಬ ಅರಿವು ಐಶ್ವರ್ಯ ಗೆ ಸ್ಪಷ್ಟವಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಗೆ ಜನ್ಮಕೊಟ್ಟಿದ್ದು 38ರ ಪ್ರಾಯದಲ್ಲಿ. ಸದ್ಯಕ್ಕೆ ಐಶ್ವರ್ಯ ಅವರ ವಯಸ್ಸು 50. ಈ ಕಾರಣಕ್ಕೆ ಇನ್ನೊಂದು ಮಗು ಬೇಡ ಅನ್ನುವ ಮಾತನ್ನ ಐಶ್ವರ್ಯ ಹೇಳ್ತಿದ್ದಾರೆ. ಆದರೆ ಅಭಿಷೇಕ್ ಬಚ್ಚನ್ ಅವರದ್ದು ಹಠ ಅಂದರೆ ಹಠ .‌ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಇದೇ ಪ್ರಮುಖ ಕಾರಣ ಎನ್ನುವ ಮಾತು ಸದ್ಯಕ್ಕೆ ಮುಂಬೈನ ಎಲ್ಲೆಡೆ ಕೇಳಿ ಬರುತ್ತಿದೆ

reason-behind-rift-between-aishwarya-rai-and-abhishek-bachchan

ಈ ಎಲ್ಲ ಅಂತೆ ಕಂತೆಗಳಿಗೆ ಪುಷ್ಠಿ ನೀಡುವಂತೆ, ಐಶ್ವರ್ಯ ರೈ ಮತ್ತು ಅಭಿಷೇಕ್ ಸಹೋದರಿ ಶ್ವೇತಾ ನಡುವೆ ಸಂಬಂಧ ಸರಿ ಇಲ್ಲ ಅನ್ನುವ ಮಾತು ಕೇಳಿ ಬರುತ್ತಿದೆ. ಇದು ಸಾಲದಕ್ಕೆ ಶ್ವೇತಾ ಅವರ ಮಗಳು ನವ್ಯಾ ಅವರನ್ನ ಐಶ್ವರ್ಯ ಕಡೆಗಣಿಸಿ ತಮ್ಮ ಪುತ್ರಿ ಆರಾಧ್ಯ ಜೊತೆ ಪುಟ್ಭಾಲ್ ಮ್ಯಾಚ್ ನೋಡಲು ತೆರಳಿದ ವಿಡಿಯೋ ಕೂಡ ಒಂದು ವೈರಲ್ ಆಗ್ತಿದೆ.

ಒಟ್ನಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ವಿಚ್ಚೇದನದ ವದಂತಿಗೆ ಮತ್ತೊಮ್ಮೆ ಜೀವ ಬಂದಿದೆ. ಇಬ್ಬರೂ ಯಾವ ಕ್ಷಣದಲ್ಲಾದರೂ ದೂರವಾಗಬಹುದು ಅನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಇತ್ತೀಚಿನ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಅಭಿಷೇಕ್ ಬಚ್ಚನ್ ಎರಡು ವರ್ಷದ ಹಿಂದೆ ನೀಡಿದ್ದ ಸಂದರ್ಶನದ ತುಣುಕು ಕೂಡ ವೈರಲ್ ಆಗುತ್ತಿದೆ.

More from Filmibeat

English summary
According To Latest Reports Second Child Became The Reason For Rift Between Aishwarya Aai And Abhishek Bachchan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X