For Quick Alerts
  ALLOW NOTIFICATIONS  
  For Daily Alerts

  'ವಿಕ್ರಂ ವೇದ' ರಿಮೇಕ್‌ನಿಂದ ಹೃತಿಕ್ ರೋಷನ್ ಔಟ್; ಕಾರಣವೇನು?

  |

  ದಕ್ಷಿಣ ಭಾರತದ ಅನೇಕ ಸೂಪರ್ ಹಿಟ್ ಚಿತ್ರಗಳು ಹಿಂದೆಗೆ ರಿಮೇಕ್ ಆಗುತ್ತಿವೆ. ಈಗಾಗಲೇ ಸಾಕಷ್ಟು ಚಿತ್ರಗಳು ಹಿಂದಿಯಲ್ಲಿ ತಯಾರಾಗಿ ಸೂಪರ್ ಸಕ್ಸಸ್ ಆಗಿದ್ದಾರೆ. ತಮಿಳಿನ ಸೂಪರ್ ಹಿಟ್ ವಿಕ್ರಂ ವೇದ ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ ಎನ್ನುವುದು ಹೊಸ ವಿಚಾರವೇನಲ್ಲ.

  ಚಿತ್ರದಲ್ಲಿ ನಟ ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮೇ ತಿಂಗಳ ಅಂತ್ಯದಿಂದ ಚಿತ್ರೀಕರಣ ಪ್ರಾರಂಭ ಮಾಡಲು ಚಿತ್ರತಂಡ ಸಜ್ಜಾಗಿತ್ತು. ಹೃತಿಕ್ ಕೂಡ ಉತ್ಸುಕರಾಗಿದ್ದರು. ಲಾಕ್ ಡೌನ್‌ನಿಂದ ಚಿತ್ರೀಕರಣ ತಡವಾಗುತ್ತಿತ್ತು. ಅಷ್ಟರಲ್ಲೇ ಈಗ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

  ಮಹತ್ವಾಕಾಂಕ್ಷೆಯ 'ರಾಮಾಯಣ' ಸಿನಿಮಾದಿಂದ ಹಿಂದೆ ಸರಿದ ಹೃತಿಕ್ ಜಾಗಕ್ಕೆ ಸೌತ್ ಸ್ಟಾರ್ ಎಂಟ್ರಿ?ಮಹತ್ವಾಕಾಂಕ್ಷೆಯ 'ರಾಮಾಯಣ' ಸಿನಿಮಾದಿಂದ ಹಿಂದೆ ಸರಿದ ಹೃತಿಕ್ ಜಾಗಕ್ಕೆ ಸೌತ್ ಸ್ಟಾರ್ ಎಂಟ್ರಿ?

  ವಿಕ್ರಂ ವೇದ ರಿಮೇಕ್‌ನಿಂದ ಹೃತಿಕ್ ರೋಷನ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೃತಿಕ್ ದಿಢೀರನೆ ಮನಸ್ಸು ಬದಲಾಯಿಸಲು ಕಾರಣವೇನು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಡೇಟ್ ಸಮಸ್ಯೆ ಎನ್ನುವ ಮಾತು ಕೇಳಿ ಬರುತ್ತಿದೆ.

  ದಿ ನೈಟ್ ಮ್ಯಾನೇಜರ್ ಚಿತ್ರದಲ್ಲಿ ಹೃತಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹೃತಿಕ್ ನಟನೆಯ ಮೊದಲ ಒಟಿಟಿ ಸರಣಿಯಾಗಿದೆ. ಹಾಗಾಗಿ ವಿಕ್ರಂ ವೇದ ಚಿತ್ರದಿಂದ ಹೊರಗುಳಿದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡವಾಗಲಿ ಅಥವಾ ಹೃತಿಕ್ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

  ಮಂಗಳಮುಖಿಯರಿಗೆ ದಿನಸಿ ಕಿಟ್ ಗಳನ್ನು ನೀಡಿದ ನಟಿ ರಾಧಿಕಾ ಕುಮಾರಸ್ವಾಮಿ | Filmibeat Kannada

  2017ರಲ್ಲಿ ತೆರೆಗೆ ಬಂದ ವಿಕ್ರಂ ವೇದ ಚಿತ್ರದಲ್ಲಿ ನಟ ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ನಟ ಹೃತಿಕ್ ವಿಕ್ರಂ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದರು. ಆದರೀಗ ಚಿತ್ರದಿಂದ ಹಿಂದೆ ಸರಿದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

  English summary
  Bollywood Actor Hrithik Roshan opted out of Vikram Vedha Hindi remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X